ಭದ್ರತೆ ನಿರಾಕರಿಸಿ ಅಮೆರಿಕ ಅಧ್ಯಕ್ಷರ ಪತ್ನಿ ಕಾಲೇಜಿಗೆ ಹೋಗಿ ಮಾಡಿದ್ದೇನು ಗೊತ್ತಾ?

ಭದ್ರತೆ ನಿರಾಕರಿಸಿ ಅಮೆರಿಕ ಅಧ್ಯಕ್ಷರ ಪತ್ನಿ ಕಾಲೇಜಿಗೆ ಹೋಗಿ ಮಾಡಿದ್ದೇನು ಗೊತ್ತಾ?

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಪುನಃ ಕಾಲೇಜಿಗೆ ಹೋಗುತ್ತಿದ್ದಾರೆ. ಅವರು ಯಾಕೆ ಕಾಲೇಜಿಗೆ ಹೋಗುತ್ತಿದ್ದಾರೆ ಗೊತ್ತಾ? ಅದನ್ನು ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ.

ಅಮೆರಿಕ ಅಧ್ಯಕ್ಷರ ಪತ್ನಿ, ಅಂದ್ರೆ ಅಮೆರಿಕದ ಪ್ರಥಮ ಮಹಿಳೆ ಎಂಬ ಖ್ಯಾತಿಯೂ ಇರುತ್ತದೆ. ಹಾಗಾದ್ರೆ ಅಮೆರಿಕ ಅಧ್ಯಕ್ಷರ ಪತ್ನಿ ಹೇಗಿರುತ್ತಾರೆ? ವೈಟ್‌ ಹೌಸ್‌ನಲ್ಲಿ ಮಹಾರಾಣಿ ತರ ಜೀವನ ಮಾಡ್ತಾ ಇರ್ತಾರೆ, ತಮ್ಮ ಮಕ್ಕಳನ್ನು ನೋಡಿಕೊಳ್ತಾ ಇರ್ತಾರೆ, ಅಮೆರಿಕ ಅಧ್ಯಕ್ಷರ ಪ್ರವಾಸದಲ್ಲಿ ಇವರು ಜೊತೆಯಾಗಿ ಹೋಗ್ತಾರೆ, ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ, ನಾನಾ ದೇಶಗಳನ್ನು ಸುತ್ತುತ್ತಾರೆ, ಪತಿಯ ರಾಜಕೀಯ ಜೀವನಕ್ಕೆ ಹೆಗಲು ಕೊಟ್ಟು ನಿಲ್ಲುತ್ತಾರೆ.

ಇಂತಹ ಭಾವನೆಗಳೇ ಎಲ್ಲರಿಗೂ ಬರುತ್ತವೆ. ಯಾಕಂದ್ರೆ, ಇಷ್ಟು ವರ್ಷ ವೈಟ್‌ ಹೌಸ್‌ನಲ್ಲಿದ್ದ ಅಮೆರಿಕ ಅಧ್ಯಕ್ಷರ ಪತ್ನಿಯರು ಮಾಡಿದ್ದು ಅದೇ ಕೆಲಸವಾಗಿತ್ತು. ಆದ್ರೆ, ಇಂದಿನ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪತ್ನಿ ಜಿಲ್‌ ಬೈಡನ್‌ ಇದ್ದಾರಲ್ಲ ಅವರು ಅದಕ್ಕೆ ಅಪವಾದವಾಗಿದ್ದಾರೆ. ಯಾಕಂದ್ರೆ, ಅವರು ಇಂತಹ ಕೆಲಸದ ಜೊತೆ ಮತ್ತೊಂದು ಮಹತ್ವದ ಕೆಲಸ ಮಾಡ್ತಾ ಇದ್ದಾರೆ. ಅದನ್ನು ಕೇಳಿದ್ರೆ ನೀವು ಅಚ್ಚರಿಗೊಳ್ಳುತ್ತೀರಿ. ಬಹಳ ಸಂತೋಷ ಗೊಳ್ಳುತ್ತೀರಿ. ಹಾಗಾದ್ರೆ, ಜಿಲ್‌ ಬೈಡನ್‌ ಏನು ಮಾಡ್ತಾ ಇದ್ದಾರೆ?

