ಗ್ರಾಮೀಣ ಸೊಗಡಿನಲ್ಲಿ ಕಂಗೊಳಿಸಲು ಸಜ್ಜಾದ ರಾಜಾ-ರಾಣಿ ಶೋ..!

ಗ್ರಾಮೀಣ ಸೊಗಡಿನಲ್ಲಿ ಕಂಗೊಳಿಸಲು ಸಜ್ಜಾದ ರಾಜಾ-ರಾಣಿ ಶೋ..!

ಹೊಸ ಹೊಸ ಕಾನ್ಸೆಪ್ಟ್​ ಮೂಲಕ ಜನರನ್ನ ರಂಜಿಸುತ್ತಿರುವ ರಾಜಾ-ರಾಣಿ ಶೋ ದಂಪತಿ ನಡುವೆ ಯಾವ ರೀತಿ ಸಾಮರಸ್ಯ ಇರಬೇಕು. ಹೇಗೆ ಸಂಸಾರವನ್ನ ಸರಿದುಗಿಸಬೇಕು ಎಂಬುವುದನ್ನ ತನ್ನದೆಯಾದ ಶೈಲಿಯಲ್ಲಿ ಮನರಂಜನೆಯ ಜೊತೆಗೆ ತಿಳಿಸಿಕೊಡುತ್ತಿದ್ದು, ಜನರಿಗೆ ತುಂಬಾನೇ ಹತ್ತಿರವಾಗಿದೆ.

blank

ಕಳೆದವಾರ ಪ್ರೀತಿಯ ಪತ್ನಿಯರಿಗೆ ವಿಶೇಷವಾದ ಉಡುಗೊರೆಗಳನ್ನ ನೀಡಿ ಸುಂದರವಾದ ಭಾವುಕ ಕ್ಷಣಗಳನ್ನ ಕ್ರಿಯೇಟ್​ ಮಾಡಿದ್ರು ನಮ್ಮ ರಾಜರು. ಈ ವಾರ ಕೂಡ ತುಂಬಾನೇ ಸ್ಪೆಷಲ್​ ಆಗಿದ್ದು, ಹಳ್ಳಿ ಸೊಗಡನ್ನ ರೀ-ಕ್ರಿಯೇಟ್​ ಮಾಡಲಾಗಿದೆ.

blank

ಈ ಕುರಿತು ಈಗಾಗಲೇ ವಾಹಿನಿ ಪ್ರೊಮೋ ಒಂದನ್ನ ರಿಲೀಸ್​ ಮಾಡಿದ್ದು, ನಮ್ಮ ರಾಜಾ ರಾಣಿ ಹಳ್ಳಿ ಉಡುಗೆ ತೊಡುಗೆಯಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ. ಅಷ್ಟೆಯಲ್ಲ ಹಳ್ಳಿಯಲ್ಲಿ ಮಾಡುವ ಕೆಲಸಗಳನ್ನ ಟಾಸ್ಕ್​ ಆಗಿ ನೀಡಿದ್ದು, ಕಂಟೆಸ್ಟಂಟ್ಸ್​ ಪಟ್ಟ ಫಜಿತಿ ಒಂದೆರಡಲ್ಲ. ಒಟ್ಟಿನಲ್ಲಿ ವೀಕ್ಷಕರ ಮನಸ್ಸು ಗೆದ್ದಿರುವ ರಾಜಾ-ರಾಣಿ ಶೋ ಜನರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು, ಈ ವಾರದ ಜಾನಪದ ಸೊಗಡಿನ ಅದ್ಧೂರಿ ಪ್ರದರ್ಶನ ನೋಡಲು ವೀಕ್ಷಕರು ಕಾತರರಾಗಿದ್ದಾರೆ.

blank

Source: newsfirstlive.com Source link