‘ನಾನು ಎಲ್ಲೂ ಓಡಿ ಹೋಗಿಲ್ಲ..’ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾದ ಅನುಶ್ರೀ.. ಹೇಳಿದ್ದಿದು.!

‘ನಾನು ಎಲ್ಲೂ ಓಡಿ ಹೋಗಿಲ್ಲ..’ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾದ ಅನುಶ್ರೀ.. ಹೇಳಿದ್ದಿದು.!

ಬೆಂಗಳೂರು: ಡ್ರಗ್ ಕೇಸ್​​ಗೆ ಸಂಬಂಧಿಸಿದಂತೆ ನಿರೂಪಕಿ ಅವರ ಹೆಸರು ಮತ್ತೊಮ್ಮೆ ಚರ್ಚೆಗೆ ಬಂದ ಬೆನ್ನಲ್ಲೇ ಅನುಶ್ರೀ ಮುಂಬೈಗೆ ಹೋಗಿದ್ದರು. ಇದೀಗ ಮುಂಬೈನಿಂದ ಅನುಶ್ರೀ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬೆಂಗಳೂರಿಗೆ ಬರುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನುಶ್ರೀ.. ನಾನು ಎಲ್ಲಿಯೂ ಓಡಿ ಹೋಗಿಲ್ಲ ಎಂದಿದ್ದಾರೆ.

ಮುಂಬೈನಿಂದ ಬೆಂಗಳೂರಿನ ಕಮಲಮ್ಮನ ಗುಂಡಿ ಬಳಿ ಇರುವ ನಿವಾಸಕ್ಕೆ ವಾಪಸ್ಸಾದ ಅನುಶ್ರೀ.. ಪ್ರಶಾಂತ್ ಸಂಬರ್ಗಿ ಅವರು ಕಾನೂನು ಮೂಲಕ ಹೋಗಲಿ.. ನಮ್ಮ ಸಮಾಜದಲ್ಲಿ ಕಾನೂನು ಅಂತ ಇದೆ.. ನಾನು ಪೊಲೀಸರಿಗೆ ಏನೇನು ಹೇಳಬೇಕು ಎಲ್ಲಾ ಹೇಳಿದ್ದೇನೆ.. ಆಗಲೂ ಉತ್ತರ ಕೊಟ್ಟಿದ್ದೇನೆ.. ಈಗಲೂ ಉತ್ತರ ಕೊಟ್ಟಿದ್ದೇನೆ.. ನಾನು ಒಬ್ಬಳೇ ಬಂದು ಉತ್ತರ ಕೊಟ್ಟಿದ್ದೇನೆ.. ಈಗಲೂ ಉತ್ತರ ಕೊಟ್ಟಿದ್ದೇನೆ.. ಒಬ್ಬಳೇ ಇದ್ದೇನೆ. ನನ್ನ ಬಗ್ಗೆ ಮಾಧ್ಯಮದಲ್ಲಿ ಏನೇನೋ ಓಡ್ತಿದೆ ಎಂದು ಹೇಳಿದ್ದಾರೆ.

ನಾನು ಬೆಂಗಳೂರಿನಿಂದ ಮುಂಬೈ ಗೆ ನಾನು ಹೋಗಿದ್ದೆ.. ಕೆಲಸದತ್ತ ನಿಮಿತ್ತ ನಾನು ಹೋಗಿದ್ದೆ, ಸೋಮವಾರ ನಾನು ಬುಕ್ ಮಾಡಿದ್ದೆ.. ರಿಟರ್ನ್ ಕೂಡ ಸೋಮವಾರ ಬುಕ್‌ಮಾಡಿದ್ದೆ.. ನಾನೆಲ್ಲೂ ಹಾರಿ ಹೋಗಿಲ್ಲ, ನಾನು ಈ ಪ್ರಕರಣದ ಮುಂಚೆಯೇ ಹೋಗಿದ್ದೆ ಎಂದು ಹೇಳಿದ್ದಾರೆ,

Source: newsfirstlive.com Source link