ವಿಕ್ರಾಂತ್​ ರೋಣನ ನಂತರ ಸೆಟ್ಟೇರುತ್ತಾ ಬಹು ನಿರೀಕ್ಷಿತ ‘ಅಶ್ವತ್ಥಾಮ’? ಏನಂತಾರೆ ರಂಗಿತರಂಗದ ಸಾರಥಿ

ವಿಕ್ರಾಂತ್​ ರೋಣನ ನಂತರ ಸೆಟ್ಟೇರುತ್ತಾ ಬಹು ನಿರೀಕ್ಷಿತ ‘ಅಶ್ವತ್ಥಾಮ’? ಏನಂತಾರೆ ರಂಗಿತರಂಗದ ಸಾರಥಿ

ವಿಕ್ರಾಂತ್​ ರೋಣ ನಂತ್ರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಿನಿ ಹೆಜ್ಜೆ ಏನು..? ಎಂಬ ಪ್ರಶ್ನೆ ಕಿಚ್ಚನ ಅಭಿಮಾನಿಗಳಷ್ಟೆ ಅಲ್ಲ ಸಿನಿ ಪಡಿತರಲ್ಲು ಮೂಡಿತು. ನಮ್ಮಇಂಡಸ್ಟ್ರಿಯ ಸ್ಟಾರ್ ಡೈರೆಕ್ಟರ್​ ಜೊತೆ ಸಿನಿಮಾ ಮಾಡ್ತಾರ ಅಥವಾ ಸುದೀಪ್​ ಅವರೆ ಡೈರೆಕ್ಟರ್ ಕ್ಯಾಪ್​ ತೋಡ್ತಾರ. ಹೀಗೆ ಹತ್ತು ಹಲವು ಪ್ರಶ್ನೆ ಗಾಂಧಿನಗರದಲ್ಲಿ ಹರಿದಾಡ್ತಿತ್ತು. ಅದ್ರೆ ಈಗ ಈ ಎಲ್ಲಾ ಪ್ರಶ್ನೆಗಳು ಅಂತೆಕಂತೆಗಳು ಅನ್ನೋವಂತೆ, ಹೊಸ ವಿಷ್ಯವೊಂದು ರನ್ನನ ಅಭಿಮಾನಿ ಬಳಗದಲ್ಲಿ ಮೊಳಕೆಯೊಡೆದಿದೆ. ಹಾಗಾದ್ರೆ ಸುದೀಪ್​ ಅವರ ಸಿನಿ ನಡೆಯ ಬಗ್ಗೆ ಹೊಸದಾಗಿ ಹುಟ್ಟಿಕೊಂಡಿರುವ ಆ ವಿಷ್ಯವಾದ್ರು ಏನು ಅಂತ ನೋಡ್ಕೋಂಡ್​ ಬರೋಣ ಬನ್ನಿ.

ಕಿಚ್ಚ ಸುದೀಪ್​ ಅವರ ಸಿನಿಮಾಗಳ ಬಗ್ಗೆ ಅವರಿಗಿಂತ ಅವರನ್ನ ಅರಾಧಿಸೋ ಹೃದಯಗಳಿಗೆ ಹೆಚ್ಚು ಕುತೂಹಲ ಇರುತ್ತೆ. ಸದ್ಯ ಕಿಚ್ಚನ ಕೋಟಿಗೊಬ್ಬ 3 ಮತ್ತು ವಿಕ್ರಾಂತ್​ ರೋಣ ಚಿತ್ರಗಳು ರಿಲೀಸ್​ಗೆ ರೆಡಿಯಾಗಿವೆ.. ಈ ಚಿತ್ರಗಳನ್ನ ಕಣ್ತುಂಬಿ ಕೊಳ್ಳುವ ಮೊದಲೇ ಸುದೀಪ್​ ಅವರ ಅಭಿಮಾನಿ ಬಳಗದಲ್ಲಿ ವೀರ ಮದಕರಿಯ ಹೊಸ ಸಿನಿಮಾ ಯಾವುದು ಎಂಬ ಚರ್ಚೆ ಶುರುವಾಗಿದೆ.

