ಗಾಳ ಹಾಕಿದ್ದ ಸಿದ್ದರಾಮಯ್ಯಗೆ ದೊಡ್ಡಗೌಡರು ಕೊಟ್ಟರು ‘ಮಾಸ್ಟರ್​ ಸ್ಟ್ರೋಕ್.’.?

ಗಾಳ ಹಾಕಿದ್ದ ಸಿದ್ದರಾಮಯ್ಯಗೆ ದೊಡ್ಡಗೌಡರು ಕೊಟ್ಟರು ‘ಮಾಸ್ಟರ್​ ಸ್ಟ್ರೋಕ್.’.?

ಮೈಸೂರು: ಜೆಡಿಎಸ್​​​ ತೊರೆದು ಕಾಂಗ್ರೆಸ್​​ ಸೇರಲು ಮುಂದಾಗಿರುವ ಮಾಜಿ ಸಚಿವ ಜಿಟಿ ದೇವೇಗೌಡರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ದೊಡ್ಡಗೌಡರು ಖುದ್ದು ಅಖಾಡಕ್ಕೆ ಇಳಿದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ ಜಿ.ಟಿ. ದೇವೇಗೌಡರನ್ನ ಮನವೊಲಿಸುವಲ್ಲಿ ದೇವೇಗೌಡರು ಸಫಲರಾಗಿದ್ದಾರೆ ಎನ್ನಲಾಗಿದೆ. ತಿರುಪತಿಯಲ್ಲಿ ಭೇಟಿಯಾದ ಬಳಿಕ ಬೆಂಗಳೂರಲ್ಲಿ ಮತ್ತೊಮ್ಮೆ ಇಬ್ಬರು ನಾಯಕರು ಭೇಟಿಯಾಗಿದ್ದಾರೆ.

ಇಂದು ಅಜ್ಞಾತ ಸ್ಥಳಕ್ಕೆ ಜಿ‌‌.ಟಿ.ದೇವೆಗೌಡರನ್ನ ಕರೆಸಿಕೊಂಡು ಹೆಚ್‌ಡಿಡಿ ಮನವೊಲಿಸಿದ್ದಾರೆ. ಜಿಟಿಡಿ ಭೇಟಿಯಾದ ಕೂಡಲೇ ಮೈಸೂರಿನತ್ತ ಜೆಡಿಎಸ್ ‌ವರಿಷ್ಠರು ಪ್ರಯಾಣ ಬೆಳೆಸಿದ್ದಾರೆ. ಮೈಸೂರಲ್ಲಿ ಜೆಡಿಎಸ್ ಮುಖಂಡರ ಸಭೆಯನ್ನ ದೇವೇಗೌಡರು ನಡೆಸಲಿದ್ದಾರೆ.

ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರ ಜೊತೆ ದೇವೇಗೌಡರು ಚರ್ಚೆ ನಡೆಸಲಿದ್ದಾರೆ. ಜಿಟಿಡಿಗೆ ಗಾಳ ಹಾಕಿದ್ದ ಸಿದ್ದರಾಮಯ್ಯಗೆ ತಿರುಗೇಟು ಕೊಡಲು ದೊಡ್ಡಗೌಡರು ಮುಂದಾಗಿದ್ದಾರೆ. ಜಿಟಿಡಿಯನ್ನ ಉಳಿಸಿಕೊಳ್ಳಲು ಹೆಚ್​ಡಿಡಿ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ ಅಂತಾ ಹೇಳಲಾಗಿದೆ.

Source: newsfirstlive.com Source link