ಲಾರಿ, ಬೈಕ್ ಡಿಕ್ಕಿ – ಬಾಗಿನ ಕೊಟ್ಟು ಬರ್ತಿದ್ದ ತಂದೆ, ಮಗಳ ಸಾವು

ಚಿಕ್ಕಮಗಳೂರು: ಮಗಳಿಗೆ ಬಾಗಿನ ನೀಡಿ ವಾಪಸ್ ಬರುತ್ತಿದ್ದ ತಂದೆ-ಮಗಳು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತಾಲೂಕಿನ ಸಖರಾಯಪಟ್ಟಣ ಸಮೀಪದ ಉದ್ದೇಬೋರನಹಳ್ಳಿ ಬಳಿ ನಡೆದಿದೆ.

ಮೃತರನ್ನ ೫೮ ವರ್ಷದ ಜಯಣ್ಣ ಹಾಗೂ ೧೯ ವರ್ಷದ ರಕ್ಷಿತಾ ಎಂದು ಗುರುತಿಸಲಾಗಿದೆ. ಹಬ್ಬದ ದಿನವೇ ಈ ದುರ್ಘಟನೆ ನಡೆದಿದ್ದು ರಸ್ತೆ ಮಧ್ಯೆ ಮೃತದೇಹಗಳನ್ನ ಕಂಡ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.  ಇದನ್ನೂ ಓದಿ: ಫಸ್ಟ್ ಟೈಂ ವಾಯುಸೇನೆ ವಿಮಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್

ಮೃತ ಜಯಣ್ಣ ಮೂಲತಃ ತಾಲೂಕಿನ ಮುಗುಳುವಳ್ಳಿ ಗ್ರಾಮದವರು. ತಮ್ಮ ಹಿರಿಯ ಮಗಳನ್ನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿಗೆ ಮದುವೆ ಮಾಡಿ ಕೊಟ್ಟಿದ್ದರು.

ಇಂದು ಗೌರಿ ಹಬ್ಬದ ಪ್ರಯುಕ್ತ ಮಗಳಿಗೆ ಬಾಗಿನ ಕೊಟ್ಟು ಹಿಂದಿರುಗುವಾಗ ಉದ್ದೇಬೋರನಹಳ್ಳಿ ಬಳಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಹಾಗೂ ಟಿವಿಎಸ್ ಬೈಕ್ ಡಿಕ್ಕಿಯಾಗಿ ತಂದೆ-ಮಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೂ ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿ ಪಲ್ಟಿಯಾದರೂ ಬೆಂಕಿ ಹೊತ್ತಿಲ್ಲ. ಒಂದು ವೇಳೆ ಲಾರಿಗೆ ಬೆಂಕಿ ಹೊತ್ತಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.  ಇದನ್ನೂ ಓದಿ: ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ. ದಾಖಲಾಗಿಸಿಕೊಂಡಿದ್ದಾರೆ.

Source: publictv.in Source link