ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

ಬೆಂಗಳೂರು: ನನ್ನ ತಾಯಿ 60 ವರ್ಷ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಅದು ಯಾವನೇ ಆಗಲಿ, ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಿರಲಿ ಯಾರನ್ನೂ ಬಿಡುವುದಿಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಗುಡುಗಿದ್ದಾರೆ.

ಡ್ರಗ್ಸ್ ಪ್ರಕರಣದ ಕುರಿತು ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ. ಆದರೆ ನಾನು ಸತ್ಯವಾಗಿದ್ದೇನೆ, ನಾನು ಹೇಳಿದ್ದೆಲ್ಲ ಸತ್ಯ. ಇದೆಲ್ಲವನ್ನೂ ಮೀರಿ ಟಿವಿಗಳಲ್ಲಿ ಬರುತ್ತಿರುವುದನ್ನು ನಾನು ತುಂಬಾ ಸ್ಟ್ರಾಂಗ್ ಆಗಿ ಹ್ಯಾಂಡಲ್ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ

ಇದೆಲ್ಲವನ್ನೂ ಮೀರಿ ಒಂದು ವಿನಂತಿ. ನನ್ನ ತಾಯಿ 60 ವರ್ಷಕ್ಕೂ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ನನ್ನ ತಾಯಿಯ ಆರೋಗ್ಯಕ್ಕೆ ಏನಾದರೂ ತೊಂದರೆ ಆದರೆ ಅದು ಯಾವನೇ ಆಗಲಿ, ಅವನು ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಲಿ ನಾನು ಯಾರನ್ನೂ ಬಿಡುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

ನಾನು ತುಂಬಾ ಸಿಂಪಲ್ ವ್ಯಕ್ತಿ, ಕೆಲಸಕ್ಕೆ ಹೋಗುತ್ತೇನೆ, ಮರಳಿ ನೇರವಾಗಿ ಮನೆಗೆ ಬರುತ್ತೇನೆ. ಯಾವುದೇ ರೀತಿಯ ಪಾರ್ಟಿ, ಪಬ್‍ಗಳಿಗೆ ಎಲ್ಲೂ ಹೋಗುವುದಿಲ್ಲ. ನಾನಾಯಿತು, ನನ್ನ ಕೆಲಸ ಆಯ್ತು ಎಂದುಕೊಂಡು ಕೆಲಸ ಮುಗಿಸಿ ನೇರವಾಗಿ ಮನೆಗೆ ಬರುತ್ತೇನೆ. ಬೆಳಗ್ಗೆ ರನ್ನಿಂಗ್, ಜಿಮ್ ಗೆ ಹೋಗುತ್ತೇನೆ ಇಷ್ಟೇ ನನ್ನ ಸಿಂಪಲ್ ಲೈಫ್. ಈ ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Source: publictv.in Source link