ಇಂಗ್ಲಿಷ್‌ ಪಾಠ ಮಾಡಲು ಕಾಲೇಜಿಗೆ ಹೋದ ಜಿಲ್‌ ಬೈಡನ್‌

ಕೊರೊನಾದಿಂದಾಗಿ ಅಮೆರಿಕದಲ್ಲಿ ಕಳೆದ ಒಂದೂವರೆ ವರ್ಷದಿಂದ ಕ್ಲಾಸ್‌ಗಳು ಆರಂಭವಾಗಿರಲಿಲ್ಲ. ಆದ್ರೆ, ಆನ್‌ಲೈನ್‌ ಕ್ಲಾಸ್‌ಗಳು ನಡೆಯುತ್ತಾ ಇದ್ವು. ಶಿಕ್ಷಕರು ಅವರ ಮನೆಯಿಂದಲೇ ಆನ್‌ಲೈನ್‌ ಕ್ಲಾಸ್‌ ನಡೆಸುತ್ತಾ ಇದ್ರು, ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಮೂಲಕ ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗುತ್ತಾ ಇದ್ರು. ಆದ್ರೆ, ಇದೀಗ ಸ್ವಲ್ಪ ಮಟ್ಟಿಗೆ ಅಮೆರಿಕದಲ್ಲಿ ಕೊರೊನಾ ಅಬ್ಬರ ಕುಗ್ಗಿದೆ. ಬಹುತೇಕ ಎಲ್ಲರಿಗೂ ಕೋವಿಡ್‌ ಲಸಿಕೆ ಹಾಕಲಾಗಿದೆ. ಹೀಗಾಗಿಯೇ ಹಂತ ಹಂತವಾಗಿ ಕಾಲೇಜುಗಳು ಓಪನ್‌ ಆಗುತ್ತಿವೆ. ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಾ ಇದ್ದಾರೆ. ಶಿಕ್ಷಕರು ಕಾಲೇಜಿಗೆ ಬಂದು ತರಗತಿ ನಡೆಸುತ್ತಿದ್ದಾರೆ. ವಿಶೇಷ ಅಂದ್ರೆ, ಅಮೆರಿಕದ ಪ್ರಥಮ ಮಹಿಳೆ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪತ್ನಿ ಜಿಲ್‌ ಬೈಡನ್‌ ಕೂಡ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ನೋಡಿ ಖುಷಿಗೊಂಡಿದ್ದಾರೆ.

blank

ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಪಾಠ ಮಾಡಿದ್ದಾರೆ. ಇದೇನಿದು ವೈಟ್ ಹೌಸ್‌ ಬಿಟ್ಟು ಕಾಲೇಜಿಗೆ ಹೋಗಿ ಪಾಠ ಮಾಡಿದ್ರು ಅಂತ ಅಚ್ಚರಿಗೊಳ್ಳಬೇಡಿ, ಏನೋ ಒಂದು ದಿನದ ಮಟ್ಟಿಗೆ ಹೋಗಿ ಪಾಠ ಮಾಡಿರಬಹುದು ಅಂತ ಕೇವಲವಾಗಿ ನೋಡಬೇಡಿ. ಯಾಕಂದ್ರೆ, ಅವರು ಕಾಲೇಜಿಗೆ ಹೋಗಿದ್ದು ಗೆಸ್ಟ್‌ ಲಚ್ಚರ್‌ ಆಗಿ ಇಲ್ಲವೇ ಅಲ್ಲ. ಹಾಗಾದ್ರೆ ಹೋಗಿದ್ದು ಯಾಕೆ?

