‘ಸುಂದರಾಂಗ ಜಾಣ’ನ ಅಭಿಮಾನಿಗಳಿಗೆ ನಾಳೆ ಡಬಲ್ ಸಂಭ್ರಮ..!

‘ಸುಂದರಾಂಗ ಜಾಣ’ನ ಅಭಿಮಾನಿಗಳಿಗೆ ನಾಳೆ ಡಬಲ್ ಸಂಭ್ರಮ..!

ಸ್ಯಾಂಡಲ್​ವುಡ್​ನ ತ್ಯಾಗರಾಜ ರಮೇಶ್​ ಅರವಿಂದ್​ ಅವರ ಹುಟ್ಟು ಹಬ್ಬಕ್ಕೆ ಒಂದು ದಿನ ಇರುವಾಗಲೇ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಗಣಪನ ಹಬ್ಬದ ದಿನವೇ ರಮೇಶ್ ಅರವಿಂದ್​ ಅವರ ಹುಟ್ಟು ಹಬ್ಬ ಇದ್ದು, ಗಣೇಶ ಹಬ್ಬ ಹಾಗೂ ಅವರ ಹುಟ್ಟು ಹಬ್ಬದ ಪ್ರಯುಕ್ತ ರಮೇಶ್ ಅವರು ಅವರನ್ನು ಪ್ರೀತಿಸುವ ಹೃದಯಗಳಿಗೆ ಕೊಟ್ಟಿರುವ ಸರ್​​ಪ್ರೈಸ್ ಏನು?

ಸ್ಯಾಂಡಲ್​ವುಡ್​ನ ಸುಂದರಾಂಗ ಜಾಣ ರಮೇಶ್ ಅರವಿಂದ್​ ನಾಳೆಗೆ 56ನೇ ವಸಂತಕ್ಕೆ ಕಾಲಿಡಲಿದ್ದಾರೆ. ವಯಸ್ಸು 50 ದಾಟಿದ್ರು ಯುವಕರು ನಾಚುವಂತೆ ಫಿಟ್​ ಆಗಿದ್ದಾರೆ ರಮೆಶ್ ಅರವಿಂದ್. ಇವರ ಸಮಕಾಲೀನವರು ಪೋಷಕ ಪಾತ್ರಗಳಲ್ಲಿ ಕಾಣಿಸ್ತಿದ್ರೆ ರಮೇಶ್ ಅವರು ಇನ್ನು ನಾಯಕನಾಗಿಯೇ ತೆರೆ ಮೇಲೆ ಮಿಂಚ್ತಿದ್ದಾರೆ. ಅಷ್ಟೇ ಅಲ್ಲ ನಿರ್ಮಾಪಕರ ಜೇಬು ತುಂಬಿಸುವಲ್ಲು ಯಶಸ್ವಿಯಾಗಿದ್ದಾರೆ.

‘ಸುಂದರಾಂಗ ಜಾಣ’ನ ಅಭಿಮಾನಿಗಳಿಗೆ ನಾಳೆ ಡಬಲ್ ಸಂಭ್ರಮ..!

ಹೌದು ಕಳೆದ ವರ್ಷ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದಿತ್ತು. ಈಗ ಈ ಚಿತ್ರದ ಮುಂದುವರಿದ ಭಾಗವಾಗಿ ರಮೇಶ್ ಅರವಿಂದ್ ಸೈಲೆಂಟ್​ ಆಗಿ ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ರಮೇಶ್ ಅವರ ಹುಟ್ಟುಹಬ್ಬದ ದಿನವೇ ಶಿವಾಜಿ ಸುರತ್ಕಲ್ ಚಿತ್ರದ ಸೀಕ್ವೆಲ್‌ಗೆ ಚಾಲನೆ ಸಿಗಲಿದೆ.

ಸೆಪ್ಟೆಂಬರ್ 10 ಅಂದ್ರೆ ನಾಳೆ ರಮೇಶ್ ಅರವಿಂದ್ ಅವರ ಜನ್ಮದಿನದಂದು ಸೂರತ್ಕಲ್ ಸಿನಿಮಾ ಭಾಗ 2 ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ. ಅಷ್ಟೇ ಅಲ್ಲ ಚಿತ್ರದ ಒಂದು ಪೋಸ್ಟರ್​ ಅನ್ನು ಲಾಂಚ್ ಮಾಡಿ ರಮೇಶ್ ಅವರ ಬರ್ತ್​ಡೇಗೆ ಗಿಫ್ಟ್​ ಕೊಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

ಶಿವಾಜಿ ಸುರತ್ಕಲ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಆಕಾಶ್ ಶ್ರೀವಾಸ್ತವ್ ಅವರೆ, ಸಿಕ್ವೇಲ್​ಗೂ ಸಾರಥಿಯಾಗಿದ್ದಾರೆ. ಶಿವಾಜಿ ಸೂರತ್ಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ಅವಿನಾಶ್, ರಾಘು ರಾಮಣ್ಣಕೊಪ್ಪ, ರಮೇಶ್ ಪಂಡಿತ್ ಸೇರಿದಂತೆ ಹಲವರು ನಟಿಸಿದ್ದರು. ಈಗ ಮುಂದುವರಿದ ಭಾಗದಲ್ಲೂ ರಮೇಶ್, ರಾಧಿಕಾ ನಾರಾಯಣ್, ವಿದ್ಯಾಮೂರ್ತಿ ಬಣ್ಣ ಹಚ್ಚಲಿದ್ದು ಅಕ್ಟೋಬರ್​ನಲ್ಲಿ ಚಿತ್ರದ ಶೂಟಿಂಗ್​ ಶುರುವಾಗಲಿದೆ.

Source: newsfirstlive.com Source link