ಡೆಂಗ್ಯೂ ಜ್ವರಕ್ಕೆ ಮೈಸೂರಿನ 9 ವರ್ಷದ ಬಾಲಕಿ ಸಾವು.. ಗ್ರಾಮದಲ್ಲಿ ಆತಂಕ

ಡೆಂಗ್ಯೂ ಜ್ವರಕ್ಕೆ ಮೈಸೂರಿನ 9 ವರ್ಷದ ಬಾಲಕಿ ಸಾವು.. ಗ್ರಾಮದಲ್ಲಿ ಆತಂಕ

ಮೈಸೂರು: ಡೆಂಗ್ಯೂ ಜ್ವರಕ್ಕೆ ಒಂಭತ್ತು ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ಬೊಮ್ಮೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೊಮ್ಮೆನಹಳ್ಳಿ ಗ್ರಾಮದ ಶಿವನಂಜು ಎಂಬುವರ ಮಗಳು ಸ್ಪಂದನ(9) ಡೆಂಗ್ಯೂ ಜ್ವರಕ್ಕೆ ಬಲಿಯಾದ ಬಾಲಕಿ. ಸ್ಪಂದನಾ ಬೊಮ್ಮೆನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಳು. ಕಳೆದ ಮೂರು-ನಾಲ್ಕು ದಿನಗಳಿಂದ ಬಾಲಕಿ ಜ್ವರದಿಂದ ಬಳಲುತ್ತಿದ್ದಳು. ಭೇರ್ಯ ಗ್ರಾಮದ ಖಾಸಗಿ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು.. ಗ್ರಾಮದಲ್ಲಿ ಜ್ವರದಿಂದ ಮೂರು ನಾಲ್ಕು ‌ಮಕ್ಕಳು ಜ್ವರದಿಂದ ಬಳಲುತ್ತಿದ್ದು ನಮ್ಮ ಆಶಾ ಕಾರ್ಯಕರ್ತೆಯರ ಮಾಹಿತಿ ಮೇರೆಗೆ ಗ್ರಾಮಕ್ಕೆ ಭೇಟಿ ‌ನೀಡಿ‌ ಪರಿಶೀಲಿಸಲಾಗಿ ಗ್ರಾಮದಲ್ಲಿ ಸ್ವಚ್ಚತೆಗಾಗಿ ತಾ.ಪಂ. ಇಓ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Source: newsfirstlive.com Source link