ಟಾರ್ಚರ್​ ಸಾಂಗ್​ ಬೆನ್ನಲ್ಲೇ ಚಾರ್ಲಿ 777 ಸಿನಿಮಾದಿಂದ ಬಂದ ಸಿಹಿ ಸುದ್ದಿ ಏನು?

ಟಾರ್ಚರ್​ ಸಾಂಗ್​ ಬೆನ್ನಲ್ಲೇ ಚಾರ್ಲಿ 777 ಸಿನಿಮಾದಿಂದ ಬಂದ ಸಿಹಿ ಸುದ್ದಿ ಏನು?

ಕಳೆದ ಎರಡು ದಿನಗಳ ಹಿಂದೆಯಷ್ಟೇ ಟಾರ್ಚರ್​ ಸಾಂಗ್​ ಬಿಡುಗಡೆ ಮಾಡುತ್ತೀವಿ ಅಂತೇಳಿ ರಕ್ಷಿತ್​ ಶೆಟ್ಟಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದ್ರು. ಇಂದು ಆ ಕುತೂಹಲಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ಟಾರ್ಚರ್​ ಸಾಂಗ್​ ಈಗಾಗಲೇ ಯ್ಯೂಟಬ್​ ನಲ್ಲಿ ಟ್ರೆಂಡ್​ ಸೃಷ್ಟಿ ಮಾಡೋಕೆ  ಶುರು ಮಾಡಿದ್ದು, ಚಿತ್ರ ಪ್ರೇಮಿಗಳ ಮನ ಗೆದ್ದಿದೆ.
ರಕ್ಷಿತ್​ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಚಾರ್ಲಿ 777 ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಷಯವಾಗಿ ಚಾರ್ಲಿ ಸದ್ದು ಮಾಡುತ್ತಲೇ ಇದ್ದಾನೆ.. ಸದ್ಯ ಬಿಡುಗಡೆಯಾಗಿರುವ ಟಾರ್ಚರ್​ ಸಾಂಗ್​ನ್ನು ಚಿತ್ರಪ್ರೇಮಿಗಳು ಅಪ್ಪಿಕೊಳ್ಳುವುದರ ಜೊತೆಗೆ ಒಪ್ಪಿಕೊಂಡಿದ್ದಾರೆ.
blank
ಟಾರ್ಚರ್​ ಸಾಂಗ್​ ಬಿಡುಗಡೆ ಮಾಡಿರುವ ಚಾರ್ಲಿ ಅಂಡ್​ ಟೀಂ, ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ..ಅದೇನಂದ್ರೆ ಇದೇ ವರ್ಷದ ಕೊನೆ ತಿಂಗಳಲ್ಲಿ ಅಂದ್ರೆ ಡಿಸೆಂಬರ್​ 31 ನೇ ತಾರೀಖು  ಚಾರ್ಲಿ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಅಧಕೃತ ಘೋಷಣೆ ಮಾಡಿದ್ದಾರೆ. ಮೊದಲೇ ಹೇಳಿ ಕೇಳಿ ಡಿಸೆಂಬರ್​ ತಿಂಗಳು ರಕ್ಷಿತ್​ ಶೆಟ್ಟಿಗೆ ಲಕ್ಕಿ ಮಂತ್​​.. 2019 ರ ಡಿಸೆಂಬರ್​ 27 ನೇ ತಾರೀಖು ಅವನೇ ಶ್ರೀಮನ್ನಾರಾಯಣ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು.
blank
ಜಸ್ಟ್​ ಸಾಂಗ್​ ಬಿಟ್ಟು ಹಲ್​ ಚಲ್​ ಸೃಷ್ಟಿ ಮಾಡಿರೋ ಚಾರ್ಲಿ ಸಿನಿಮಾ ಹೇಳಿದ ಡೇಟ್​ಗೆ ರಿಲೀಜ್​ ಆಗುತ್ತೋ ಇಲ್ಲಾ ಕೊರೊನಾ ಕಾರಣ ಹೇಳಿ ಮುಂದೆ ಹೋಗುತ್ತೋ ಕಾದು ನೋಡಬೇಕಿದೆ.

Source: newsfirstlive.com Source link