ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಖ್ಯಾತಿಯ ಬ್ರೊಗೌಡ ಶಮಂತ್ ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಬ್ರೊ ಗೌಡ ಎಂದೇ ಖ್ಯಾತರಾಗಿರುವ ಶಮಂತ್ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿದ ವೀಕ್ಷಕರು ನೀವು ಒಳ್ಳೆಯ ಹುಡುಗನೇ ಬ್ರೊ ಎಂದು ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಫೋಟೋದಲ್ಲಿ ಶಮಂತ್ ಕೆಂಪು ಬಣ್ಣದ ನ್ಯೂ ಸ್ಟೈಲ್ ಕುರ್ತಾ ಹಾಕಿಕೊಂಡು ಸಖತ್ ಹ್ಯಾಂಡ್‍ಸಮ್ ಆಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

ಶಮಂತ್ ಬಿಗ್‍ಬಾಸ್ ಮನೆಯಲ್ಲಿ ತನ್ನ ರ್ಯಾಂಪ್ ಮತ್ತು ಸುಮಧುರ ಧ್ವನಿಯ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದು, ಶೋನಿಂದ ಹೊರಗೆ ಬಂದ ನಂತರ ಹೊಸ ಸಾಂಗ್ ನಲ್ಲಿ ಬ್ಯುಸಿಯಾಗಿರುವುದಾಗಿ ಹೇಳಿದ್ದರು. ಅದು ಅಲ್ಲದೇ ಬ್ರಹ್ಮಗಂಟು ಖ್ಯಾತಿಯ ಗೀತಾ ಜೊತೆಗೆ ‘ಒಂದೊಂದೆ ಬಚ್ಚಿಟ್ಟ ಮಾತು’ ಸಾಂಗ್ ಅನ್ನು ಹೊಸ ರೀತಿ ಹಾಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಒಬ್ಬ ವೀಕ್ಷಕ, ಬ್ರೊ ನಿಮ್ಮ ಧ್ವನಿ ಸಖತ್ ಆಗಿದೆ. ನಮ್ಮ ಕನ್ನಡ ಸಿನಿಮಾಗೆ ಒಳ್ಳೆಯ ಸಿಂಗರ್. ನಿಮ್ಮ ಪ್ರತಿಭೆಯನ್ನು ನಿರ್ದೇಶಕರು ಮತ್ತು ನಿರ್ಮಾಪಕರು ಗುರುತಿಸಿ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಆಶಿಸಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

Source: publictv.in Source link