ಬಿಗ್​ ಬಿ, ಌಪಲ್​ ಬ್ಯೂಟಿ ಸಮಂತಾಗೂ ಗುಂಗು ಹಿಡಿಸೈತೆ ‘ಮನಿಕೆ ಮಗೆ ಹಿತೆ’ ಹಾಡು

ಬಿಗ್​ ಬಿ, ಌಪಲ್​ ಬ್ಯೂಟಿ ಸಮಂತಾಗೂ ಗುಂಗು ಹಿಡಿಸೈತೆ ‘ಮನಿಕೆ ಮಗೆ ಹಿತೆ’ ಹಾಡು

ಟಾಲಿವುಡ್​ನ ಆ್ಯಪಲ್​ ಬ್ಯೂಟಿ ಸಮಂತಾ, ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹಾಗೂ ಬಾಲಿವುಡ್ ಬೆಡಗಿ ಪರಿಣೀತಿ ಚೋಪ್ರಾಗೂ ಆ ಒಂದು ಹಾಡಿನ ಮೇಲೆ ಸಖತ್​ ಲವ್​ ಆಗಿದ್ಯಂತೆ. ಹಗಲು ರಾತ್ರಿ ಅನ್ನದೇ ಬರಿ ಈ ಒಂದು ಹಾಡನೇ ಯಾವಾಗಲೂ ಕೇಳಿದರಂತೆ. ಹಾಗಾದ್ರೆ ನಮ್ಮ ಇಂಡಿಯನ್​ ಬಿಗ್​ ಸೆಲೆಬ್ರೆಟಿಗಳ ನಿದ್ದೆಗೆಡಿಸಿರೋ ಆ ಹಾಡು ಯಾವುದು?.

blank

‘ಮನಿಕೆ ಮಗೆ ಹಿತೆ’ ಎಂಬ ಶ್ರೀಲಂಕನ್​ ಹಾಡೊಂದು ಸದ್ಯ ಭಾರತದಲ್ಲಿ ಸಖತ್​ ವೈರಲ್​ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ಹಾಡಿಗೆ ಫುಲ್​ ಫಿದಾ ಆಗಿದ್ದಾರೆ. ಟಾಲಿವುಡ್​ನ ಸ್ಟಾರ್​ ನಟಿ ಸಮಂತಾ, ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮತ್ತು ಬಾಲಿವುಡ್​ ಬ್ಯೂಟಿ ಪರಿಣೀತಿ ಚೋಪ್ರಾ ಕೂಡಾ ಈ ಹಾಡಿನ ಮೋಡಿಗೆ ಸೋತು ಹೋಗಿದ್ದಾರೆ.

ಹೌದು.. ಶ್ರೀಲಂಕನ್ ಗಾಯಕಿ ಯೋಹಾನಿ ಹಾಡಿರುವ ಈ ಅದ್ಬುತವಾದ ಹಾಡು ಬರಿ ಶ್ರೀಲಂಕದಲ್ಲಿ ಮಾತ್ರ ಅಲ್ಲ ಭಾರತದಲ್ಲೂ ಕೂಡ ಭಾರತದಲ್ಲಿ ಕೂಡ ಬಾರಿ ಸದ್ದು ಮಾಡಿದೆ. ಇನ್ನು ಟಾಲಿವುಡ್​ ನಟಿ ಸಮಂತಾಗೆ ಈ ‘ಮನಿಕೆ ಮಗೆ ಹಿತೆ’ ಹಾಡಿನ ಮೇಲೆ ಹುಚ್ಚು ಪ್ರೀತಿಯಾಗಿದ್ಯಂತೆ..

ಇನ್ನು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ಗೂ ಕೂಡ ಈ ಹಾಡು ಕರೆಂಟ್​ ಫೆವ್​ರೇಟ್​ ಹಾಡಾಗಿದ್ದು, ಅಮಿತಾಭ್​ ಬಚ್ಚನ್ ರಾತ್ರಿ ಹಗಲು ಈ ಹಾಡನ್ನೇ  ಕೇಳಿದರಂತೆ. ಇನ್ನು ಬಿಗ್​ ಬಿ ಮೊಮ್ಮಗಳು ನವ್ಯಾ ನವೇಲಿ ಅಮಿತಾಭ್​ ಬಚ್ಚನ್​ರ ಹಳೆ ಹಾಡಿಗೆ ‘ಮನಿಕೆ ಮಗೆ ಹಿತೆ’ ಹಾಡನ್ನ ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ ಮಾಡಿದ್ರು . ಸದ್ಯ ಅಮಿತಾಭ್​ ಬಚ್ಚನ್​ ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Parineeti Chopra (@parineetichopra)

 

Source: newsfirstlive.com Source link