ನಕಲಿ ಗನ್ ತೋರಿಸಿ ಪ್ರಯಾಣಿಕರನ್ನು ಬೆದರಿಸ್ತಿದ್ದ ಯುಪಿ, ಬಿಹಾರ ಆರೋಪಿಗಳು ಅಂದರ್

ನಕಲಿ ಗನ್ ತೋರಿಸಿ ಪ್ರಯಾಣಿಕರನ್ನು ಬೆದರಿಸ್ತಿದ್ದ ಯುಪಿ, ಬಿಹಾರ ಆರೋಪಿಗಳು ಅಂದರ್

ಬೆಂಗಳೂರು: ನಕಲಿ ಗನ್ ತೋರಿಸಿ ರೈಲ್ವೆ ಪ್ರಯಾಣಿಕರನ್ನು ಬೆದರಿಸಿ ಹಣ ದೋಚುತ್ತಿದ್ದ ಖದೀಮರನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ರವಿಚಂದ್ ಹಾಗೂ ಉತ್ತರಪ್ರದೇಶ ಮೂಲದ ಸಂದೀಪ್ ಬಂಧಿತ ಆರೋಪಿಗಳು ಅಂತ ತಿಳಿದು ಬಂದಿದೆ. ರೈಲು ಕ್ರಾಸಿಂಗ್ ಮಾಡುತ್ತಿದ್ದ ವೇಳೆ ರೈಲುಗಳಿಗೆ ಎಂಟ್ರಿಕೊಡ್ತಿದ್ದ ಆರೋಪಿಗಳು, ಒಮ್ಮೆ ಎಂಟ್ರಿಕೊಟ್ರೆ ರೈಲಿನ ಒಂದು ಕಂಪಾರ್ಟ್ಮೆಂಟ್ ನಲ್ಲಿದ್ದ ಜನರ ಬಳಿ ಹಣ, ಚಿನ್ನ ದೋಚುತ್ತಿದ್ರು. ಈ ಬಗ್ಗೆ ಬೆಂಗಳೂರು ರೈಲ್ವೆ ಎಸ್.ಪಿ ಸಿರಿಗೌರಿ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಬಂಧಿತರಿಂದ 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ನಕಲಿ ಗನ್ ವಶಕ್ಕೆ ಪಡೆದುಕೊಳ್ಳಲಾಗಿದೆ.

Source: newsfirstlive.com Source link