ಲಿವ್‌ ಇನ್‌ ರಿಲೇಷನ್‌ಶಿಪ್‌ ಜೊತೆಗಿದ್ದ ಯುವಕನ ಕೊಂದಳಾಕೆ..!

ಪುಣೆ: ತನ್ನ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯುವಕನನ್ನು (live-in partner) ಕೊಂದು ತನಗೇನೂ ಗೊತ್ತೇ ಇಲ್ಲ ಎಂಬಂತಿದ್ದ ಯುವತಿಯನ್ನು ಪುಣೆ ಪೊಲೀಸರು (Pune Police) ಬಂಧಿಸಿದ್ದಾರೆ.

ಏನಾಗಿತ್ತು?: ಪುಣೆಯ ಹಾದಪ್ಸರ್‌ ಎಂಬಲ್ಲಿ ಸೋನಲ್‌ ದಭಾಡೆ ಹಾಗೂ ರೋಹಿಣಿ ಯಾನುತೆ ಲಿವ್‌ ಇನ್‌ ರಿಲೇಷನ್‌ಶಿಪ್‌ ನಲ್ಲಿ ಜೊತೆಯಾಗಿದ್ದರು. ಸೋನಲ್‌ ದಭಾಡೆ ಮನೆಯಲ್ಲಿ ಇಬ್ಬರೂ ವಾಸವಾಗಿದ್ದರು.

ಸೋನಲ್‌ ಹಾಗೂ ರೋಹಿಣಿ ಎರಡು ಖಾಸಗಿ ಕಂಪೆನಿಯಲ್ಲಿ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದು. ಇವರ ನಡುವೆ ಆಗಾಗ ವಾಗ್ವಾದಗಳು ಹಾಗೂ ಗಲಾಟೆಗಳು ನಡೆಯುತ್ತಿದ್ದವು. ಆದರೆ ಕಳೆದ ಆಗಸ್ಟ್‌ 29ರಂದು ರೋಹಿಣಿ ಉಸಿರುಗಟ್ಟಿಸಿ ಸೋನಲ್‌ ದಭಾಡೆಯನ್ನು ಕೊಂದಿದ್ದಳು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿ ಸಹಜ ಸಾವು ಎಂಬಂತೆ ವರ್ತಿಸಿದ್ದಳು. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

ನಟನಾ ಮಣಿ!: ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಪೊಲೀಸರು ಸೋನಲ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಇದರ ವರದಿಯಲ್ಲಿ ಸೋನಲ್‌ ಉಸಿರುಗಟ್ಟಿ ಸಾವನ್ನಪ್ಪಿರುವ ವಿವರ ಬೆಳಕಿಗೆ ಬಂದಿದೆ. ಸೋನಲ್‌ ನನ್ನು ತಾನೇ ಕೊಂದಿದ್ದರೂ ಪೊಲೀಸರಿಗೆ ಹಾಗೂ ಸಂಬಂಧಿಗಳಿಗೆ ಈ ವಿಷಯ ಹೇಳಿರಲಿಲ್ಲ.

ಆದರೆ ಪೋಸ್ಟ್‌ ಮಾರ್ಟಂ ವರದಿ ಬರುತ್ತಿದ್ದಂತೆಯೇ ಪೊಲೀಸರು ರೋಹಿಣಿಯ ತನಿಖೆ ಶುರು ಮಾಡಿದ್ದಾರೆ. ಯಾವಾಗ ತನಿಖೆ ಬಿಸಿ ತಾಗಿತೋ ಆಕೆ ಎಲ್ಲ ವಿವರಗಳನ್ನೂ ಬಾಯಿಬಿಟ್ಟು ತಾನೇ ಆತನನ್ನು ಕೊಂದಿದ್ದಾಗಿ ಹೇಳಿದ್ದಾಳೆ. ಪ್ರಕರಣ ಸಂಬಂಧ ಹದಪ್ಸರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯೊಳಗೆ ರೈತರ ಪಂಪ್‍ಸೇಟ್‍ಗೆ ಟ್ರಾನ್ಸ್​ಫಾರ್ಮರ್ ವ್ಯವಸ್ಥೆ ಮಾಡಿ: ಸುನಿಲ್ ಕುಮಾರ್

ಪೊಲೀಸರು ಹೇಳೋದೇನು?: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಬಳಿಕ ಲಿವ್‌ ಇನ್‌ ರಿಲೇಷನ್‌ ಶಿಪ್ಪಲ್ಲಿದ್ದರು. ಘಟನೆ ನಡೆದ ದಿನ ರೋಹಿಣಿ ಸೋನಲ್‌ನನ್ನು ದೂಡಿದ್ದಾಳೆ. ಆಗ ಸೋನಲ್‌ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಇದೇ ಸಮಯದಲ್ಲಿ ರೋಹಿಣಿ ಆತನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Source: publictv.in Source link