19 ವರ್ಷಗಳ ಹಿಂದಿನ ದ್ವೇಷಕ್ಕೆ ಪ್ರತೀಕಾರ ತೀರಿಸಿಕೊಂಡ ಉ.ಪ್ರದೇಶ ವ್ಯಕ್ತಿ.. ಏನಿದು ಕಥೆ..?

19 ವರ್ಷಗಳ ಹಿಂದಿನ ದ್ವೇಷಕ್ಕೆ ಪ್ರತೀಕಾರ ತೀರಿಸಿಕೊಂಡ ಉ.ಪ್ರದೇಶ ವ್ಯಕ್ತಿ.. ಏನಿದು ಕಥೆ..?

ಶಹ್​ಜಹಾನ್​ಪುರ್: ಮನುಷ್ಯ ಒಮ್ಮೆ ಜಿದ್ದಿಗೆ ಬಿದ್ರೆ ಒಂದಿಲ್ಲೊಂದು ದಿನ ಅದನ್ನ ತೀರಿಸಿಕೊಳ್ತಾನೆ ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಇಲ್ಲೊಬ್ಬ ವ್ಯಕ್ತಿ 19 ವರ್ಷಗಳ ಹಿಂದಿನ ದ್ವೇಷವನ್ನ ಮನಸ್ಸಿನಲ್ಲೇ ಇಟ್ಟುಕೊಂಡು ಇದೀಗ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ 40 ವರ್ಷದ ಮಧ್ಯ ವಯಸ್ಕನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ. ಅಕ್ಷಯ್ ಮತ್ತು ಸ್ನೇಹಿತ ಈ ಕೃತ್ಯ ಎಸಗಿದವರು ಎನ್ನಲಾಗಿದೆ. ಕೊಲೆಯಾದವನನ್ನ ನರೇನ್ ಕಶ್ಯಪ್ ಎಂದು ಗುರುತಿಸಲಾಗಿದೆ.

ನರೇನ್ ಕಶ್ಯಪ್ ಶಾರ್ಪ್ ಶೂಟರ್ ಆಗಿದ್ದು 2002 ರಲ್ಲಿ ಅಕ್ಷಯ್​ನ ಸಹೋದರನನ್ನ ಕೊಲೆಗೈದಿದ್ದ ಎನ್ನಲಾಗಿದೆ. ಇದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ಅಕ್ಷಯ್ ಹಲವು ವರ್ಷಗಿಂದಲೇ ಪ್ಲಾನ್ ಮಾಡಿದ್ದನಂತೆ, ಬುಧವಾರ ಖಾಸಗಿ ಆಸ್ಪತ್ರೆಯೊಂದರ ಮುಂದೆ ನಿಂತಿದ್ದ ವೇಳೆ ಅಕ್ಷಯ್ ಹಾಗೂ ಬಬ್ಲು ನರೇನ್ ಕಶ್ಯಪ್​ನನ್ನ ಕೊಲೆಗೈದಿದ್ದಾರೆ ಎಂದು ಹೇಳಲಾಗಿದೆ.

Source: newsfirstlive.com Source link