ವಿಕ್ರಾಂತ್​ ರೋಣನ ಅಡ್ಡದಲ್ಲಿ ಬೇಬಿ ಆರಾಧ್ಯ -ಕಿಚ್ಚನಿಂದ ಆರಾಧ್ಯಗೆ ಸಿಕ್ತು ಫುಲ್​ ಮಾರ್ಕ್ಸ್‌

ವಿಕ್ರಾಂತ್​ ರೋಣನ ಅಡ್ಡದಲ್ಲಿ ಬೇಬಿ ಆರಾಧ್ಯ -ಕಿಚ್ಚನಿಂದ ಆರಾಧ್ಯಗೆ ಸಿಕ್ತು ಫುಲ್​ ಮಾರ್ಕ್ಸ್‌

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಈಗ ನೋಡುಗರ ಫೇವರೆಟ್​. ಕಳೆದ ನಾಲ್ಕು ದಿನದಿಂದ ನಂಬರ್ ಒನ್ ಟ್ರೆಂಡಿಂಗ್ ಗದ್ದುಗೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಟೀಸರ್​​​ನೋಳ್ ಒಂದು ಕ್ಯೂಟ್ ಧ್ವನಿ ಮೇಳೈಸಿದೆ. ಯಾವುದು ಆ ಧ್ವನಿ ಎಂದು ಹುಡುಕುತ್ತಾ ಹಾಲಿವುಡ್​​​​ನದ್ದು ಅಥವಾ ಅಕ್ಕ ಪಕ್ಕದ್ ರಾಜ್ಯದ ಅಂತ ಊಹಿಸುತ್ತಿದ್ದ ನಮಗೆ ಸಿಕ್ಕ ಉತ್ತರ ಬೇಬಿ ಆರಾಧ್ಯ.. ಯಾರು ಆ ಪುಟ್ಟ ಪೋರಿ.. ಹಾಗಾದ್ರೆ ಈ ಸ್ಟೋರಿ ಓದಿ.

ಬಾದ್​ ಶಾ ಕಿಚ್ಚ ಸುದೀಪ್​ ನಟನೆಯ ವಿಕ್ರಾಂತ್​ ರೋಣನ ತೋರಣ ದೇಶ ಬಿಟ್ಟು ವಿದೇಶಕ್ಕೆ ಹೋಗಿ ಘಮ ಘಮಿಸುವಂತೆ ಮಾಡ್ತಿದೆ. ಸಿನಿಮಾದಲ್ಲಿ ಸ್ಟಾರ್​ ನಟರ ದಂಡೇ ಇದ್ದು, ಪ್ರತಿಯೊಬ್ಬರ ಹುಟ್ಟು ಹಬ್ಬದ ವಿಶೇಷವಾಗಿ ಒಂದು ಪೋಸ್ಟರ್​ ಬಿಡುಗಡೆ ಮಾಡಿ ಇಂಪ್ರೇಸ್​​ ಮಾಡ್ತಿದ್ದಾರೆ ನಿರ್ದೇಶಕ ಅನೂಪ್​ ಭಂಡಾರಿ. ಇದೇ ತಿಂಗಳ 2 ನೇ ತಾರೀಖು ಬಾದ್​ ಶಾ ಕಿಚ್ಚಾ ಸುದೀಪ್​ ಬರ್ತ್​​ಡೇಗು ಒಂದು ಉಡುಗೊರೆ ಬಿಡುಗಡೆಯಾಗಿದೆ. ಹಾಲಿವುಡ್​ ರೇಂಜ್​​ನಲ್ಲಿರೋ ಟೀಸರ್​ ಈಗ ಎಲ್ಲಾ ದಾಖಲೆಗಳನ್ನು ಉಡೀಸ್​ ಮಾಡ್ತಿದೆ. ವಿಕ್ರಾಂತ್​ ರೋಣನ ಆರ್ಭಟವನ್ನು 1 ಕೋಟಿಗೂ ಅಧಿಕ ಜನ ನೋಡಿ ಬೆಕ್ಕಸ ಬೆರಗಾಗಿದ್ದಾರೆ.

blank

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಆರಾಧ್ಯ ಡೆವಿಲ್​​ ವಾಯ್ಸ್​
ಸುದೀಪ್​ ಹುಟ್ಟು ಹಬ್ಬಕೆ ಬಿಡುಗಡೆ ಮಾಡಿದ ಟೀಸರ್​ ಈಗ ಸೋಶಿಯಲ್​ ಸಾಗರದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಅದು ಕಿಚ್ಚ ಸುದೀಪ್​ ಇರೋ ಫ್ಯಾನ್​ ಫಾಲೋವಿಂಗ್​ ಗೆ ಒಂದು ಸ್ಮಾಲ್​ ಎಗ್ಸಾಂಪಲ್​ ಅಷ್ಟೇ. ಈ ಟೀಸರ್​ನ ​ ಮತ್ತೊಂದು ವಿಶೇಷ ಅಂದ್ರೆ ಕ್ಯೂಟ್ ವಾಯ್ಸ್​. ಕಿಚ್ಚನ ಬರ್ತ್​ಡೇಗೆ ವಿಶೇಷವಾಗಿ ಹೊರಬಂದ ಟೀಸರ್​ನಲ್ಲಿ ಒಂದು ಕ್ಯೂಟ್​ ಅಂಡ್​ ಹಾರರ್ ಡೆವಿಲ್​ ವಾಯ್ಸ್​ ಒಂದು ಬರುತ್ತದೆ. ಅದು ಯಾರದ್ದು ಎಂದು ವಿಚಾರಿಸಿದಾಗ ಸಿಕ್ಕ ಉತ್ತರ ಬೇಬಿ ಆರಾಧ್ಯ.

