ಹಿರಣ್ಯಕೇಶಿ ನದಿ ಪಾತ್ರದಲ್ಲಿ ಮೊಸಳೆ ಪ್ರತ್ಯಕ್ಷ-ಗ್ರಾಮಸ್ಥರು ಕಂಗಾಲು

ಹಿರಣ್ಯಕೇಶಿ ನದಿ ಪಾತ್ರದಲ್ಲಿ ಮೊಸಳೆ ಪ್ರತ್ಯಕ್ಷ-ಗ್ರಾಮಸ್ಥರು ಕಂಗಾಲು

ಬೆಳಗಾವಿ: ಜಿಲ್ಲೆಯ ಹಿರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ನದಿ‌ ತೀರದ ಜನರಲ್ಲಿ ಆತಂಕ ಹುಟ್ಟಿಸಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಬಳಿ ಹಿರಣ್ಯಕೇಶಿ ನದಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೊಸಳೆಯೊಂದು ಪ್ರತ್ಯಕ್ಷವಾಗುತ್ತಿದ್ದು, ನದಿ ಪಾತ್ರದ ಗ್ರಾಮಸ್ಥರಲ್ಲಿ ತೀವ್ರ ಭೀತಿ ಉಂಟು ಮಾಡಿದ್ದು, ಜನ ಹೊರಗಡೆ ಓಡಾಡಲು ಭಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೊಸಳೆ ಪ್ರತ್ಯಕ್ಷವಾಗಿ ಎರಡ್ಮೂರು ದಿನ ಕಳೆದರು, ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಮೊಸಳೆ ಸೆರೆ ಹಿಡಿದು ಜನರ ಆತಂಕ ದೂರ ಮಾಡಬೇಕೆಂದು ಜನರು ಒತ್ತಾಯಿಸಿದ್ದಾರೆ. ಇನ್ನು ಮೊಸಳೆ ಸೆರೆ ಹಿಡಿಯುವರೆಗೂ ಗ್ರಾಮಸ್ಥರು ನದಿಗೆ ಇಳಿಯದಂತೆ ಗೋಟುರ ಗ್ರಾಮದಲ್ಲಿ ಧ್ವನಿವರ್ಧಕ ಬಳಸಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:‘ವೀರ ಮದಕರಿ ನಾಯಕ’ ನಾಮಕರಣ ವಿಚಾರ; ಬೆಳಗಾವಿ ಆರ್​ಡಿಪಿ ಸರ್ಕಲ್​ನಲ್ಲಿ ಹೈಡ್ರಾಮಾ

 

Source: newsfirstlive.com Source link