ಹೌದು, ಜಿಲ್‌ ಬೈಡನ್‌ ಗೆಸ್ಟ್‌ ಲಚ್ಚರ್‌ ಅಲ್ಲವೇ ಅಲ್ಲ. ಒಂದು ದಿನದ ಮಟ್ಟಿಗೆ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿಕೊಂಡು ಬರಲು ಹೋದವರಲ್ಲ. ಅಮೆರಿಕದ ಪ್ರಥಮ ಮಹಿಳೆ ಕಾಲೇಜಿಗೆ ಹೋಗಿ ಬಂದ್ಲು ಅನ್ನೋ ಪ್ರಚಾರದ ಅಗತ್ಯವೂ ಅವರಿಗೆ ಇಲ್ಲ. ಹಾಗಾದ್ರೆ, ಅವರು ಹೋಗಿದ್ದು ಯಾಕೆ ಗೊತ್ತಾ?

ಇಂಗ್ಲಿಷ್‌ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರೋ ಜಿಲ್‌ ಬೈಡನ್‌
2009 ರಿಂದ ಉತ್ತರ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಶಿಕ್ಷಕಿ

ಜಿಲ್‌ ಬೈಡನ್‌ ಸ್ನಾತಕೋತ್ತರ ಪದವೀಧರರು, ಅಷ್ಟೇ ಅಲ್ಲ, ಡಾಕ್ಟರೇಟ್‌ ಕೂಡ ಪಡೆದಿದ್ದಾರೆ. ಜೋ ಬೈಡನ್‌ ಮದುವೆ ಆಗೂ ಮುನ್ನವೇ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದವರು. ಅದರಲ್ಲಿಯೂ ವಿಶೇಷವಾಗಿ 2009 ರಿಂದ ಉತ್ತರ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಇಂಗ್ಲಿಷ್‌ ಶಿಕ್ಷಕಿಯಾಗಿ ಸೇರಿಕೊಂಡಿದ್ದಾರೆ. ಆಕೆಗೆ ಇಂಗ್ಲಿಷ್‌ ಪಾಠದ ಮೇಲೆ ಎಷ್ಟೊಂದು ಆಸಕ್ತಿ ಇರುತ್ತದೇ ಅಂದ್ರೆ, ಅಮೆರಿಕದ ಪ್ರಥಮ ಮಹಿಳೆಯಾದ್ರೂ ಬಿಟ್ಟಿರಲಾಗಲ್ಲ.

ಹೌದು, ಬೈಡನ್‌ ಅಧ್ಯಕ್ಷರಾದ ಮೇಲೆ ಜಿಲ್‌ ಬೈಡನ್‌ ತಮ್ಮ ಶಿಕ್ಷಕ ವೃತ್ತಿಯನ್ನು ಬಿಡ್ತಾರೆ ಅಂದುಕೊಳ್ಳಲಾಗಿತ್ತು. ಯಾರೆ ಆದ್ರೂ ದೂಡ ತಮ್ಮ ವೃತ್ತಿ ಬಿಟ್ಟು ವೈಟ್‌ ಹೌಸ್‌ನಲ್ಲಿ ಮಹಾರಾಣಿತರ ಜೀವನ ಮಾಡ್ತಾ ಇರ್ತಿದ್ರು. ಆದ್ರೆ, ಜನರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದು ಜಿಲ್‌ ಬೈಡನ್‌. ಈ ನಡುವೆ, ಕೊರೊನಾ ಸೋಂಕು ಹೆಚ್ಚಾದ ಮೇಲೆ ಜಿಲ್‌ ಬೈಡನ್‌ ಆತಂಕ ಹೆಚ್ಚಾಗಿತ್ತು. ಯಾಕಂದ್ರೆ, ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು. ಹಾಗಾದ್ರೆ, ಆ ಸಮಯದಲ್ಲಿ ಜಿಲ್‌ ಬೈಡನ್‌ ಮಾಡಿದ್ದೇನು?

