ಹರಿಯುವ ನೀರಲ್ಲಿ ಹುಚ್ಚಾಟ.. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ವ್ಯಕ್ತಿ

ಹರಿಯುವ ನೀರಲ್ಲಿ ಹುಚ್ಚಾಟ.. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ವ್ಯಕ್ತಿ

ಬೀದರ್: ರಭಸವಾಗಿ ಹರಿಯುತ್ತಿರುವ ನೀರಲ್ಲಿ ದುಸ್ಸಾಹಸ ಮೇರೆಯಲು ಕೈ ಹಾಕಿದ ವ್ಯಕ್ತಿಯೊರ್ವ, ನೀರಲ್ಲಿ ಕೊಚ್ಚಿಕೊಂಡು ಹೋದ ಘಟನೆ ಜಿಲ್ಲೆಯ ಲಖನಗಾಂವದಲ್ಲಿ ನಡೆದಿದೆ.

ಕಳೆದ ನಾಲ್ಕೈದು ದಿನದಿಂದ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪರಿಣಾಮ ಭಾಲ್ಕಿಯ ಲಖನಗಾಂವ ಕಮಲನಗರ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಉಕ್ಕಿ ಹರಿಯುತ್ತಿರುವ ನದಿಯ ಸೇತುವೆ ಮಧ್ಯೆ ಗ್ರಾಮದ ಜ್ಞಾನೇಶ್ವರ ಎಂಬ ವ್ಯಕ್ತಿ ಹರಸಾಹಸ ಮಾಡಲು ಹೋಗಿ ನೀರು ಪಾಲಾಗಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸದ್ಯ ಕೊಚ್ಚಿಕೊಂಡು ಹೋದ ವ್ಯಕ್ತಿಯ ಪತ್ತೆಗಾಗಿ ಶೋಧ ನಡೆಸಲಾಗ್ತಿದೆ.

ಇದನ್ನೂ ಓದಿ: ಹಿರಣ್ಯಕೇಶಿ ನದಿ ಪಾತ್ರದಲ್ಲಿ ಮೊಸಳೆ ಪ್ರತ್ಯಕ್ಷ-ಗ್ರಾಮಸ್ಥರು ಕಂಗಾಲು

ಇದನ್ನೂ ಓದಿ:‘ವೀರ ಮದಕರಿ ನಾಯಕ’ ನಾಮಕರಣ ವಿಚಾರ; ಬೆಳಗಾವಿ ಆರ್​ಡಿಪಿ ಸರ್ಕಲ್​ನಲ್ಲಿ ಹೈಡ್ರಾಮಾ

Source: newsfirstlive.com Source link