9/11 ದಾಳಿಯ ದಿನವೇ ತಾಲಿಬಾನಿ ಸಚಿವರ ಪ್ರಮಾಣವಚನ.. ಅಮೆರಿಕಕ್ಕೆ ಸಂದೇಶ..?

9/11 ದಾಳಿಯ ದಿನವೇ ತಾಲಿಬಾನಿ ಸಚಿವರ ಪ್ರಮಾಣವಚನ.. ಅಮೆರಿಕಕ್ಕೆ ಸಂದೇಶ..?

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇದೀಗ ತಾಲಿಬಾನಿಗಳು ತಮ್ಮದೇ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈಗಾಗಲೇ ಮುಖ್ಯ ಇಲಾಖೆಗಳಿಗೆ ಸಚಿವರನ್ನ ನೇಮಕ ಮಾಡಲಾಗಿದೆ. ಈ ಸಚಿವರು ಸೆಪ್ಟೆಂಬರ್ 11 ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೆಪ್ಟೆಂಬರ್ 11, 2001 ಇಡೀ ಜಗತ್ತು ಎಂದೂ ಮರೆಯದಂಥ ಘಟನೆ ನಡೆದಿತ್ತು. ಅಂದು ಅಲ್​ಖೈದಾ ಉಗ್ರರು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಸಿ ದೊಡ್ಡಮಟ್ಟದ ಅನಾಹುತಕ್ಕೆ ಕಾರಣರಾಗಿದ್ದರು. ಅಮೆರಿಕ ಸರ್ಕಾರ ಈ ದಿನವನ್ನು ಪ್ರತೀವರ್ಷವೂ ಕರಾಳ ದಿನವನ್ನಾಗಿ ಆಚರಿಸುತ್ತದೆ. ಈ ದಿನವೇ ತಾಲಿಬಾನಿಗಳು ಇದೀಗ ಸಚಿವರ ಪ್ರಮಾಣವಚನ ನಡೆಸುವ ಮೂಲಕ ಅಮೆರಿಕಕ್ಕೆ ಸಂದೇಶ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ತಾಲಿಬಾನಿಗಳು ಈಗಾಗಲೇ ಹಲವು ದೇಶಗಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ. ಚೀನಾ, ಟರ್ಕಿ, ಪಾಕಿಸ್ತಾನ, ಇರಾನ್, ಕತಾರ್, ಭಾರತ ಹಾಗೂ ಅಮೆರಿಕಕ್ಕೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link