ಟೀಂ ಇಂಡಿಯಾ ಮೆಂಟರ್ ಆಗಿ ಧೋನಿ ನೇಮಕ.. ಹಿತಾಸಕ್ತಿ ಸಂಘರ್ಷದಿಂದ ಮಾಹಿ ವಿರುದ್ಧ ದೂರು

ಟೀಂ ಇಂಡಿಯಾ ಮೆಂಟರ್ ಆಗಿ ಧೋನಿ ನೇಮಕ.. ಹಿತಾಸಕ್ತಿ ಸಂಘರ್ಷದಿಂದ ಮಾಹಿ ವಿರುದ್ಧ ದೂರು

ಟೀಮ್ ಇಂಡಿಯಾ ಮಾಜಿ ನಾಯಕ ಎಮ್​.ಎಸ್​.ಧೋನಿ ವಿರುದ್ಧ ಹಿತಾಸಕ್ತಿ ಸಂಘರ್ಷ ದೂರು ದಾಖಲಾಗಿದೆ. ಟಿ20 ವಿಶ್ವಕಪ್ ಟೂರ್ನಿ ವೇಳೆ ಟೀಮ್ ಇಂಡಿಯಾ ಮೆಂಟರ್ ಆಗಿ ಎಮ್​.ಎಸ್.ಧೋನಿ ನೇಮಿಸಲಾಗಿದೆ.

ಇದನ್ನ ಪ್ರಶ್ನಿಸಿ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ಗೆ ಹಿತಾಸಕ್ತಿ ಸಂಘರ್ಷ ದೂರು ದಾಖಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಸದಸ್ಯ ಸಂಜೀವ್ ಗುಪ್ತಾ, ಧೋನಿಯ ನೇಮಕಾತಿಯು ಆಸಕ್ತಿಯ ಸಂಘರ್ಷದ ಷರತ್ತಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೌನ್ಸಿಲ್ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಒಬ್ಬ ವ್ಯಕ್ತಿ ಎರಡು ಹುದ್ದೆಗಳನ್ನು ಹೊಂದುವಂತಿಲ್ಲ. ಆದ್ರೆ, ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫ್ರಾಂಚೈಸಿ ನಾಯಕರು ಆಗಿದ್ದಾರೆ. ಈ ಮೂಲಕ ಬಿಸಿಸಿಐ ಸಂವಿಧಾನದ ಕಲಂ 38 (4) ಉಲ್ಲಂಘನೆಯಾಗಿದೆ. ಹೀಗಾಗಿ ಧೋನಿ ನೇಮಕ ಬಿಸಿಸಿಐ ಕಾನೂನಿಗೆ ವಿರುದ್ಧವಾಗಿದೆ.

Source: newsfirstlive.com Source link