blank

ಅಭಿನಯ ಚಕ್ರವರ್ತಿ ಕಿಚ್ಚನ ಜನ್ಮದಿನದಂದು ಹೊಸ ಸಿನಿಮಾ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಅವರ ಅರಾಧಕರಲ್ಲಿತು. ಅದ್ರೆ ಆ ನಿರೀಕ್ಷೆ ಹುಸಿಯಾಗಿಬಿಟ್ಟಿತ್ತು. ಈ ಗ್ಯಾಫ್​ನಲ್ಲಿ ಕಿಚ್ಚ ಸುದೀಪ್​ ಜೋಗಿ ಪ್ರೇಮ್​ ಜೊತೆ ಮತ್ತೆ ಸಿನಿಮಾ ಮಾಡ್ತಾರೆ. ಅಷ್ಟೆ ಅಲ್ಲ ಕಾಲಿವುಡ್ ಸ್ಟಾರ್​ ಡೈರೆಕ್ಟರ್​ ಜೊತೆ ಕೂಡ ಸಿನಿಮಾ ಮಾಡ್ತಾರೆ ಅನ್ನೋ ವಿಷ್ಯ ಸಖತ್​ ಸದ್ದು ಮಾಡಿತ್ತು. ಅದರೆ ಇವುಗಳ ಮಧ್ಯೆ ಈಗ ಸುದೀಪ್​ ಅವರ ಮುಂದಿನ ಸಿನಿಮಾ ವಿಚಾರವಾಗಿ ಇಂಟ್ರೆಸ್ಟಿಂಗ್ ವಿಷಯವೊಂದು ಮುನ್ನೆಲೆಗೆ ಬಂದಿದೆ.

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ನಂತ್ರ ಮತ್ತೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿಂದೆಯೆ ಸುದೀಪ್​ ಅವರು ‘ಅಶ್ವತ್ಥಾಮ ಎಂಬ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ದೊಡ್ಡ ಸುದ್ದಿಯಾಗಿತ್ತು. ಈಗ ‘ಅಶ್ವತ್ಥಾಮ‘ಚಿತ್ರದ ಮೂಲಕ ಕಿಚ್ಚ ಸುದೀಪ್​ ಮತ್ತು ಅನೂಪ್ ಭಂಡಾರಿ ಮತ್ತೆ ಒಂದಾಗಲಿದ್ದಾರೆ ಎಂಬ ವಿಷ್ಯ ಈಗ ಗಾಂಧಿನಗರದಲ್ಲಿ ಅಡ್ಡಾಡ್ತಿದೆ.

blank

ಯೆಸ್.. ‘ಅಶ್ವತ್ಥಾಮ‘ ಚಿತ್ರದ ಪೋಸ್ಟರ್ ತುಂಬಾ ಇಂಟ್ರೆಸ್ಟಿಗ್ ಆಗಿದ್ದು, ಚಿತ್ರಕ್ಕಾಗಿ ಅನೂಪ್ ಭಂಡಾರಿ ಈಗಾಗಲೇ ಕಥೆ ಬರೆಯುವುದರಲ್ಲಿ ನಿರತರಾಗಿದ್ದಾರಂತೆ.’ಸುದೀಪ್ ಅಣತಿಯಂತೆ ಅನೂಪ್​ ಭಂಡಾರಿ ಅಶ್ವತ್ಥಾಮನ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ.. ಚಿತ್ರದ ಸ್ಕ್ರಿಪ್ಟ್ ಫೈನಲ್ ಆದ ಮೇಲೆ ಅನೂಪ್ ಭಂಡಾರಿ ಅಶ್ವತ್ಥಾಮ ಸಿನಿಮಾ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರಂತೆ..

‘ಅಶ್ವತ್ಥಾಮ’ ನಿರ್ದೇಶಕ ಅನೂಪ್ ಭಂಡಾರಿಯವರ ಮಹತ್ವಾಕಾಂಕ್ಷೆಯ ಕನಸಿನ ಸಿನಿಮಾಗಳಲ್ಲಿ ಒಂದಾಗಿದೆ. ತನ್ನ ಕನಸಿನ ಸಿನಿಮಾವನ್ನು ತಾನು ಕಲ್ಪಸಿಕೊಂಡ ರೀತಿಯಲ್ಲೇ ಬೆಳ್ಳಿತೆರೆಮೇಲೆ ತರಲು ನಿರ್ದೇಶಕ ಅನೂಪ್ ಭಂಡಾರಿ ಉತ್ಸುಕರಾಗಿದ್ದಾರೆ. ಇನ್ನು ಅಶ್ವತ್ಥಾಮ ಸಿನಿಮಾ ಕಿಚ್ಚ ಕ್ರಿಯೇಶನ್​ನಲ್ಲಿ ಮೂಡಿಬರಲಿದ್ದು, ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮಾಡಲು ಕಿಚ್ಚ ಸುದೀಪ್ ಮತ್ತು ಅನೂಪ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ.

Source: newsfirstlive.com Source link