ಮಗಳಿಗೆ ಬಾಗಿನ ಕೊಟ್ಟು ವಾಪಸ್​​ ಆಗ್ತಿದ್ದ ವೇಳೆ ಭೀಕರ ಅಪಘಾತ; ತಂದೆ-ಮಗಳು ಸಾವು

ಮಗಳಿಗೆ ಬಾಗಿನ ಕೊಟ್ಟು ವಾಪಸ್​​ ಆಗ್ತಿದ್ದ ವೇಳೆ ಭೀಕರ ಅಪಘಾತ; ತಂದೆ-ಮಗಳು ಸಾವು

ಚಿಕ್ಕಮಗಳೂರು: ಮಗಳ ಮನೆಗೆ ಬಾಗಿನ ಕೊಟ್ಟು ವಾಪಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಪ್ಪ-ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ನಡೆದಿದೆ.

blank

ಜಯಣ್ಣ(58), ರಕ್ಷಿತಾ (19) ಮೃತ ದುರ್ದೈವಿಗಳು. ಟಿವಿಎಸ್ ಬೈಕ್​​ ಮತ್ತು ಗ್ಯಾಸ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಅಪ್ಪ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

blank

ಮೃತರು ಪಿಳ್ಳೇನಹಳ್ಳಿಯಿಂದ ಮುಗುಳವಳ್ಳಿಗೆ ಟಿವಿಎಸ್ ಬೈಕ್​ನಲ್ಲಿ ಹೋಗುತ್ತಿದ್ದರು. ಘಟನಾ ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Source: newsfirstlive.com Source link