ಗಡಿ ಹೊರಗೆ ನೆಗೆಟಿವ್​, ಗಡಿ ಒಳಗೆ ಪಾಸಿಟಿವ್..​ ಉಡುಪಿ ಜಿಲ್ಲಾಡಳಿತದ ನಿದ್ದೆಗೆಡಿಸಿದ ಕೊರೊನಾ

ಗಡಿ ಹೊರಗೆ ನೆಗೆಟಿವ್​, ಗಡಿ ಒಳಗೆ ಪಾಸಿಟಿವ್..​ ಉಡುಪಿ ಜಿಲ್ಲಾಡಳಿತದ ನಿದ್ದೆಗೆಡಿಸಿದ ಕೊರೊನಾ

ಉಡುಪಿ: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಕೇರಳದಿಂದ ಬಂದವರಲ್ಲಿಯೇ ಸೋಂಕು ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕಕ್ಕೀಡು ಮಾಡಿದೆ.

ಹೌದು ಜಿಲ್ಲೆಗೆ ಕೇರಳದಿಂದ ಆಗಮಿಸುವರ ವರದಿಗಳು ಆರಂಭದಲ್ಲಿ ನೆಗೆಟಿವ್​ ಇದ್ದರೂ, ನಂತರದ ಬೆರಳಣಿಕೆ ದಿನಗಳಲ್ಲಿ RTPCR ವರದಿಯಲ್ಲಿ ಪಾಸಿಟಿವ್​ ಕಂಡು ಬರುತ್ತಿದೆ. ಉಡುಪಿಯಲ್ಲಿ ಇಂತಹ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಾಣುತ್ತಿದ್ದು, ಸದ್ಯ ಕೇರಳದ ವಿದ್ಯಾರ್ಥಿಗಳೇ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದಾರೆ ಎನ್ನುವಂತಾಗಿದೆ. ಆದ್ದರಿಂದ ಅಕ್ಟೋಬರ್ ಅಂತ್ಯದವರೆಗೂ ಕೇರಳದಿಂದ ಬರುವವರಿಗೆ ಹಾಗೂ ಹೋಗುವವರಿಗೆ ಪ್ರಯಾಣ ಮುಂದೂಡಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ಅಕ್ಟೋಬರ್ ಅಂತ್ಯದವರೆಗೂ ಕೇರಳ ಪ್ರಯಾಣ ನಿರ್ಬಂಧಗೊಳಿದುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.

Source: newsfirstlive.com Source link