ಸ್ವಿಮ್ಮಿಂಗ್ ಪೂಲ್​ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಪೊಲೀಸ್ ಸಿಬ್ಬಂದಿ.. ವೈರಲ್ ಆಯ್ತು ಶಾಕಿಂಗ್ ವಿಡಿಯೋ

ಸ್ವಿಮ್ಮಿಂಗ್ ಪೂಲ್​ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಪೊಲೀಸ್ ಸಿಬ್ಬಂದಿ.. ವೈರಲ್ ಆಯ್ತು ಶಾಕಿಂಗ್ ವಿಡಿಯೋ

ಜೈಪುರ: ರಾಜಸ್ಥಾನದ ಪೊಲೀಸ್ ಅಧಿಕಾರಿ ಹಾಗೂ ಮಹಿಳಾ ಕಾನ್​ಸ್ಟೇಬಲ್ ಸ್ವಿಮ್ಮಿಂಗ್ ಪೂಲ್​ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಇಬ್ಬರನ್ನೂ ಸೇವೆಯಿಂದ ಸಸ್ಪೆಂಡ್ ಮಾಡಲಾಗಿದ್ದು ಇಬ್ಬರ ವಿರುದ್ಧ ತನಿಖೆ ನಡೆಸಲು ಸೂಚಿಸಲಾಗಿದೆ.

ವಿಡಿಯೋ ಕ್ಲಿಪ್​ನಲ್ಲಿ ಅಜ್ಮೆರ್​ನ ಬೆವರ್​ನ ಹೀರಾಲಾಲ್ ಸೈನಿ ಜೈಪುರ ಪೊಲೀಸ್ ಕಮಿಷನರೇಟ್​ನ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ವಿಮ್ಮಿಂಗ್​ಪೂಲ್​​ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಇಬ್ಬರೂ ಬೆತ್ತಲೆಯಾಗಿ ಲೈಂಗಿಕ ಕ್ರಿಯೆಯ ಭಂಗಿಯಲ್ಲಿದ್ದು ಈ ವೇಳೆ ಸ್ವಿಮ್ಮಿಂಗ್ ಪೂಲ್​ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ 6 ವರ್ಷದ ಮಗನೂ ಇರುವುದು ವಿಡಿಯೋ ನೋಡಿದವರನ್ನ ಬೆಚ್ಚಿಬೀಳಿಸಿದೆ. ಮಗುವನಿ ಎದುರೇ ಬೆತ್ತಲೆಯಾಗಿ ಲೈಂಗಿಕ ಕ್ರಿಯೆ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದು ವಿಚಿತ್ರ ಎಂದರೆ ಮಹಿಳಾ ಪೊಲೀಸ್ ಸಿಬ್ಬಂದಿಯೇ ಈ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರನ್ನೂ ಸಸ್ಪೆಂಡ್ ಮಾಡಲಾಗಿದೆ. ಇನ್ನು ಮಹಿಳಾ ಪೇದೆಯ ವಿರುದ್ಧ ಆಕೆಯ ಗಂಡನೂ ಸಹ ಕಂಪ್ಲೆಂಟ್ ನೀಡಿದ್ದಾನೆ ಎನ್ನಲಾಗಿದೆ.

Source: newsfirstlive.com Source link