‘ಪುಷ್ಪ’ ಫಿಲ್ಮ್ ಟೀಮ್​ಗೆ ಮತ್ತೆ ವನವಾಸ ಶುರು.. ಕಾಡಿನ ಕಡೆ ಮುಖ ಮಾಡಿದ ಚಿತ್ರತಂಡ

‘ಪುಷ್ಪ’ ಫಿಲ್ಮ್ ಟೀಮ್​ಗೆ ಮತ್ತೆ ವನವಾಸ ಶುರು.. ಕಾಡಿನ ಕಡೆ ಮುಖ ಮಾಡಿದ ಚಿತ್ರತಂಡ

ಟಾಲಿವುಡ್​​​ನ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಮೂಲಕ ಪ್ಯಾನ್ ಇಂಡಿಯನ್ ಲೆವಲ್​​ನಲ್ಲಿ ಐಕಾನ್ ಸ್ಟಾರ್ ಆಗೋದಕ್ಕೆ ಹೊರಟ್ಟಿದ್ದಾರೆ.. ಸುಮ್​ ಸುಮ್ನೇ ಆಗ್ತಿಲ್ಲ ವನವಾಸವನ್ನ ಶುರು ಹಚ್ಚಿಕೊಂಡಿದ್ದಾರೆ. ಶೂಟಿಂಗ್ ಮುಗಿಸಿ ಮನೆ ಸೇರಿದ ಪುಷ್ಪ ಟೀಮ್ ಮತ್ತೆ ಈಗ ಕಾಡಿನವಾಸವನ್ನ ಶುರು ಹಚ್ಚಿಕೊಂಡಿದೆ..

ಸಿನಿಮಾ ಹುಚ್ಚು ತುಸು ಹೆಚ್ಚು ಟಾಲಿವುಡ್​​ ಲೋಕದಲ್ಲಿ.. ಸಿನಿಮಾಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡ್ತಾರೆ.. ಈ ಕಾರಣಕ್ಕೆ ತೆಲುಗು ಸಿನಿಮಾ ಲೋಕದ ಸಿನಿಮಾಗಳ ಅಷ್ಟು ಸೌಂಡ್ ಮಾಡೋದು , ನೋಡೋದಕ್ಕು ರಿಚ್ ಆಗಿ ಕಾಣೋದು.. ಹಂಗಂತ ನಾವೇನು ನಮ್ಮವರನ್ನ ಅಲ್ಲಗಳಿಯುತ್ತಿಲ್ಲ.. ಇವತ್ತು ಪುಷ್ಪ ಸಿನಿಮಾ ಎರಡೇರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಪ್ಯಾನ್ ಇಂಡಿಯನ್ ಲೆವಲ್​​ನಲ್ಲಿ ಬರ್ತಿದೆ ಅನ್ನೋದಕ್ಕೆ ಸ್ಫೂರ್ತಿಯೆ ನಮ್ಮ ಕನ್ನಡದ ಕೆಜಿಎಫ್​​​​​.

blank

ಈಗ ವಿಷಯಕ್ಕೆ ಬರ್ತಿವಿ ಕೇಳಿ.. ಇನೇನು ನಾವು ನಿಮ್ಮ ಮುಂದೆ ಆಗಸ್ಟ್ ತಿಂಗಳು 13ನೇ ತಾರೀಖ್​​​ ಬಂದು ಬಿಡ್ತಿವಿ ರೆಡಿಯಾಗಿರಿ ಸ್ಟೆಡಿಯಾಗಿರಿ ಎಂದ ಪುಷ್ಪ ಫಿಲ್ಮ್ ಟೀಮ್​ ಧೀಡಿರನೇ ಯೂಟರ್ನ್ ಹೊಡೆದುಬಿಟ್ಟರು.. ಥಿಯೇಟರ್​ಗೆ ಬರೋರು ಶೂಟಿಂಗ್ ಸೆಟ್​​​​​ನ ಕಡೆ ಅದ್ರಲ್ಲು ಕಾಡಿನ ಕಡೆ ಹೊರಟು ಬಿಟ್ಟರು.. ಕೆಲ ದಿನಗಳ ಸುಕುಮಾರ್ ಸಿನಿ ಬಳಗ ಪುಷ್ಪ ಸಿನಿಮಾವನ್ನ ಎರಡೇರಡು ಭಾಗಗಳಾಗಿ ತೋರಿಸೋದಾಗಿ ಅದ್ರಲಿ ಮೊದನೇ ಭಾಗ ಡಿಸೆಂಬರ್ 25ನೇ ತಾರೀಖ್ ಪ್ರದರ್ಶಿಸೋದಾಗಿ ಹೇಳಿಕೊಂಡಿದೆ ಪುಷ್ಪ ಫಿಲ್ಮ್ ಟೀಮ್.

