ಪ್ಯಾರಾ ಒಲಿಂಪಿಕ್ಸ್​: ದೇಶದ ಕೀರ್ತಿ ಪತಾಕೆ ಹಾರಿಸಿದ ಹೀರೋಗಳಿಗೆ ಪ್ರಧಾನಿ ಅಭಿನಂದನೆ

ಪ್ಯಾರಾ ಒಲಿಂಪಿಕ್ಸ್​: ದೇಶದ ಕೀರ್ತಿ ಪತಾಕೆ ಹಾರಿಸಿದ ಹೀರೋಗಳಿಗೆ ಪ್ರಧಾನಿ ಅಭಿನಂದನೆ

ನವದೆಹಲಿ: ಪ್ಯಾರಾ ಒಲಿಂಪಿಕ್ಸ್ -2020​ನಲ್ಲಿ ಭಾರತದ ಕೀರ್ತಿ ಪತಾಕೆಯನ್ನ ಹಾರಿಸಿದ್ದ ಕ್ರೀಡಾಪಟುಗಳನ್ನ  ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾಗಿ ಅಭಿನಂದಿಸಿದರು. ಪ್ಯಾರಾ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳು ಬಂದಿವೆ.

Image

ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ಮೋದಿ ಕ್ರೀಡಾಪಟುಗಳ ಜೊತೆ ಕೆಲ ಕಾಲ ಚರ್ಚೆ ನಡೆಸಿದರು. ಈ ಹಿಂದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿದ್ದವರನ್ನೂ ಕೂಡ ಮೋದಿ ಅಭಿನಂದಿಸಿದ್ದರು.

Image

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ 12 ಪದಕವನ್ನ ಗೆದ್ದಿತ್ತು. ಇನ್ನು ಮೊನ್ನೆಯಷ್ಟೇ ಮುಕ್ತಾಯಗೊಂಡಿರುವ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಭಾರತ ಒಟ್ಟು 19 ಪದಕವನ್ನ ಗೆದ್ದು ಬೀಗಿದೆ.

Source: newsfirstlive.com Source link