ವೈಟ್‌ ಹೌಸ್‌ನಿಂದಲೇ ಆನ್‌ಲೈನ್‌ ಕ್ಲಾಸ್‌ ಮಾಡಿದ ಜಿಲ್‌ ಬೈಡನ್‌
ಎಷ್ಟೇ ಶ್ರೀಮಂತಿಕೆ ಬಂದ್ರೂ ವೃತ್ತಿ ಬಿಡದ ಅಮೆರಿಕದ ಪ್ರಥಮ ಮಹಿಳೆ

ಕಾಲೇಜಿಗೆ ಹೋಗುವುದು, ಮಕ್ಕಳಿಗೆ ಇಂಗ್ಲಿಷ್‌ ಮಾಠ ಮಾಡುವುದು ಅಂದ್ರೆ, ಜಿಲ್‌ ಬೈಡನ್‌ಗೆ ಪ್ರಾಣವೇ ಆಗಿರುತ್ತದೆ. ಆದ್ರೆ, ಕಳೆದ ಒಂದೂವರೆ ವರ್ಷದ ಹಿಂದೆ ಕಾಣಿಸಿಕೊಂಡ ಕೊರೊನಾ ಆತಂಕ ಸೃಷ್ಟಿಸಿ ಬಿಡುತ್ತದೆ. ಅಮೆರಿಕದಲ್ಲಿ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿರುತ್ತೆ. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಆಗುತ್ತಿಲ್ಲ, ಪಾಠ ಮಾಡಲು ಆಗುತ್ತಿಲ್ಲ ಅನ್ನೋ ಕೊರಗು ಜಿಲ್‌ ಬೈಡನ್‌ ಅವರಿಗೆ ಇರುತ್ತದೆ. ಆದ್ರೆ, ಸೋಂಕು ತಕ್ಷಣಕ್ಕೆ ಇಳಿಯುವ ಲಕ್ಷಣ ಕಾಣಿಸುವುದಿಲ್ಲ.

blank

ಹೀಗಾಗಿ ಆನ್‌ಲೈನ್‌ ಕ್ಲಾಸ್‌ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ಜಿಲ್‌ ಬೈಡನ್‌ ವೈಟ್‌ ಹೌಸ್‌ನಿಂದಲೇ ಆನ್‌ಲೈನ್‌ ಕ್ಲಾಸ್‌ ಮಾಡುತ್ತಾರೆ. ಜಿಲ್‌ ಬೈಡನ್‌ಗೆ ಇದ್ದ ಶ್ರೀಮಂತಿಕೆಗೆ ಯಾರೇ ಆದ್ರೂ ಮಹಾರಾಣಿ ತರನೇ ಜೀವನ ಮಾಡ್ತಾ ಇರ್ತಾ ಇದ್ರು. ಆದ್ರೆ, ಜಿಲ್‌ ಬೈಡನ್‌ಗೆ ಮಾತ್ರ ಕಾಲೇಜಿನಲ್ಲಿ ಪಾಠ ಮಾಡುವುದೇ ಮಹಾರಾಣಿ ತರಹದ ಜೀವನವಾಗಿರುತ್ತೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆನ್‌ಲೈಕ್‌ ಕ್ಲಾಸ್‌ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಇದೀಗ ಕೊರೊನಾ ಸೋಂಕು ಸ್ವಲ್ಪ ಡೌನ್‌ ಆಗಿದೆ, ತರಗತಿಗಳು ಪುನಃ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್‌ ಬೈಡನ್‌ ಮತ್ತೆ ಕಾಲೇಜಿಗೆ ಹೋಗಲು ಆರಂಭಿಸಿದ್ದಾರೆ.

ಶಿಕ್ಷಕಿ ವೃತ್ತಿ ಬಿಡಲು ಸಾಧ್ಯವಿಲ್ಲ ಅಂದ ಜಿಲ್‌ ಬೈಡನ್‌
ಕಾಲೇಜಿಗೆ ಹೋಗದೇ ಇನ್ನೂ ಕಾಯಲು ಸಾಧ್ಯವಿಲ್ಲ ಅಂದ್ರು

