ಗಣೇಶ ಚತುರ್ಥಿ ಹಬ್ಬದ ಮೂಡ್​ನಲ್ಲಿ ನಟಿ ಶಿಲ್ಪಾ ಶೆಟ್ಟಿ

ಗಣೇಶ ಚತುರ್ಥಿ ಹಬ್ಬದ ಮೂಡ್​ನಲ್ಲಿ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ನಟಿ ಶಿಲ್ಪಾ ಶೆಟ್ಟಿ, ಗಣೇಶ ಮೂರ್ತಿಯನ್ನು ಮನೆಗೆ ತಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಂದಿನಂತೆ ಈ ಬಾರಿ ಕೂಡ ಭರ್ಜರಿಯಾಗಿ 12 ದಿನಗಳ ಕಾಲ ಹಬ್ಬವನ್ನ ಆಚರಿಸುತ್ತಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಶಿಲ್ಪಾ ಪತಿ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ಸೆರೆಯಾಗಿದ್ರು. ಅಂದಿನಿಂದ ಶಿಲ್ಪಾ ಶೆಟ್ಟಿ ಮಾನಸಿಕವಾಗಿ ಕುಗ್ಗಿದ್ರು, ಆದ್ರೆ ಮತ್ತೆ ಸಖತ್​ ಆ್ಯಕ್ಟಿವ್​ ಆಗಿರುವ ನಟಿ ಹಬ್ಬದ ಮೂಡ್​ನಲ್ಲಿದ್ದಾರೆ.

Source: newsfirstlive.com Source link