‘ಮೇಯರ್ ಚುನಾವಣೆಗೆ ದೇವೇಗೌಡರ ಬಳಿ ಬೆಂಬಲ ಕೇಳಿದ್ದೇನೆ’ -ಮಲ್ಲಿಕಾರ್ಜುನ ಖರ್ಗೆ

‘ಮೇಯರ್ ಚುನಾವಣೆಗೆ ದೇವೇಗೌಡರ ಬಳಿ ಬೆಂಬಲ ಕೇಳಿದ್ದೇನೆ’ -ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ನಾವು 27 ಸ್ಥಾನವನ್ನ ಗೆದ್ದಿದ್ದೇವೆ. ಅವರು 23 ಸ್ಥಾನ ಗೆದ್ದಿದ್ದಾರೆ, ಅವರು ಬೇರೆ ಮಾರ್ಗದಲ್ಲಿ ಹೊರಟಿದ್ದಾರೆ. ದೇವೇಗೌಡರ ಜೊತೆ ನಾನು‌ ಮಾತನಾಡಿದ್ದೇನೆ, ಜಾತ್ಯಾತೀತ ಪಕ್ಷಕ್ಕೆ ಬೆಂಬಲಕೊಡಿ ಎಂದಿದ್ದೇನೆ ಅಂತಾ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅವರು ತಮ್ಮ ಪಕ್ಷದ ಮುಖಂಡರು ಹಾಗೂ ಕುಮಾರಸ್ವಾಮಿ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ನಮಗೆ ವಿಶ್ವಾಸವಿದೆ, ಅವರು ಸಹಾಯ ಮಾಡ್ತಾರೆ. ನಾವು ಅವರ ಬಳಿ ಕೇಳಿಕೊಂಡಿದ್ದೇವೆ, ಸೆಕ್ಯುಲರ್ ಪಾರ್ಟಿಗಳು ಒಂದಾಗಬೇಕು ಅಂತ ಕೇಳಿದ್ದೇನೆ ಎಂದರು.

ಇನ್ನು ಜೆಡಿಎಸ್​ಗೆ ಮೇಯರ್ ಸ್ಥಾನ ಕೊಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ.. ಅದರ ಬಗ್ಗೆ ನಾನು ಮಾತನಾಡಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಮೆಜಾರಿಟಿ ಕಾಂಗ್ರೆಸ್​ಗೆ ಬಂದಿದೆ, ಆದ್ರೆ ಬಿಜೆಪಿ ಅಧಿಕಾರ ಹಿಡಿಯಲು ನೋಡುತ್ತಿದೆ. ಜನ ಬೆಂಬಲ ‌ನಮಗಿದೆ, ಜಾತ್ಯಾತೀತ ಪಕ್ಷಗಳು ಒಂದಾಗಬೇಕು. ಈ ನಿಟ್ಟಿನಲ್ಲಿ ದೇವೇಗೌಡರ ಜೊತೆ ಮಾತನಾಡಿದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂದರು.

Source: newsfirstlive.com Source link