ನೀನಾಸಂ ಸತೀಶ್​ಗೆ ALL THE BEST ಹೇಳಿದ ಮೋಹಕ ತಾರೆ..! ಏನಿರಬಹುದು..?

ನೀನಾಸಂ ಸತೀಶ್​ಗೆ ALL THE BEST ಹೇಳಿದ ಮೋಹಕ ತಾರೆ..! ಏನಿರಬಹುದು..?

ರಮ್ಯಾ ಕನ್ನಡಚಿತ್ರ ರಂಗದ ಮೋಹಕ ತಾರೆಯಾಗಿ ಮಿಂಚಿದವರು. ತಮ್ಮ ಸಹಜ ನಟನೆಯಿಂದ ಮನೆ ಮನೆ ಮಾತಾದವರು. ಅಭಿ ಸಿನಿಮಾದ ಮೂಲಕ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಜೊತೆಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟ ದಿವ್ಯಾ ಸ್ಪಂದನ ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡಿದರು. ಸ್ಯಾಂಡಲ್​ವುಡ್​ನ ಉದಯೋನ್ಮುಖ ನಟ ಸತೀಶ್​ ನೀನಾಸಂ ಸಿಕ್ಕ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ಇಂದು ಕನ್ನಡದ ಸ್ಟಾರ್​ ನಟರ ಸಾಲಿಗೆ ಸೇರಿದ್ದಾರೆ ನಟ ನೀನಾಸಂ ಸತೀಶ್​.

ಹೊತ್ತಲ್ಲದ ಹೊತ್ತಲ್ಲಿ ಈ ಇಬ್ಬರ ವಿಷಯ ಈಗ್ಯಾಕೆ ಬಂತು ಅಂದುಕೊಂಡಿದ್ದೀರಾ? ಅಲ್ಲೇ ಇರೋದು ಕಹಾನಿ ಮೇ ಟ್ವಿಸ್ಟ್​. ನಮ್ಮ ನೆಲದ ದೇಸಿ ಪ್ರತಿಭೆ ಆದ ನೀನಾಸಂ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಲಾತ್ಮಕ ಸಿನಿಮಾಗಳನ್ನು ಮಾಡಿ ತಮ್ಮ ನಟನೆಯನ್ನು ಬೇರೆ ಭಾಷೆಯವರು ನೋಡಿ ಮೆಚ್ಚುವಂತೆ ಮಾಡಿದ್ದಾರೆ. ಇದೆಲ್ಲ ಸರಿ ಈಗ ಬಂದಿರೋ ವಿಷಯ ಏನಂದ್ರೆ ನೀನಾಸಂ ಸತೀಶ್​ ಅವರ ತಮಿಳು ಸಿನಿಮಾಗೆ ಮೋಹಕ ತಾರೆ ರಮ್ಯ ಶುಭ ಹಾರೈಸಿದ್ದಾರೆ.

blank

ಸತೀಶ್​ ​ ನೀನಾಸಂಗೆ ಶುಭ ಕೋರಿದ ಮೂಹಕ ತಾರೆ ರಮ್ಯ
ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಾಯಕನಾದ ಸತೀಶ್​

ನಾವು ಮೊದಲೇ ಹೇಳಿದ ಹಾಗೆ ಈ ಸ್ಟೋರಿ ಡಬಲ್​ ಧಮಾಕಾ ಸತೀಶ್​ ‘‘ಪಗೈವನುಕು ಅರುಳ್ವಾಯ್’’ ಎಂಬ ತಮಿಳು ಸಿನಿಮಾ ಮೂಲಕ ಕಾಲಿವುಡ್​ಗೆ ಗ್ರ್ಯಾಂಡ್​ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಇದು ಅನೀಶ್​ ಅಜಾಹಂದನ್​ ನಿರ್ದೇಶನದಲ್ಲಿ ಮೊದಲ ಬಾರಿಗೆ ತಮಿಳು ಕ್ಯಾಮರಾ ಗೆ ಪೋಸ್​ ಕೊಡಲು ಸಿದ್ಧರಾಗಿದ್ದಾರೆ ಕ್ವಾಟ್ಲೆ ಸತೀಶ್.

ಸತೀಶ್​ ನೀನಾಸಂ ತಮ್ಮ ಪರಿಶ್ರಮದಿಂದ ತಮಿಳು ಭಾಷೆಗೆ ಹೀರೋ ಆಗಿ ಆಯ್ಕೆ ಆಗಿರುವುದು ಕನ್ನಡಗರು ಹೆಮ್ಮೆ ಪಡುವ ವಿಚಾರವೇ. ಈ ಸಂತೋಷದ ವಿಚಾರಕ್ಕೆ ಸ್ಯಾಂಡಲ್​ವುಡ್​ ಮೋಹಕ ತಾರೆ ರಮ್ಯ ಕೂಡ ಸೇರ್ಪಡೆ ಆಗಿದ್ದಾರೆ. ಮೋಹಕ ತಾರೆ ರಮ್ಯ ತಮ್ಮ ಇನ್​ಸ್ಟಾಗ್ರಾಂ ಮೂಲಕ ‘‘ಪಗೈವನುಕು ಅರುಳ್ವಾಯ್’’ ತಮಿಳು ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಿ ಸತೀಶ್​ ನೀನಾಸಂಗೆ ಶುಭ ಆರೈಸಿದ್ದಾರೆ.

blank

ತುಂಬಾ ಉತ್ಸಾಹದಿಂದ ನಾನು ‘‘ಪಗೈವನುಕು ಅರುಳ್ವಾಯ್’’ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡುತ್ತಿದ್ದೇನೆ. ಕನ್ನಡದ ಹೆಮ್ಮೆಯ ನಟ ಸತೀಶ್​ ನೀನಾಸಂ ಅವರು ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ವಿಷಯ ಎಂದಿದ್ದಾರೆ.

blank

ಸಿನಿಮಾ ರಂಗದಿಂದ ದೂರಾದ ಮೇಲೆ ಸಾಮಾನ್ಯವಾಗಿ ರಮ್ಯಾ ಯಾವುದೇ ರೀತಿಯ ಆಡಿಯೋ ಲಾಂಚ್​, ಪೋಸ್ಟರ್​ ಲಾಂಚ್​ಗಳಿಂದ ತುಂಬಾ ದೂರ ಉಳಿದಿದ್ದಾರೆ. ಅವರ ಸಿನಿಮಾಗಳಿಗೂ ಈ ರೀತಿ ಫಂಕ್ಷನ್​ಗಳಿಗೆ ಭೇಟಿ ನೀಡಿದ್ದು ತುಂಬಾ ಅಪರೂಪ. ಆದ್ರೆ ಈಗ ರಮ್ಯಾ ಅವರ ಈ ಸಪೋರ್ಟ್​ ಮನೋಭಾವವನ್ನು ನೋಡಿ ಸ್ಯಾಂಡಲ್​ವುಡ್​ ಖುಷಿ ಪಟ್ಟಿರೋದಂತು ಸತ್ಯ. ಸತೀಶ್​ ಅವರ ತಮಿಳು ಸಿನಿಮಾ ಸೂಪರ್​ ಹಿಟ್​ ಆಗಲಿ ಹಾಗೂ ಈ ಸಿನಿಮಾದ ಮೂಲಕವಾದ್ರೂ ಮತ್ತೆ ರಮ್ಯಾ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿ ಎಂಬುದು ಚಿತ್ರ ಪ್ರೇಮಿಗಳ ಆಶಯ.

Source: newsfirstlive.com Source link