ರಾಯಭಾರಿ ಕಚೇರಿಗಳ ಮೇಲೆ ತಾಲಿಬಾನಿಗಳ ಕಣ್ಣು.. ವೈನ್ ಬಾಟಲ್​ಗಳು ಧ್ವಂಸ..!

ರಾಯಭಾರಿ ಕಚೇರಿಗಳ ಮೇಲೆ ತಾಲಿಬಾನಿಗಳ ಕಣ್ಣು.. ವೈನ್ ಬಾಟಲ್​ಗಳು ಧ್ವಂಸ..!

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳು ಇದೀಗ ರಾಯಭಾರಿ ಕಚೇರಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಾಬೂಲ್​ನ ನಾರ್ವೇ ರಾಯಭಾರಿ ಕಚೇರಿಯನ್ನ ವಶಪಡಿಸಿಕೊಂಡಿರುವ ತಾಲಿಬಾನಿಗಳು ಕಚೇರಿಯಲ್ಲಿದ್ದ ವೈನ್ ಬಾಟಲ್​ಗಳು ಹಾಗೂ ಮಕ್ಕಳ ಪುಸ್ತಕಗಳನ್ನ ಧ್ವಂಸಗೊಳಿಸಿದ್ದಾರೆ.

ನಾರ್ವೆಯ ಇರಾನ್ ರಾಯಭಾರಿ ಸಿಗ್ವಲ್ಡ್ ಹಾಜ್ ನೀಡಿರುವ ಮಾಹಿತಿಯಂತೆ ತಾಲಿಬಾನಿಗಳು ಸದ್ಯ ನಾರ್ವೆ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡಿದ್ದರೆ. ಅವರು ಕಚೇರಿಯನ್ನು ನಮಗೆ ವಾಪಸ್ ಕೊಡೋದಾಗಿ ಹೇಳಿದ್ದಾರೆ. ಆದ್ರೆ ಅದಕ್ಕೂ ಮೊದಲು ವೈನ್ ಬಾಟಲ್​ಗಳನ್ನು ಹೊಡೆದುಹಾಕಲಾಗುವುದು.

ಮತ್ತು ಮಕ್ಕಳ ಪುಸ್ತಕಗಳನ್ನ ನಾಶಪಡಿಸಲಾಗುವುದು ಎಂದಿದ್ದಾರಂತೆ. ಈ ಹಿಂದೆ ತಾಲಿಬಾನಿಗಳು ರಾಯಭಾರಿ ಕಚೇರಿಗಳ ಮಧ್ಯೆ ತಲೆದೂರಿಸುವುದಿಲ್ಲ ಎಂದಿದ್ದರು.

Source: newsfirstlive.com Source link