ಐಎಎಫ್​​​ನಿಂದ ರಾ.ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಡ್ರಿಲ್​​​.. ಐತಿಯಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ

ಐಎಎಫ್​​​ನಿಂದ ರಾ.ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಡ್ರಿಲ್​​​.. ಐತಿಯಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರನ್ನು ಹೊತ್ತ ಎ ಸಿ-130ಜೆ ಸೂಪರ್ ಹರ್ಕ್ಯುಲಸ್ ಟ್ರಾನ್ಸ್​ಪೋರ್ಟ್​ ಏರ್​ಕಾರ್ಫ್ಟ್​​ ರಾಜಸ್ಥಾನದ ಬರ್ಮರ್​​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿದ್ದು, ಆ ಮೂಲಕ ಯುದ್ಧವಿಮಾನಗಳ ಏಮಜೆರ್ಸಿ ಲ್ಯಾಂಡಿಂಗ್​​ಗೆ ಅವಕಾಶವಿರುವ ರಾಷ್ಟ್ರೀಯ ಹೆದ್ದಾರಿಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ.

ಇಂದು ಹರ್ಕ್ಯುಲಸ್ ಟ್ರಾನ್ಸ್​ಪೋರ್ಟ್​ ಏರ್​ಕಾರ್ಫ್ಟ್ ಜೊತೆಗೆ ಫೈಟರ್​​ ಏರ್​​ಕಾರ್ಫ್ಟ್​​​ಗಳಾದ ಜಾಗ್ವಾರ್ಸ್ ಮತ್ತು ಸುಖೋಯ್ ಎಸ್​​ಯು-30 ಎಂಕೆಐ ಕೂಡ ಲ್ಯಾಂಡ್​ ಮಾಡಲಾಯ್ತು. ರಾಷ್ಟ್ರೀಯ ಹೆದ್ದಾರಿಗಳು ಮಿಲಿಟರಿ ಕಾರ್ಯಾಚರಣೆ ಅಗತ್ಯವಿರುವ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆಯ ಬಿಪಿನ್​ ರಾವತ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

blank

ದೇಶದಲ್ಲಿ ಒಟ್ಟಾರೆ 12 ರಾಷ್ಟ್ರೀಯ ಹೆದ್ದಾರಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​​ವೇ ಅನ್ನು ಮಿಲಿಟರಿ ಕಾರ್ಯಾಚರಣೆ ಅಗತ್ಯವಿರುವ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ಇಂದು ಉದ್ಘಾಟನೆಯಾಗಿರುವ ಎನ್​​ಎಚ್​​​-925ಎ ಬರ್ಮರ್​ ರಾಷ್ಟ್ರೀಯ ಹೆದ್ದಾರಿಯ ಮೂರು ಕಿ.ಮೀ ದೂರ ಅಗತ್ಯ ಸೌಲಭ್ಯಗಳನ್ನು ಹೊಂದಿದೆ. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಸರ್ವೀಸ್​ ರಸ್ತೆಗಳನ್ನು ಸಾಮಾನ್ಯ ವಾಹನಗಳ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

https://twitter.com/rajnathsingh/status/143584273578146611

 

Source: newsfirstlive.com Source link