ಟೀಂ ಇಂಡಿಯಾಗೆ ಕೊರೊನಾ ಕಾಟ.. ತಂಡದ ಮತ್ತೊಬ್ಬ ಸದ್ಯನಿಗೆ ಸೋಂಕು ಹಿನ್ನೆಲೆ ಅಭ್ಯಾಸ ರದ್ದು

ಟೀಂ ಇಂಡಿಯಾಗೆ ಕೊರೊನಾ ಕಾಟ.. ತಂಡದ ಮತ್ತೊಬ್ಬ ಸದ್ಯನಿಗೆ ಸೋಂಕು ಹಿನ್ನೆಲೆ ಅಭ್ಯಾಸ ರದ್ದು

ಇಂಡೋ- ಇಂಗ್ಲೆಂಡ್​ ನಡುವಿನ 5ನೇ ಪಂದ್ಯ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಮತ್ತೊಬ್ಬ ಸದಸ್ಯನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಹೀಗಾಗಿ ಇಂದಿನ ಅಭ್ಯಾಸವನ್ನ ಟೀಮ್​ ಇಂಡಿಯಾ ರದ್ದುಪಡಿಸಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ನಾಳೆಯಿಂದ ಆರಂಭವಾಗಲಿರುವ 5ನೇ ಟೆಸ್ಟ್​ ಪಂದ್ಯ ನಡೆಯೋದು ಅನುಮಾನ ಎಂದೂ ಹೇಳಲಾಗ್ತಿದೆ.

4ನೇ ಪಂದ್ಯ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾ ಹೆಡ್​ ಕೋಚ್​ ರವಿಶಾಸ್ತ್ರಿಗೆ ಕೊರೊನಾ ದೃಢಪಟ್ಟಿತ್ತು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂಬ ಹಿನ್ನೆಲೆಯಲ್ಲಿ ಬೌಲಿಂಗ್​ ಕೋಚ್​​ ಭರತ್​ ಅರುಣ್​, ಫೀಲ್ಡಿಂಗ್​ ಕೋಚ್​​ ಆರ್​ ಶ್ರೀಧರ್​​ ಹಾಗೂ ಫಿಸಿಯೋ ನಿತಿನ್​ ಪಟೇಲ್​ರನ್ನ ಐಸೋಲೇಶನ್​ನಲ್ಲಿ ಇರಿಸಲಾಗಿತ್ತು. ಸದ್ಯ 5 ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಿದ್ದು, ಸರಣಿ ಗೆಲುವಿನ ಉತ್ಸಾಹದಲ್ಲಿತ್ತು.

ಇದನ್ನೂ ಓದಿ:BREAKING: ಟಿ20 ವಿಶ್ವಕಪ್‌; ಭಾರತ ತಂಡ ಘೋಷಿಸಿದ ಬಿಸಿಸಿಐ, ಯಾರಿಗೆಲ್ಲಾ ಅವಕಾಶ?

Source: newsfirstlive.com Source link