ತಿರುಪತಿ ದರ್ಶನಕ್ಕೆ ಫೇಕ್ ಟಿಕೆಟ್; 143 ಜನರಿಗೆ ಲಕ್ಷಾಂತರ ರೂ. ವಂಚನೆ ಆರೋಪ

ತಿರುಪತಿ ದರ್ಶನಕ್ಕೆ ಫೇಕ್ ಟಿಕೆಟ್; 143 ಜನರಿಗೆ ಲಕ್ಷಾಂತರ ರೂ. ವಂಚನೆ ಆರೋಪ

ಚಿಕ್ಕಬಳ್ಳಾಪುರ: ತಿರುಪತಿ ವೆಂಕಟೇಶ್ವರನ ಹೆಸರಿನಲ್ಲಿ ದೇವರ ದರ್ಶನಕ್ಕೆ ಫೇಕ್ ಟಿಕೆಟ್ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದ ಟ್ರಾವೆಲ್ಸ್ ಏಜೆನ್ಸಿ ಮಾಲಕಿ ವಂಚನೆಗೊಳಗಾದವರು.

ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಜಿಲ್ಲೆಯ ಪಂಜಾ ವೇಮವರಂನ ರಮಣ ಪ್ರಸಾದ್ ಈ ವಂಚನೆ ಮಾಡಿದವನು ಎಂದು ಆರೋಪಿಸಲಾಗಿದೆ. ಈತ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಸಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾನಂತೆ. ಇವನು ಕೊಟ್ಟ ಟಿಕೆಟ್ ನಕಲಿ ಅಂತ ತಿಳಿದು ದರ್ಶನಕ್ಕೆ ಹೋದವರಿಗೆ ಶಾಕ್ ಆಗಿದೆ.

ಸುಮಾರು 143 ಜನರಿಂದ ತಲಾ 900 ರೂಪಾಯಿಯಂತೆ 1,28,700 ರೂ ಪಡೆದು.. ಇನ್ನೂ ಹಲವರಿಂದ 10 ಲಕ್ಷಕ್ಕೂ ಹೆಚ್ಚು ಹಣವನ್ನ ವಂಚಿಸಿದ್ದಾನೆ ಎನ್ನಲಾಗಿದೆ. ರಮಣ ಪ್ರಸಾದ್ ನನ್ನ ಬಂಧಿಸಿ ನ್ಯಾಯ ಕೊಡಿಸುವಂತೆ ಸೈಬರ್ ಪೊಲೀಸ್ ಠಾಣೆಗೆ ಪ್ರಿಯದರ್ಶಿನಿ ದೂರು ನೀಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link