ಪುಷ್ಪ ಬಳಗದಿಂದ ಬಂದಿರೋ ಹೊಸ ವಿಚಾರವೇನು ಗೊತ್ತಾ ಮತ್ತೆ ಶೂಟಿಂಗ್ ಅಡ್ಡಕ್ಕೆ ಇಳಿದಿದೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಫಿಕ್ಚರ್ ಟ್ರೂಪ್. ಮೊನ್ನೆ ತಾನೇ ಪುಷ್ಪ ಸಿನಿಮಾದ ಹಾಡೊಂದರ ಶೂಟಿಂಗ್ ಇದೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ಅವರನ್ನ ಮ್ಯಾಚ್ ಮಾಡೋ ಸಲುವಾಗಿ ರಶ್ಮಿಕಾ ಮಂದಣ್ಣ ರಿಹರ್ಸೆಲ್ ಮಾಡ್ತಿದ್ದಾರೆ ಅಂತ. ಈಗ Maredumilli Forest ನಲ್ಲಿ ಬೀಡು ಬಿಟ್ಟಿದೆ ಪುಷ್ಪ ಫಿಲ್ಮ್ ಟೀಮ್​.. ಈ ತಿಂಗಳು ಪೂರ್ತಿ ಶೂಟಿಂಗ್ ಎಡಿಟಿಂಗ್ ಟೇಬಲ್ ಸೇರೋ ಪ್ಲಾನ್​​ನಲ್ಲಿ ಸುಕುಮಾರ್ ಬಳಗವಿದೆ.

blank

ರಕ್ತಚಂದನ ಕಳ್ಳ ಸಾಗಣಿಕೆಯ ಕುರಿತಾದ ಕಥೆಯ ಸಿನಿಮಾವೊಂದನ್ನ ಸುಕುಮಾರ್, ಅಲ್ಲು ಅರ್ಜುನ್ ಜೊತೆ ಮೂರನೇ ಬಾರಿಗೆ ಮಾಡ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ ಬಗ್ಗೆ ಭಾರಿ ನಿರೀಕ್ಷೆಗಳಿದ್ದು ಈಗಾಗಲೇ ಐದೈದು ಭಾಷೆಗಳಲ್ಲಿ ಪುಷ್ಪ ಸಿನಿಮಾದ ಹಾಡೊಂದು ಕೇಳುಗರ ಹೃದಯ ಮುಟ್ಟಿದೆ ನಿರೀಕ್ಷೆಯ ಲೆವಲ್​​ ಅನ್ನ ತಟ್ಟಿದೆ. ಒಟ್ಟಿನಲ್ಲಿ ಆಗಾಗ ಪುಷ್ಪ ಸಿನಿಮಾ ಬಳಗದಿಂದ ಇಂಟ್ರಸ್ಟಿಂಗ್ ಸಮಾಚಾರ ಹೊರ ಬರುತ್ತಾ ಚಿತ್ರಪ್ರೇಮಿಗಳನ್ನ ಇಂಪ್ರೇಸ್ ಮಾಡ್ತಿದೆ.

Source: newsfirstlive.com Source link