ಬಹುನಿರೀಕ್ಷಿತ ವಿಕ್ರಾಂತ್​ ರೋಣ ಸಿನಿಮಾಗೇ ಬೇಬಿ ಆರಾಧ್ಯ ಆಯ್ಕೆ ಆಗಿದ್ದು ಹೇಗೆ? ನಿರ್ದೇಶಕ ಅನೂಪ್​ ಭಂಡಾರಿ ಮತ್ತು ಕಿಚ್ಚ ಸುದೀಪ್​ ಜೊತೆಗೆ ಇದ್ದ ಆ ದಿನಗಳ ಬಗ್ಗೆ, ವಾಯ್ಸ್​ ಡಬ್ಬಿಂಗ್​ ಮಾಡುವಾಗ ಆದ ಅನುಭವವನ್ನು ಈ ಪುಟ್ಟ ಬಾಲಕಿ ರಿವೀಲ್ ಮಾಡಿದ್ದಾರೆ.

ಅನಂತ್​ ನಾಗ್​ ಜೊತೆ ಮೊದಲ ಸಿನಿಮಾ
25 ಸಿನಿಮಾಗಳಲ್ಲಿ ನಟಿಸಿರೋ ಸ್ಟಾರ್ ಬಾಲ ನಟಿ
ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಬೇಬಿ ಆರಾದ್ಯಗೆ ಇನ್ನು 7 ವರ್ಷ. ಆದ್ರೆ ಸಾಧನೆ ಮಾತ್ರ ಏಳು ಬಟ್ಟದಷ್ಟು. ಇಲ್ಲಿವರೆಗೆ 25 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಸಿನಿಮಾ ಕವಲು ದಾರಿಯಲ್ಲಿ ಹಿರಿಯ ನಟ ಅನಂತ್​ ನಾಗ್​ ಜೊತೆ ನಟಿಸಿದ್ಲು ಆರಾಧ್ಯ.

blank

26 ಸಿನಿಮಾ, 27 ಆ್ಯಡ್ಸ್​, 5 ಧಾರಾವಾಹಿ, ಶಾರ್ಟ್​ ಮೂವಿಗಳು, ಮಾಡೆಲಿಂಗ್​ ಹೀಗೇ ಸಾಗುತ್ತಾ ಹೋಗುತ್ತೆ ಬೇಬಿ ಆರಾಧ್ಯಾಳ ಸಾಧನೆ …ಈ ಎಲ್ಲಾ ಸಾಧನೆಗೆ ಸಿಕ್ಕ ಪುರಸ್ಕಾರಗಳು ಕೂಡ ಆರಾಧ್ಯಾಳ ಸಾಧನೆಗೆ ಪ್ರೋತ್ಸಾಹ ನೀಡುತ್ತದೆ.. ಪ್ರಜ್ವಲ್​ ದೇವರಾಜ್​ ನಟನೆ ಜಂಟಲ್​ ಮನ್ ಸಿನಿಮಾದ ನಟನೆಗೆ ಬೆಸ್ಟ್​ ಸಪೋರ್ಟಿಂಗ್​ ಅವಾರ್ಡ್​ ಕೂಡ ದೊರಕಿದೆ.

ಸಂಚಾರಿ ವಿಜಯ್ ಅವರನ್ನ ನೆನೆದ ಬೇಬಿ ಆರಾಧ್ಯ
ಜಂಟಲ್​ಮನ್​ ಸಿನಿಮಾದಲ್ಲಿ ದಿವಂಗತ ಸಾಂಚಾರಿ ವಿಜಯ್​ ಜೊತೆ ನಟಿಸಿದ್ದು, ನನಗೆ ಸಂಚಾರಿ ಸಂಚಾರಿ ವಿಜಯ್​ ಅಣ್ಣ ತುಂಬಾ ಚೆನ್ನಾಗಿ ಹೇಳಿ ಕೊಡ್ತಿದ್ರು..ನನಗೆ ಅವಾರ್ಡ್​ ಬಂದಾಗ ಮುತ್ತ ಕೊಟ್ಟ ವಿಶ್ ಮಾಡಿದ್ರು..ಆದ್ರೆ ಅವರು ನಮ್ಮ ಜೊತೆ ಇಲ್ಲ ಅವರನ್ನು ತುಂಬಾ ಮಿಸ್​ ಮಾಡ್ಕೋತೀನಿ ಅಂತ ಆರಾಧ್ಯ ನೆನಪು ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ವಿಕ್ರಾಂತ್ ರೋಣ ​ಸಿನಿಮಾದ ಮೂಲಕ ಸುದೀಪ್​ರಂತೆ ಆರಾಧ್ಯ ಕೂಡ ಜನರ ಮಾನಸದಲ್ಲಿ ಮನೆ ಮಾತಾಗಲಿ..ವಿಕ್ರಾಂತ್​ ರೋಣ ಸಿನಿಮಾದ ಮೂಲಕ ಆರಾಧ್ಯ ಮತ್ತಷ್ಟು ಮಗದಷ್ಟು ಸಿನಿಮಾಗಳು ಈ ಪುಟ್ಟ ಪೋರಿ ಕೈ ಸೇರಲಿ ಎಂಬುದು ಚಿತ್ರ ಪ್ರೇಮಿಗಳ ಆರೈಕೆ.

blank

Source: newsfirstlive.com Source link