ಡ್ರಗ್​ ಕೇಸ್​: ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಪಾಡಿಗೆ ನಾನು ಹೋರಾಡ್ತಿದ್ದೇನೆ ಎಂದ ಅನುಶ್ರೀ

ಡ್ರಗ್​ ಕೇಸ್​: ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಪಾಡಿಗೆ ನಾನು ಹೋರಾಡ್ತಿದ್ದೇನೆ ಎಂದ ಅನುಶ್ರೀ

ಬೆಂಗಳೂರು: ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಭಾಗಿಯಾಗಿರುವ ಆರೋಪದ ಕುರಿತು ಸ್ವತಃ ಅನುಶ್ರೀ ಅವರೇ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಆರೋಪ ಮಾಡಿಲ್ಲ, ನಾನು ಎಲ್ಲಿಯೂ ಓಡಿ ಹೋಗಿಲ್ಲ ಎಂದಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೀವನದಲ್ಲಿ ಅಲ್ಪ ಸ್ವಲ್ಪ ಗೌರವವನ್ನ ಸಂಪಾದಿಸಿದ್ದೇನೆ. ಅದೇ ನನ್ನ ಆಸ್ತಿ, ಅಕ್ರಮ ಆಸ್ತಿ ಮಾಡಿಲ್ಲ ಎಂದರು. ಇನ್ನು ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದ ತಕ್ಷಣ ನಾನು ಎಲ್ಲಿಯೂ ಓಡಿ ಹೋಗಿಲ್ಲ. ನಾನು ಆ ಸಮಯದಲ್ಲಿ ಕೆಲಸದ ನಿಮಿತ್ತ ಬಾಂಬೆಯಲ್ಲಿದ್ದೆ ಎಂದರು.

ಮುಂದುವರೆದು ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಪಾಡಿಗೆ ನಾನು ಹೋರಾಡ್ತಿದ್ದೇನೆ ನನಗೆ ಯಾವ ಪ್ರಭಾವಿಯ ನೆರವೂ ಇಲ್ಲ, ಯಾವ ಪ್ರಭಾವಿಯ ಸಹಾಯವೂ ಬೇಕಿಲ್ಲ, ನಾನು ಬೆಂಗಳೂರಿಗೆ ಒಬ್ಬಳೇ ಬಂದಿದ್ದೀನಿ, ಒಬ್ಬಳೇ ಹೋರಾಡ್ತಿನಿ. ಇದು ನನ್ನ ನೆಲ.. ಇಲ್ಲಿಯೇ ಇದ್ದು ಹೋರಾಡ್ತಿನಿ.. ಎಲ್ಲಿಯೂ ಓಡಿ ಹೋಗಲ್ಲ ಎಂದಿದ್ದಾರೆ.

2008 ರಲ್ಲಿ ಖಾಸಗಿ ವಾಹಿನಿಯ ಸ್ಪರ್ಧೆಯೊಂದರಲ್ಲಿ ನಾನು ವಿಜೇತವಾದ ಸಂದರ್ಭದಲ್ಲಿ ಎಲ್ಲರಿಗೂ ಊಟದ ಪಾರ್ಟಿ ಕೊಟ್ಟಿದ್ದೆ. ಅದನ್ನೇ ಈಗ ತಿರುಚಿ ಆರೋಪಿಸಲಾಗ್ತಿದೆ. ಸಿಸಿಬಿ ಅವ್ರು ನನ್ನ ಒಬ್ಬ ಸಾಮಾನ್ಯ ಪ್ರಜೆಯಾಗಿ ವಿಚಾರಣೆಗೆ ಕರೆದಿದ್ದಾರೆಯೇ ಹೊರತು, ನಾನೆಲ್ಲೂ ಡ್ರಗ್​ ಸೇವಿಸಿದ್ದೇನೆಂದು, ಅಥವಾ ಡ್ರಗ್​ ಸಾಗಾಟದಲ್ಲಿ ತೊಡಗಿದ್ದೇನೆ ಎಂದು ಆರೋಪ ಮಾಡಿ ವಿಚಾರಣೆಗೆ ಕರೆದಿಲ್ಲ. ಆದರೂ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕೇಸ್​ ಆದ್ರೂ ಹಲವಾರು ಆರೋಪಗಳು ಬಂದೇ ಬರ್ತವೆ.. ಹಂಗೆ ನನ್ನ ಮೇಲೆಯೂ ಸಾಕಷ್ಟು ಆರೋಪಗಳಿವೆ. ಹಂಗಂತ ಅವೆಲ್ಲವೂ ನಿಜವಲ್ಲ, ನಾನು ಕಾನೂನಿನ ಚೌಕಟ್ಟಿನಲ್ಲಿ ಹೋರಾಡ್ತೇನೆ, ಸರಿ ಯಾವುದು, ತಪ್ಪು ಯಾವುದು ಎಂದು ಕಾನೂನು ತೀರ್ಮಾನಿಸುತ್ತೆ ಎಂದರು.

Source: newsfirstlive.com Source link