ಪ್ರತಿಭಟನೆಗೆ ಹೆದರಿದ BBMP; ಬೆಂಗಳೂರಲ್ಲಿ ಗಣೇಶೋತ್ಸವಕ್ಕೆ ಹೇರಿದ್ದ ನಿರ್ಬಂಧಗಳಲ್ಲಿ ಸಡಿಲಿಕೆ

ಪ್ರತಿಭಟನೆಗೆ ಹೆದರಿದ BBMP; ಬೆಂಗಳೂರಲ್ಲಿ ಗಣೇಶೋತ್ಸವಕ್ಕೆ ಹೇರಿದ್ದ ನಿರ್ಬಂಧಗಳಲ್ಲಿ ಸಡಿಲಿಕೆ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಗಣೇಶೋತ್ಸವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಈ ಕುರಿತು ಮೌಖಿಕ ಆದೇಶ ಹೊರಡಿಸಿರುವ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ವಾರ್ಡ್​ಗೆ 1ರಂತೆ ಗಣೇಶ ವಿಗ್ರಹ ಕೂರಿಸಲು ಅನುಮತಿ ನೀಡಿದ್ದಾರೆ.

ಈ ಕುರಿತು ಪಾಲಿಕೆಯ ಮುಖ್ಯ ಆಯುಕ್ತರು ಜಂಟಿ ಆಯುಕ್ತರು ಸಭೆ ಮಾಡಿದ್ದು, ಸದ್ಯ ಸುಮಾರು 140 ವಾರ್ಡ್ ಗಳಲ್ಲಿ ವಾರ್ಡ್​ಗೆ 1 ರಂತೆ ಗಣೇಶ ವಿಗ್ರಹ ಕೂಡಿಸಲು ಅನುಮತಿ ನೀಡಲಾಗಿದೆ. ಒಂದೆರಡು ವಾರ್ಡ್​ಗಳಲ್ಲಿ ಹೆಚ್ಚು ವಿಗ್ರಹಗಳನ್ನಿಡಲು ಅವಕಾಶ ಮಾಡಿಕೊಡುವುದಾಗಿ ಮೌಖಿಕವಾಗಿ ಹೇಳಿದ್ದಾರೆ. ಇನ್ನುಳಿದ ವಾರ್ಡ್​​ಗಳಲ್ಲಿ ಸ್ಥಳೀಯವಾಗಿ ಅನುಮತಿ ನೀಡಲಾಗಿದ್ದು, ಸ್ಥಳೀಯ ಪೊಲೀಸರಿಗೆ ಅನುಮತಿ ನೀಡಲು ತಿಳಿಸಲಾಗಿದೆ.

ಇನ್ನು ಗಣೇಶೋತ್ಸವ ನಿಯಮಗಳ ಕುರಿತು ಹಿಂದೂ ಪರ ಸಂಘಟನೆ ಇಂದು ಮುಂಜಾನೆಯಿಂದ ಪ್ರತಿಭಟನೆ ಕೈಗೊಂಡಿದ್ದವು. ಸದ್ಯ ಪಾಲಿಕೆ ಆಯುಕ್ತರು ಈಗ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ ಬಳಿಕ ಇನ್ನೇನು ಪ್ರತಿಭಟನೆಯನ್ನು ಕೆಲವೇ ಕ್ಷಣಗಳಲ್ಲಿ ಅಂತ್ಯಗೊಳಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವ ಆಚರಿಸಲು CM ಒಪ್ಪಿಗೆ

Source: newsfirstlive.com Source link