ಪುನಃ ಕಾಲೇಜಿಗೆ ಹೋಗಿ ಪಾಠ ಮಾಡುವ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಜಿಲ್‌ ಬೈಡನ್‌ ಹೇಳಿದ್ದೇನು ಗೊತ್ತಾ? ಶಿಕ್ಷಕ ವೃತ್ತಿಯನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಕಾಲೇಜಿಗೆ ಹೋಗಲು ತವಕದಿಂದ ಕಾಯುತ್ತಿದ್ದೇನೆ. ನನ್ನ ವಿದ್ಯಾರ್ಥಿಗಳನ್ನು ನೋಡಬೇಕು. ಅವರಿಗೆ ಇಂಗ್ಲಿಷ್‌ ಪಾಠ ಮಾಡಬೇಕು ಅಂತ ಹೇಳಿಕೊಳ್ಳುತ್ತಾರೆ. ಈ ಮಾತಿನಲ್ಲಿಯೇ ಅರ್ಥವಾಗಿ ಬಿಡುತ್ತೆ. ಜಿಲ್‌ ಬೈಡನ್‌ ಶಿಕ್ಷಕ ವೃತ್ತಿಯನ್ನು ಎಷ್ಟೊಂದು ಹಚ್ಚಿಕೊಂಡಿದ್ದಾರೆ. ಶಿಕ್ಷಕರ ವೃತ್ತಿಯ ಜೊತೆಗೆ ಅವರಿಗೆ ಬಿಡಲಾರದ ನಂಟು ಇದೆ ಅನ್ನೋದು. ಇದೀಗ ಪುನಃ ಕಾಲೇಜಿಗೆ ಹೋಗುತ್ತಿದ್ದಾರೆ. ಮಂಗಳವಾರ ಮತ್ತು ಗುರುವಾರ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಅನುಮಾನ ಬರುತ್ತೆ. ಅದೇನಂದ್ರೆ, ಭದ್ರತೆ ಜೊತೆ ಹೋಗಿರಬಹುದು? ಜಿಲ್‌ ಬೈಡನ್‌ ಅವರಿಂದ ಕಾಲೇಜಿಗೆ ಸಮಸ್ಯೆ ಆಗಲ್ವಾ? ಭಾರಿ ಪ್ರಮಾಣದ ಭದ್ರತೆ ಕಾಲೇಜಿನಲ್ಲಿ ಇದ್ರೆ ವಿದ್ಯಾರ್ಥಿಗಳಿಗೆ ಕಿರಿಕಿರಿ ಆಗಲ್ವ ? ಆದ್ರೆ, ಜಿಲ್‌ ಬೈಡನ್‌ ಏನು ಮಾಡ್ತಾ ಇದ್ದಾರೆ ಗೊತ್ತಾ?

ಭದ್ರತೆ ನಿರಾಕರಿಸಿದ ಜಿಲ್‌ ಬೈಡನ್‌
ಉಳಿದ ಶಿಕ್ಷಕಿಯರಂತೆ ಸಿಂಪಲ್‌ ಆಗಿ ಹೋಗುವ ಜಿಲ್‌ ಬೈಡಲ್‌

ಅಮೆರಿಕದ ಪ್ರಥಮ ಮಹಿಳೆ ಅಂದ್ರೆ ಎಷ್ಟೊಂದು ಭದ್ರತೆ ಇರುತ್ತೆ ಅಲ್ವ? ಹೌದು, ಅವರು ಹೋದಲ್ಲಿ ಬಂದಲ್ಲಿ ಹದ್ದಿನ ಕಣ್ಗಾವಲು ಇರುತ್ತೆ. ಇದೇ ಭದ್ರತೆ ಅಲ್ಲಿಯ ಕಾಲೇಜಿಗೆ ಕಿರಿಕಿರಿಯಾಗುವ ಸಾಧ್ಯತೆ ಇತ್ತು. ಆದ್ರೆ, ಜಿಲ್‌ ಬೈಡನ್‌ ಭದ್ರತೆಯನ್ನು ನಿರಾಕರಿಸುತ್ತಾರೆ. ತಾವು ಮೊದಲು ಹೇಗೆ ಕಾಲೇಜಿಗೆ ಹೋಗಿ ಪಾಠ ಮಾಡಿ ಬರ್ತಾ ಇದ್ರೋ ಆದೇ ರೀತಿ ಕಾಲೇಜಿಗೆ ಹೋಗಿ ಬರುತ್ತೇನೆ ಅನ್ನುತ್ತಾರೆ. ಹೀಗಾಗಿ ಯಾವುದೇ ಭದ್ರತೆಯನ್ನು ತೆಗೆದುಕೊಳ್ಳುವುದಿಲ್ಲ. ಕಾಲೇಜಿಗೆ ಎಂಟ್ರಿ ಆಗೋವವರೆಗೆ ಮಾತ್ರ ಭದ್ರತೆ ಇರುತ್ತದೆ. ಎಂಟ್ರಿ ಆದ ಮೇಲೆ ಯಾವುದೇ ಭದ್ರತೆಯನ್ನು ತೆಗೆದುಕೊಳ್ಳುವುದಿಲ್ಲ. ಉಳಿದ ಶಿಕ್ಷಕ, ಶಿಕ್ಷಕಿಯರು ಹೇಗೆ ಕಾಲೇಜಿಗೆ ಬರುತ್ತಾರೋ ಅದೇ ರೀತಿಯಲ್ಲಿ ಜಿಲ್‌ ಬೈಡನ್‌ ಬಂದು ಪಾಠ ಮಾಡುತ್ತಾರೆ. ಇದನ್ನು ನೋಡಿ ಕಾಲೇಜಿನ ವಿದ್ಯಾರ್ಥಿಗಳೇ ಅಚ್ಚರಿಕೊಂಡು ಬಿಟ್ಟಿದ್ದಾರೆ.

