ಡ್ರಗ್​​ ಕೇಸ್​​ ಸಂಕಷ್ಟ.. ED ಎದುರು ಹಾಜರಾದ ಟಾಲಿವುಡ್​ ಮಾಸ್​​ ಮಹಾರಾಜ ರವಿ ತೇಜಾ

ಡ್ರಗ್​​ ಕೇಸ್​​ ಸಂಕಷ್ಟ.. ED ಎದುರು ಹಾಜರಾದ ಟಾಲಿವುಡ್​ ಮಾಸ್​​ ಮಹಾರಾಜ ರವಿ ತೇಜಾ

ಹೈದರಾಬಾದ್​: ಟಾಲಿವುಡ್​ ಡ್ರಗ್ಸ್​ ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ನಟ ರವಿ ತೇಜಾ ಇಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಗಳ ಮುಂದೇ ಹಾಜರಾಗಿ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇಂದು ಬೆಳಗ್ಗೆ ತಮ್ಮ ಚಾಲಕ ಸಮೇತ ರವಿ ತೇಜಾ ಅವರು ಇ.ಡಿ ಕಚೇರಿಗೆ ಆಗಮಿಸಿದರು. ಈ ವೇಳೆ ತಮ್ಮ ಬ್ಯಾಂಕ್ ವ್ಯವಹಾರ ಬಗ್ಗೆ ಮಾಹಿತಿ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಇದುವರೆಗೂ ಟಾಲಿವುಡ್​​ನ ನಿರ್ದೇಶಕ ಪುರಿ ಜಗನ್ನಾಥ್​​, ಚಾರ್ಮಿ ಕೌರ್​, ರಕುಲ್​ ಪ್ರೀತ್ ಸಿಂಗ್, ರಾಣಾ, ಇ.ಡಿ ಮುಂದೇ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಪೂರ್ಣಗೊಳಿಸದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ರವಿ ತೇಜ ತೆರಳಿದರು. ಬೆಳಗ್ಗೆ ಮಾಧ್ಯಮಗಳ ಕಣ್ಣು ತಪ್ಪಿಸಿ ಇ.ಡಿ ಕಚೇರಿಗೆ ಹಾಜರಾಲು ಮುಂದಾಗಿದ್ದ ರವಿ ತೇಜ, ತಮ್ಮ ನಿವಾಸ ಬದಲು ಫಾರ್ಮ್​ಹೌಸ್​​ನಿಂದ ಇ.ಡಿ ಕಚೇರಿಗೆ ಆಗಮಿಸಿದರು.

ಇದನ್ನೂ ಓದಿ: ಡ್ರಗ್ಸ್​ ‘ಸುಳಿ’ಯಲ್ಲಿ ರಾಣಾ ದಗ್ಗುಬಾಟಿ.. ED ಮುಂದೆ ಹಾಜರಾದ ಬಲ್ಲಾಳದೇವಾ

Source: newsfirstlive.com Source link