ವಾರ್ಡ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನನ್ನು ಕೂರಿಸಬಹುದು

ಬೆಂಗಳೂರು: ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಬಿಬಿಎಂಪಿ ವಾರ್ಡ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ.

ಗಣೇಶೋತ್ಸವಕ್ಕೆ ಹಲವು ನಿರ್ಬಂಧ ವಿರೋಧಿಸಿದ್ದನ್ನು ಖಂಡಿಸಿ ಇಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದ ಬಿಬಿಎಂಪಿ ಈಗ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯನ್ನು ವಾಪಸ್ ಪಡೆದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿ 10 ದಿನದವರೆಗೆ ಆಚರಣೆಗೆ ಅನುಮತಿ ನೀಡಿದೆ.

ವಿಶೇಷ ಆಯುಕ್ತ ರಂದೀಪ್ ಪ್ರತಿಕ್ರಿಯಿಸಿ, ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಮಂದಿ ಬೇಡಿಕೆಗಳನ್ನು ಇಟ್ಟಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ವಾರ್ಡ್ ಗಳಲ್ಲಿ ಹೆಚ್ಚುವರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

140 ವಾರ್ಡ್ ಗಳಲ್ಲಿ ಗಣೇಶನನ್ನು ಕೂರಿಸಲು ಅರ್ಜಿ ಬಂದಿದೆ. ಉಳಿದ ಕಡೆ ದೇವಸ್ಥಾನಗಳಲ್ಲಿ ಗಣಪತಿಯನ್ನು ಕೂರಿಸಲಾಗುತ್ತಿದೆ. ರಸ್ತೆ, ಗ್ರೌಂಡ್‍ಗಳಲ್ಲಿ ಬೇಡಿಕೆಗೆ ತಕ್ಕಂತೆ ಗಣೇಶನನ್ನು ಕೂರಿಸಲು ಅವಕಾಶ ನೀಡಲಾಗಿದೆ. ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲು ಸರ್ಕಾರದ ಆದೇಶ ಏನಿದೆಯೋ ಅದು ಪಾಲನೆ ಆಗುತ್ತದೆ ಎಂದರು. ಇದನ್ನೂ ಓದಿ: 9 ದಿನ ಗಣೇಶೋತ್ಸವ ಆಚರಿಸುತ್ತೇವೆ ತಾಖತ್ ಇದ್ರೆ ಸರ್ಕಾರ ತಡೆಯಲಿ: ಶ್ರೀರಾಮಸೇನೆ 

ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಹಲವು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್, ಸ್ಥಳೀಯ ಜಂಟಿ ಆಯುಕ್ತ, ಹೆಲ್ತ್ ಇನ್ಸ್ ಪೆಕ್ಟರ್ ಗಣೇಶನ ಮೂರ್ತಿಯನ್ನು ಕೂರಿಸಲು ಅನುಮತಿ ನೀಡಿದರು ಎಂದು ತಿಳಿಸಿದರು.

Source: publictv.in Source link