‘ನಿಮ್ಮ ಮಗುವಿನ ತಂದೆ ಯಾರು..?’ ಈ ಪ್ರಶ್ನೆಗೆ ನುಸ್ರತ್ ಕೊಟ್ಟ ಉತ್ತರ ಏನು ಗೊತ್ತಾ..?

‘ನಿಮ್ಮ ಮಗುವಿನ ತಂದೆ ಯಾರು..?’ ಈ ಪ್ರಶ್ನೆಗೆ ನುಸ್ರತ್ ಕೊಟ್ಟ ಉತ್ತರ ಏನು ಗೊತ್ತಾ..?

ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಮಗುವಿನ ತಂದೆ ಯಾರು ಎಂಬ ವಿಷಯದಲ್ಲಿ ಮೌನ ಮುರಿದಿದ್ದಾರೆ. ಆಗಸ್ಟ್​ 26 ರಂದು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಕೋಲ್ಕತ್ತದಲ್ಲಿ ಸಲೂನ್ ಒಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗೆ ಪ್ರತ್ಯಕ್ಷರಾದ ನುಸ್ರತ್ ಜಹಾನ್​ರಿಗೆ ಮೊದಲು ಎದುರಾಗಿದ್ದ ಪ್ರಶ್ನೆಯೇ ತಮ್ಮ ಮಗುವಿನ ತಂದೆ ಯಾರು? ಅನ್ನೋದು. ಈ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗುವಿನ ತಂದೆ ಯಾರು ಅನ್ನೋದು ಆ ತಂದೆಗೆ ಮಾತ್ರ ಗೊತ್ತು ಅಂತಾ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನುಸ್ರತ್ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಒಂದು ಮಹಿಳೆಗೆ ಮಾಡುವ ಅವಮಾನ ಎಂದಿದ್ದಾರೆ. ನಾನು ಹಾಗೂ ಯಶ್ ದಾಸ್ ಗುಪ್ತಾ ಮಗುವಿನ ಜೊತೆ ಖುಷಿಯಾಗಿದ್ದೇವೆ ಅಂತಲೂ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.

Source: newsfirstlive.com Source link