ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ

ಚಾಮರಾಜನಗರ: ಕೋವಿಡ್ ಭೀತಿಯಿಂದ ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರವನ್ನು ಗ್ರಾಮಸ್ಥರು ರದ್ದುಗೊಳಿಸಿದ್ದಾರೆ.

ಸಾಮಾನ್ಯವಾಗಿ ಗೌರಿಗೆ ಎಲ್ಲಿಯೂ ದೇವಾಲಯವಿಲ್ಲ. ಆದರೆ ಚಾಮರಾಜನಗರದ ಕುದೇರು ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆಯೇ ಸ್ವರ್ಣಗೌರಿ ದೇವಾಲಯ ನಿರ್ಮಿಸಲಾಗಿದೆ. ನಾಡಿನ ಎಲ್ಲಾ ಕಡೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಇಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಗೌರಿ ಹಬ್ಬದ ದಿನದಂದು ಬೆಳಗ್ಗೆ ಗ್ರಾಮದ ದೊಡ್ಡಕೆರೆಯ ಬಳಿ ವಿಶೇಷ ಹೋಮ-ಹವನಗಳೊಂದಿಗೆ ಮರಳಿನ ಗೌರಿ ವಿಗ್ರಹ ಸಿದ್ಧಪಡಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದಲ್ಲಿರುವ ಸ್ವರ್ಣಗೌರಿ ದೇವಾಯಲದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಇದನ್ನೂ ಓದಿ:  ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

ಮೆರವಣಿಗೆ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಗಳಷ್ಟೆ ಅಲ್ಲದೇ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಹಿಳೆಯರು ಬಂದು ಗೌರಿಗೆ ಬಾಗಿನ ಅರ್ಪಿಸುತ್ತಿದ್ದರು. 12 ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಕೊರೊನಾ ಮಹಾಮಾರಿ ಪರಿಣಾಮ ಈ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಬಿದ್ದಿದೆ. ಗೌರಿ ತರುವುದಾಗಲಿ, ಮೆರವಣಿಗೆ ಮಾಡುವುದಾಗಲಿ, ದೇವಾಲಯದಲ್ಲಿ ಬಾಗೀನ ಅರ್ಪಿಸುವುದಾಗಲಿ ಯಾವುದಕ್ಕೂ ಅವಕಾಶ ಇಲ್ಲದಂತಾಗಿದೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಈ ಗೌರಮ್ಮನಿಗೆ ಹರಕೆ ಹೊತ್ತುಕೊಂಡರೆ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಕಂಕಣಭಾಗ್ಯ, ಸಂತಾನಭಾಗ್ಯ, ವಿವಾಹಿತರಿಗೆ ಮುತ್ತೈದೆ ಭಾಗ್ಯ ಲಭಿಸುತ್ತೆ ಎಂಬ ನಂಬಿಕೆಯಿಂದ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಭಕ್ತರ ದಂಡೆ ಹರಿದುಬರುತ್ತೆ. ಇಷ್ಟಾರ್ಥ ಸಿದ್ಧಿಸಿದವರು ಗೌರಿಗೆ ಬಾಗಿನ ಅರ್ಪಿಸಿ ತಮ್ಮ ಹರಕೆ ತೀರಿಸುತ್ತಿದ್ದರು. ಮತ್ತೆ ಕೆಲವರು ಇದೇ ಸಂದರ್ಭದಲ್ಲಿ ಹರಕೆ ಹೊತ್ತುಕೊಳ್ಳುತ್ತಿದ್ದರು. ಆದರೆ ಇದಕ್ಕೆಲ್ಲ ಈ ಬಾರಿ ಅವಕಾಶವಿಲ್ಲದಂತಾಗಿ ಭಕ್ತರು ನಿರಾಶರಾಗಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ವ್ಯಾಮೋಹ ಕನ್ನಡ ಭಾಷಾಭಿವೃದ್ಧಿಗೆ ದೊಡ್ಡ ಸವಾಲು: ಡಿ.ಎಸ್.ಅರುಣ್

blank

ಒಟ್ಟಾರೆ ಕೊರೊನಾ ಹೊಡೆತ ಅಷ್ಟಿಷ್ಟಲ್ಲ. ನೂರಾರು ವರ್ಷಗಳಿಂದ ನಡೆಯುತ್ತಿದ್ದ ಹಬ್ಬದ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ. ಇದೀಗ ಮನೆಯಲ್ಲಿ ಗೌರಿ ಹಬ್ಬ ಆಚರಣೆಗೆ ಗ್ರಾಮಸ್ಥರು ಮುಂದಾಗಿದ್ದಾರೆ.

Source: publictv.in Source link