ಮಧು ಬಂಗಾರಪ್ಪ ‘ರಾಜಕೀಯ ಭವಿಷ್ಯ’ಕ್ಕೆ ಶುಭ ಹಾರೈಸಿದ ರಾಹುಲ್ ಗಾಂಧಿ

ಮಧು ಬಂಗಾರಪ್ಪ ‘ರಾಜಕೀಯ ಭವಿಷ್ಯ’ಕ್ಕೆ ಶುಭ ಹಾರೈಸಿದ ರಾಹುಲ್ ಗಾಂಧಿ

ನವದೆಹಲಿ: ಇಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್​ ನಾಯಕ ಮಧು ಬಂಗಾರಪ್ಪ ಭೇಟಿ ಮಾಡಿದರು.

ಇತ್ತೀಚೆಗಷ್ಟೇ ಮಧು ಬಂಗಾರಪ್ಪ ಜೆಡಿಎಸ್​ ತೊರೆದು ಕಾಂಗ್ರೆಸ್​ ಪಕ್ಷವನ್ನ ಸೇರಿಕೊಂಡಿದ್ದಾರೆ. ಉಭಯ ನಾಯಕರು, ಕೆಲ ಕಾಲ ಚರ್ಚೆ ನಡೆಸಿ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿನಿಮಯ ಮಾಡಿಕೊಂಡರು.

ಭೇಟಿ ವೇಳೆ ಮಧು ಬಂಗಾರಪ್ಪ ಅವರು ಕಾಂಗ್ರೆಸ್​ ಸೇರ್ಪಡೆಯಾಗಿರೋದಕ್ಕೆ ರಾಹುಲ್ ಗಾಂಧಿ ಹರ್ಷ ವ್ಯಕ್ತಪಡಿಸಿದರು. ಅಲ್ಲದೇ ದಿವಂಗತ ಎಸ್.ಬಂಗಾರಪ್ಪ ಅವರ ಕಾಂಗ್ರೆಸ್​ ಜೊತೆಗಿನ ಒಡನಾಟ ಮತ್ತು ಮಾಜಿ ಪ್ರಧಾನಿಗಳಾದ ದಿವಂಗತ ಇಂದಿರಾ ಗಾಂಧಿ ಹಾಗೂ ದಿವಗಂತ ರಾಜೀವ್ ಗಾಂಧಿಯವರ ಜೊತೆಗಿನ ಒಡನಾಟವನ್ನು ರಾಹುಲ್ ಗಾಂಧಿ ಹಂಚಿಕೊಂಡರು.

blank

ಮಾನ್ಯ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿ ನೀಡಿದ್ದ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಕ್ಷ ಬಲವರ್ಧನೆ ಹಾಗೂ ಇನ್ನಿತರ ರಾಜಕೀಯ ವಿದ್ಯಮಾನಗಳ ಬಗ್ಗೆ ಸಲಹೆ ನೀಡಿ ಮಧು ಬಂಗಾರಪ್ಪ ಅವರಿಗೆ ಶುಭ ಹಾರೈಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಕರ್ನಾಟಕ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಇದ್ದರು.

Source: newsfirstlive.com Source link