ಧೋನಿ-ಶಾಸ್ತ್ರಿ ಮಧ್ಯೆ ಘರ್ಷಣೆ ಆಗದಿರಲಿ ಅಂತ ಪ್ರಾರ್ಥಿಸುತ್ತೇನೆ – ಹೀಗಂದಿದ್ಯಾಕೆ ಗವಾಸ್ಕರ್

ಧೋನಿ-ಶಾಸ್ತ್ರಿ ಮಧ್ಯೆ ಘರ್ಷಣೆ ಆಗದಿರಲಿ ಅಂತ ಪ್ರಾರ್ಥಿಸುತ್ತೇನೆ – ಹೀಗಂದಿದ್ಯಾಕೆ ಗವಾಸ್ಕರ್

2021ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ನಿನ್ನೆಯಷ್ಟೇ ಬಿಸಿಸಿಐ ತಂಡದ ಆಟಗಾರರನ್ನು ಪ್ರಕಟಿಸಿತ್ತು. ಇದೇ ವೇಳೆ ಟೀಂ ಇಂಡಿಯಾ ಮಾಜಿ ಆಟಗಾರ ಎಂಎಸ್​ ಧೋನಿ ಅವರನ್ನು ತಂಡದ ಮೆಂಟರ್​ ಆಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುನಿಲ್ ಗವಾಸ್ಕರ್​ ಅವರು, ಧೋನಿ ಮತ್ತು ಶಾಸ್ತ್ರಿ ನಡುವೆ ಯಾವುದೇ ಘರ್ಷಣೆಯಾಗದಂತೆ ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಧೋನಿ ಅವರಿಗೆ ಟೀಂ ಇಂಡಿಯಾ ಸೇರಿದಂತೆ ಅಂತಾರಾಷ್ಟ್ರೀಯ ತಂಡಗಳನ್ನು ಗೈಡ್​ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸದ್ಯ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿರುವುದು ಟೀಮ್​ ಇಂಡಿಯಾಗೆ ಬಿಗ್​ ಬೂಸ್ಟ್ ನೀಡುತ್ತದೆ.

ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರ ಟಿ20 ಹಾಗೂ 2011ರ ವಿಶ್ವಕಪ್​​ ಟೂರ್ನಿಯಲ್ಲಿ ಗೆಲುವು ಪಡೆದಿದೆ. ಆದರೆ ತಂಡದ ತಂತ್ರಗಾರಿಕೆ, ಆಯ್ಕೆ ಬಗ್ಗೆ ಇಬ್ಬರ ನಡುವೆ ಯಾವುದೇ ಅಸಮಾಧಾನ ಉಂಟಾದರೂ ಅದು ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಇಬ್ಬರ ನಡುವೆ ಯಾವುದೇ ಘರ್ಷಣೆಯಾಗದಿರಲಿ ಅಂತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Source: newsfirstlive.com Source link