ತಲ್ವಾರ್​​​​​ನಿಂದ ಕೇಕ್ ಕಟ್ ಮಾಡಿ ಹುಚ್ಚಾಟ; ಯುವಕನ ವಿರುದ್ಧ ಬಿತ್ತು ಕೇಸ್

ತಲ್ವಾರ್​​​​​ನಿಂದ ಕೇಕ್ ಕಟ್ ಮಾಡಿ ಹುಚ್ಚಾಟ; ಯುವಕನ ವಿರುದ್ಧ ಬಿತ್ತು ಕೇಸ್

ಧಾರವಾಡ: ತಲ್ವಾರ್​​​​​ನಿಂದ ಕೇಕ್ ಕಟ್ ಮಾಡಿ ಯುವಕನೋರ್ವ ಬರ್ತಡೇ ಆಚರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಪ್ರವೀಣ ಸಂದೀಮನಿ ಎನ್ನುವ ಯುವಕ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಬರ್ತಡೇ ಆಚರಿಸಿದ್ದಾನೆ. ಪ್ರವೀಣ್ ತನ್ನದೇ ಸಾಯಿ ದಾಬಾದಲ್ಲಿ ಕಳೆದ ರಾತ್ರಿ ಬರ್ತಡೇ ಆಚರಿಸಿಕೊಂಡಿದ್ದಾನೆ. ಈ ವೇಳೆ ತಲ್ವಾರ್ ಕೇಕ್​ ಕಟ್ ಮಾಡಿ ಸಂಭ್ರಮಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link