ನಂಜನಗೂಡು ಶಕ್ತಿದೇವತೆ ಮಹಾದೇವಮ್ಮ ದೇವಸ್ಥಾನ ನೆಲಸಮ.. ಗ್ರಾಮಸ್ಥರಲ್ಲಿ ಶೋಕ.. ನಡೆದಿದ್ದೇನು..?

ನಂಜನಗೂಡು ಶಕ್ತಿದೇವತೆ ಮಹಾದೇವಮ್ಮ ದೇವಸ್ಥಾನ ನೆಲಸಮ.. ಗ್ರಾಮಸ್ಥರಲ್ಲಿ ಶೋಕ.. ನಡೆದಿದ್ದೇನು..?

ನಂಜನಗೂಡು: ಸುಪ್ರೀಂ ಕೋರ್ಟ್ ಆದೇಶ ತಾಲೂಕಿನ ಕೆಲವು ಧಾರ್ಮಿಕ ದೇವಾಲಯಗಳಿಗೆ ಕುತ್ತು ತಂದಿದ್ದು ತಾಲೂಕು ಆಡಳಿತದಿಂದ ಕಾರ್ಯಾಚರಣೆ ಶಕ್ತಿದೇವತೆ ಮಹಾದೇವಮ್ಮ ದೇವಸ್ಥಾನ ನೆಲಸಮ ಮಾಡಲಾಗಿದೆ. ಹುಲ್ಲಹಳ್ಳಿ ಹೋಬಳಿ ಹುಚ್ಚ ಗಣಿ ಗ್ರಾಮದ ಬಳಿ ನಿರ್ಮಾಣಗೊಂಡಿದ್ದ ಶಕ್ತಿದೇವತೆ ಮಹಾದೇವಮ್ಮ ದೇವಸ್ಥಾನ ನೆಲಸಮಗೊಂಡಿದೆ.

ಹುಲ್ಲಹಳ್ಳಿ ಹೊಮ್ಮರಗಳ್ಳಿ ರಾಜ್ಯ ಹೆದ್ದಾರಿ 57ರ ಸರ್ಕಾರಿ ರಸ್ತೆಬದಿಯಲ್ಲಿ ನಿರ್ಮಾಣಗೊಂಡಿದ್ದ ಹಿಂದೂ ಧಾರ್ಮಿಕ ದೇವಾಲಯ ಇದಾಗಿದ್ದು.. ದೇವಸ್ಥಾನದಿಂದ ಸಾರ್ವಜನಿಕವಾಗಿ ಯಾವುದೇ ತೊಂದರೆ ಆಗದಂತೆ ಹತ್ತಾರು ಗ್ರಾಮಸ್ಥರ ನೆರವಿನಿಂದ ಸಮಾರು 50 ರಿಂದ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ್ದ ದೇವಸ್ಥಾನ ಇದು ಎನ್ನಲಾಗಿತ್ತು.

ಸುಮಾರು 30 – 35 ವರ್ಷಗಳಿಂದ ದೇವಾಲಯ ನಿರ್ಮಾಣ ಮಾಡಿ ಪ್ರತಿನಿತ್ಯ ಹಾಗೂ ವಿಶೇಷ ದಿನಗಳಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಾ ಜಾತ್ರಾಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಹಿಂದೆ ಸುಪ್ರೀಂಕೋರ್ಟ್ ಆದೇಶವಿದ್ದರೂ ತಾಲ್ಲೂಕಿನಲ್ಲಿ ಕೆಲವು ದೇವಸ್ಥಾನಗಳನ್ನು ನೆಲಸಮಗೊಳಿಸಿ ಇದನ್ನು ಉಳಿಸಿಕೊಳ್ಳಲಾಗಿತ್ತು.

ಆದರೆ ಈಗ ಜಿಲ್ಲಾಡಳಿತದ ಆದೇಶದ ಮೇರೆಗೆ ತಹಸಿಲ್ದಾರ್ ಮೋಹನಕುಮಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ.. ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಬೆಳಗಿನ ಜಾವ ಜೆಸಿಬಿ ಮುಖಾಂತರ ದೇವಾಲಯವನ್ನು ನೆಲಸಮಗೊಳಿಸಲಾಗಿದೆ. ದೇವಾಲಯ ನೆಲಸಮಗೊಳಿಸುವ ಅದಕ್ಕೂ ಮುನ್ನ ದೇವಾಲಯದಲ್ಲಿದ್ದ ವಿಗ್ರಹಗಳನ್ನು ಗ್ರಾಮಸ್ಥರ ವಶಕ್ಕೆ ನೀಡಲಾಯಿತು. ಇದರಿಂದಾಗಿ ಹುಚ್ಚ ಗಣಿ ಮತ್ತು ಹರದನಹಳ್ಳಿ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಒಂದು ರೀತಿ ಶೋಕ ಮಡುಗಟ್ಟಿದೆ.

Source: newsfirstlive.com Source link