ಎತ್ತಿನ ಬಂಡಿ-ಓಮಿನಿ ವ್ಯಾನ್​ ನಡುವೆ ಭೀಕರ ಅಪಘಾತ-11 ಜನರಿಗೆ ಗಾಯ

ಎತ್ತಿನ ಬಂಡಿ-ಓಮಿನಿ ವ್ಯಾನ್​ ನಡುವೆ ಭೀಕರ ಅಪಘಾತ-11 ಜನರಿಗೆ ಗಾಯ

ದಾವಣಗೆರೆ: ಎತ್ತಿನ ಬಂಡಿ-ಓಮಿನಿ ವ್ಯಾನ್​ ನಡುವೆ ಭೀಕರ ಅಪಘಾತ ಸಂಭವಿಸಿ 11 ಜನ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

ದಾವಣಗೆರೆಯ ಹೊನ್ನಾಳಿ-ಶಿಕಾರಿಪುರ ರಸ್ತೆಯ ಸೊರಟೂರೂ ಚಾನಲ್ ಬಳಿ ಈ ಭೀಕರ ಅಪಘಾತ ನಡೆದಿದ್ದು, 11 ಜನ ಗಾಯಗೊಂಡು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಶಿಕಾರಿಪುರದಿಂದ ಗಾರ್ಮೆಂಟ್ ಕೆಲಸ ಮುಗಿಸಿ ಮಹಿಳೆಯರನ್ನ ಕರೆ ತರುತಿದ್ದ ಓಮಿನಿ ವಾಹನ,ಈ ವೇಳೆ ಎದುರಿಗೆ ಬರುತಿದ್ದ ಎತ್ತಿನ ಬಂಡಿಗೆ ಗುದ್ದಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಓಮಿನಿ ವ್ಯಾನ್​ ಗುದ್ದಿದ ರಭಸಕ್ಕೆ ಎತ್ತಿನ ಬಂಡಿಯಲ್ಲಿರುವವರಿಗೆ ಮತ್ತು ವ್ಯಾನ್​ ನಲ್ಲಿದ್ದವರಿಗೆ ಗಾಯಗಳಾಗಿವೆ. ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನ ಸಾರ್ವಜನಿಕರ ಸಹಾಯದಿಂದ ಹೊನ್ನಾಳಿ ತಾಲೂಕು ಆಸ್ಪತ್ರೆ ದಾಖಲು ಮಾಡಲಾಗಿದ್ದು, ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link