ಇತಿಹಾಸ ನಿರ್ಮಿಸಿದ ಜಿಲ್‌ ಬೈಡನ್‌

ಅಮೆರಿಕದ ಪ್ರಥಮ ಮಹಿಳೆ ಅದ್ರೆ ಎಲ್ಲರಲ್ಲಿಯೂ ಇರೋ ಕಲ್ಪನೆಯೇ ಬೇರೆ. ಆದ್ರೆ, ಜಿಲ್‌ ಬೈಡನ್‌ ಇರೋದೇ ಬೇರೆಯಾಗಿದೆ. ಇಲ್ಲಿಯವರೆಗೂ ಅಂದ್ರೆ ಅಮೆರಿಕ ಇತಿಹಾಸದಲ್ಲಿಯೇ ಪ್ರಥಮ ಮಹಿಳೆ ಉದ್ಯೋಗ ಮಾಡಿರುವ ಇತಿಹಾಸವೇ ಇರಲಿಲ್ಲ. ಅಧ್ಯಕ್ಷರ ಪತ್ನಿಯಾದವರು ಅಧ್ಯಕ್ಷರ ಜೊತೆ ಪ್ರವಾಸ ಹೋಗುವುದು, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು, ಸಭೆ ಸಮಾರಂಭಗಳಲ್ಲಿ ಭಾಗಿಯಾಗುವುದು ಮಾಡ್ತಾ ಇದ್ರು. ಆದ್ರೆ, ದೇಶದ ಪ್ರಥಮ ಮಹಿಳೆಯಾಗಿದ್ದು, ವೈಟ್‌ ಹೌಸ್‌ನಿಂದ ಉದ್ಯೋಗ ಮಾಡುತ್ತಿರೋ ಪ್ರಥಮರು ಅನ್ನೋ ದಾಖಲೆ ನಿರ್ಮಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ಪತ್ನಿ, ದೇಶದ ಪ್ರಥಮ ಮಹಿಳೆ ಅನ್ನೋ ಯಾವುದೇ ಹಮ್ಮು ಬಿಮ್ಮು ಜಿಲ್‌ ಬೈಡನ್‌ಗೆ ಇಲ್ಲವೇ ಇಲ್ಲ. ಇಂದಿಗೂ ಕಾಲೇಜಿಗೆ ಹೋಗಿ ಪಾಠ ಮಾಡ್ತಾರೆ ಅಂದ್ರೆ, ಅವರ ಸರಳತೆ ಹೇಗಿರಬಹುದು? ವೃತ್ತಿ ಧರ್ಮವನ್ನು ಅದೆಷ್ಟು ಹಚ್ಚಿಕೊಂಡಿರಬಹುದು ಅಲ್ವಾ? ನಿಜಕ್ಕೂ ಇದು ಅಚ್ಚರಿಯ ವಿಷಯವಾಗಿದೆ.

Source: newsfirstlive.com Source link