ಬರೋಬ್ಬರಿ 2 ವರ್ಷಗಳ ಬಳಿಕ ನಾಳೆಯಿಂದ ಚಿತ್ರ ಮಂದಿರಕ್ಕೆ ಲಗ್ಗೆ ಇಡೋಕೆ ಸಜ್ಜಾದ ‘ಲಂಕೆ’ಯ ರಾಮ್

ಬರೋಬ್ಬರಿ 2 ವರ್ಷಗಳ ಬಳಿಕ ನಾಳೆಯಿಂದ ಚಿತ್ರ ಮಂದಿರಕ್ಕೆ ಲಗ್ಗೆ ಇಡೋಕೆ ಸಜ್ಜಾದ ‘ಲಂಕೆ’ಯ ರಾಮ್

ಗಣೇಶ ಹಬ್ಬದ ದಿನವೇ ‘ಲಂಕೆ’ಯ ರಾಮ್​ ಆಗಿ ನಟ ಲೂಸ್​ ಮಾದ ಯೋಗಿ ಪ್ರೇಕ್ಷಕ ಪ್ರಭುಗಳಿಗೆ ದರ್ಶನ ನೀಡಲಿದ್ದಾರೆ. ಬರೋಬ್ಬರಿ 2ವರ್ಷಗಳ ನಂತ್ರ ಯೋಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ತಿದ್ದು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮಾಸ್​ ಕಮರ್ಷಿಯಲ್​ ಚಿತ್ರದ ಮೂಲಕ ನಟ ಯೋಗಿ ಈಗ ಹಬ್ಬದ ದಿನವೇ ಪ್ರೇಕ್ಷಕ ಪ್ರಭುಗಳ ತೇರನ್ನು ಎಳೆಯೋಕೆ ಸಜ್ಜಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಮಾಸ್ ಮ್ಯಾನರಿಸಂನಿಂದಲೇ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿ ಕೊಂಡಿದ್ದಾರೆ ನಟ ಲೂಸ್ ಮಾದ ಯೋಗೇಶ್. 2ವರ್ಷಗಳ ನಂತ್ರ ಯೋಗಿ ಗಣೇಶ ಹಬ್ಬದ ದಿನವೇ ಲಂಕೆ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ನಾಳೆ ರಾಜ್ಯಾದ್ಯಂತ ‘ಲಂಕೆ’ ಚಿತ್ರ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ..

ಪಕ್ಕಾ ಕಮರ್ಷಿಯಲ್​ ಚಿತ್ರವಾದ ಲಂಕೆ ಚಿತ್ರಕ್ಕೆ ರಾಮ್ ಪ್ರಸಾದ್ ಎಂ.ಡಿ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿದ್ರೆ. ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ​ ಬೆಡಗಿ ಕೃಷಿತಾಪಂಡ ಯೊಗಿ ಜೊತೆ ಡ್ಯುಯೇಟ್​ ಹಾಡಿದ್ದಾರೆ.

blank

ಲಂಕೆ ಚಿತ್ರ ಸ್ಟಾರ್​ ಕಾಸ್ಟ್​ನಿಂದಲೇ ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ಅಲ್ಲದೆ ಲಂಕೆ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ, ನಟ ದಿವಂಗತ ಸಂಚಾರಿ ವಿಜಯ್ ತುಂಬಾ ವಿಶೇಷವಾದ ಪಾತ್ರದಲ್ಲಿ ನಟಿಸಿರೋದು ಲಂಕೆ ಚಿತ್ರದ ಹೈಲೇಟ್ ಆಗಿದೆ..

ರಾಮಯಣದ ಲಂಕೆಯಲ್ಲಿ ಒಬ್ಬ ಸೂರ್ಪನಕಿ ಇದ್ರೆ, ಯೋಗಿಯ ಲಂಕೆಯಲ್ಲಿ ಮೂರು ಜನ ಸೂರ್ಪನಕಿಯರಿದ್ದಾರೆ. ಚಿತ್ರದಲ್ಲಿ ಕಾವ್ಯ ಶೆಟ್ಟಿ,ಗಾಯಿತ್ರಿ ಜಯರಾಂ, ಎಸ್ಟರ್ ನರೋನ ಮೂರು ಜನ ನಾಯಕಿಯರು ನೆಗೆಟಿವ್ ಶೆಡ್​ನಲ್ಲಿ ಕಾಣಿಸಿರೋದು ಲಂಕೆ ಚಿತ್ರದ ಮತ್ತೋಂಟ್​ ಹೈಲೆಟ್ಸ್​ ಆಗಿದೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮಪ್ರಸಾದ್ ನಿರ್ಮಾಣ ಮಾಡಿರುವ ಲಂಕೆ ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ.

blank

ಕೊರೊನಾ 2ನೇ ಲಾಕ್​ ಡೌನ್​ ನಂತ್ರ ರಿಲೀಸ್​ ಆಗ್ತಿರುವ ಮೊದಲ ಸ್ಟಾರ್​ ಚಿತ್ರ ಲಂಕೆಯಾಗಿದ್ದು, ಥಿಯೇಟರ್​ ನಲ್ಲಿ 50 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ಇದ್ದರೂ, ನಿರ್ಮಾಪಕರು ಧೈರ್ಯ ಮಾಡಿ ಸಿನಿಮಾವನ್ನ ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಯೋಗಿಯ ಈಹಿಂದಿನ ಯಾವ ಚಿತ್ರಕ್ಕೂ ಮಾಡದ ರೀತಿಯಲ್ಲಿ ಲಂಕೆ ಚಿತ್ರಕ್ಕೆ ಅದ್ಧೂರಿ ಪ್ರಚಾರ ಮಾಡಿದ್ದಾರೆ. ಕೊರೊನ ಅತಂಕದಲ್ಲಿ ಲಂಕೆ ಸಿನಿಮಾ ಥಿಯೇಟರ್​ಗೆ ಬರ್ತಿದ್ದು, ಚಿತ್ರವನ್ನು ಪ್ರೇಕ್ಷಕ ಪ್ರಭುಗಳು ಯಾವ ರೀತಿ ರಿಸೀವ್​ ಮಾಡ್ತಾರೆ ಕಾದು ನೋಡಬೇಕು.

Source: newsfirstlive.com Source link