ಗಣೇಶೋತ್ಸವಕ್ಕೆ BBMP ಹೊಸ ರೂಲ್ಸ್​; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಗಣೇಶೋತ್ಸವಕ್ಕೆ BBMP ಹೊಸ ರೂಲ್ಸ್​; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಬೆಂಗಳೂರು: ಬೆಂಗಳೂರಲ್ಲಿ ‘ಗಣೇಶ ಹಬ್ಬ ಆಚರಣೆ’ಗೆ ಷರತ್ತು ವಿಧಿಸಿರೋದಕ್ಕೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೀಗ ಕೆಲವು ಸಂಘಟನೆಗಳು ಬಿಬಿಎಂಪಿಗೆ ಮುತ್ತಿಗೆ ಹಾಕಿವೆ.

blank

ಗಣೇಶನ ಮೂರ್ತಿಗೆ ನಿಗದಿತ ಎತ್ತರ ವಿಧಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು, ಹಿಂದೂ ಧಾರ್ಮಿಕತೆಗೆ ಹಸ್ತಕ್ಷೇಪ ಮಾಡಲು ಯಾರಿಗೂ ಅಧಿಕಾರವಿಲ್ಲ. ಬಿಬಿಎಂಪಿ ಏನೇ ಆದೇಶ ಹೊರಡಿಸಿದರೂ‌ ಸಾಂಪ್ರದಾಯಿಕ ರೀತಿಯಲ್ಲೇ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

blank

ನಾವು ಯಾವುದೇ ಕಾರಣಕ್ಕೂ ಸರ್ಕಾರದ, ಬಿಬಿಎಂಪಿಯ ಆದೇಶ ಪಾಲಿಸುವುದಿಲ್ಲ. ಗಣಪತಿಯ ಎತ್ತರ ಇಷ್ಟೇ ಇರಬೇಕು ಅಂತ ಡಿಸೈಡ್ ಮಾಡೋಕೆ ಇವರು ಯಾರು? ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತುಘಲಕ್ ದರ್ಬಾರ್ ಮಾಡ್ತಿದ್ದಾರೆ. ಹಿಂದೂ‌ ಧಾರ್ಮಿ‌ಕ ಆಚರಣೆ ಬಗ್ಗೆ ಇವರಿಗೆ ಸಹಿಸೋಕೆ ಆಗಲ್ಲ. ಏನೇ ಅದರೂ ನಾವು ಸಾಂಪ್ರದಾಯಿಕವಾಗಿ ಹಬ್ಬ ಆಚರಣೆ ಮಾಡುವುದನ್ನು ನಿಲ್ಲಿಸಲ್ಲ.

ಪ್ರಕಾಶ್ ರಾಜ್, ಗಣೇಶ ಉತ್ಸವ ಆಚರಣೆ ಸಮಿತಿ ಮುಖಂಡ‌

ಅಲ್ಲದೇ ಈಗಾಗಲೇ ಹೊರಡಿಸಿರುವ ಆದೇಶವನ್ನ ಹಿಂಪಡೆದು ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬ ಮಾಡಲು ಅವಕಾಶ ಮಾಡಿಕೊಡಬೇಕು ಅಂತಾ ಭಜರಂಗದಳ, ವಿಹೆಚ್‌ಪಿ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯ ಮಾಡಿವೆ. ಮಾತ್ರವಲ್ಲ ಹಿಂದು ವಿರೋಧಿ BBMP ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.

blank

Source: newsfirstlive.com Source link