ಬೈಡೆನ್​ಗೆ ಭೂಮಿ ಮೇಲಲ್ಲ ಆಕಾಶದಲ್ಲೂ ರಕ್ಷಣೆ.. ಅಧ್ಯಕ್ಷರನ್ನ ನೆರಳಿನಂತೆ ಹಿಂಬಾಲಿಸುತ್ತಿರುವ ಹೆಲಿಕಾಫ್ಟರ್​ಗಳ ವಿಶೇಷತೆ ಏನು ಗೊತ್ತಾ?

ಬೈಡೆನ್​ಗೆ ಭೂಮಿ ಮೇಲಲ್ಲ ಆಕಾಶದಲ್ಲೂ ರಕ್ಷಣೆ.. ಅಧ್ಯಕ್ಷರನ್ನ ನೆರಳಿನಂತೆ ಹಿಂಬಾಲಿಸುತ್ತಿರುವ ಹೆಲಿಕಾಫ್ಟರ್​ಗಳ ವಿಶೇಷತೆ ಏನು ಗೊತ್ತಾ?

ಅಮೆರಿಕ ಅಧ್ಯಕ್ಷ ಜೋ ಬೈಡೆನ್​​ಗೆ ಬರೀ ಭೂಮಿ ಮೇಲೆ ಮಾತ್ರವಲ್ಲ. ಆಗಸದಲ್ಲೂ ರಕ್ಷಣೆ ನೀಡಲಾಗುತ್ತೆ. ಜೋ ಬೈಡೆನ್​​ ಅಮೆರಿಕದಲ್ಲೇ ಸುತ್ತಾಡಲಿ,ಇಲ್ಲಾ ವಿದೇಶ ಪ್ರವಾಸವೇ ಮಾಡಲಿ. ಅಲ್ಲೆಲ್ಲಾ ಈ ವಿಮಾನಗಳು ಆಗಸದಲ್ಲಿ ಕಣ್ಗಾವಲು ಇಡುತ್ತೆ.
ಜೋ ಬೈಡೆನ್​. ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಈ ಹೆಸರು. ಅಮೆರಿಕದಲ್ಲಿ ಸಂಚಲನದ ಮಾರುತವನ್ನೇ ಎಬ್ಬಿಸಿ 46ನೇ ಅಧ್ಯಕ್ಷರಾಗಿ ಸಿಂಹಾಸನದ ಮೇಲೆ ಕೂತ ಮೇಲಂತೂ ಬೈಡೆನ್​​ ಜಗತ್ತಿನಾದ್ಯಂತ ಫುಲ್ ಮನೆ ಮಾತಾಗಿದ್ದಾರೆ.

ಎತ್ತರದ ನಿಲುವು ಸೈನಿಕನ ಶಿಸ್ತು. ದೊಡ್ಡಣ್ಣನ ಪಟ್ಟ ಎಂಬ ಮುಕುಟಮನಿಯನ್ನ ಹೊತ್ತು ಎತ್ತ ಸಾಗಿದ್ರೂ ಕೂಡ ಈ ಬೈಡನ್​ಗೆ ವಿಶೇಷ ಸ್ಥಾನ ಇದ್ದೆ ಇರುತ್ತೆ. ಜಗತ್ತಿನ ಏನೇ ಮೇಜರ್ ಡೆವಲಪ್​​ಮೆಂಟ್ಸ್​ ನಡೆದ್ರೂ ಅಲ್ಲೆಲ್ಲ ಮೊದಲಿಗೆ ಕೇಳಿ ಬರುವ ಹೆಸರೇ ಜೋ ಬೈಡನ್​ದು.
ಅಫ್ಘಾನ್​ ಮೇಲೆ ತಾಲಿಬಾನ್​​ ದಾಳಿ ನಡೆಯಲು, ಇಲ್ಲಾ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಬಲಗೊಳ್ಳಲಿ. ಅಲ್ಲೆಲ್ಲಾ ದೊಡ್ಡಣ್ಣನ ಉಪಸ್ಥಿತಿಯನ್ನ ಜಗತ್ತು ಕೂಡ ಬಯಸುತ್ತೆ. ಜಗತ್ತಿಗೆ ದೊಡ್ಡಣ್ಣನ ಎನಿಸಿಕೊಂಡಿರುವ ಅಮೆರಿಕದ ಉಪಸ್ಥಿತಿಯೂ ಅಲ್ಲೆಲ್ಲಾ ವಿಶೇಷ ಸ್ಥಾನಗಳನ್ನ ಪಡೆದುಕೊಂಡಿದೆ.

ಅಮೆರಿಕ ಅಧ್ಯಕ್ಷರನ್ನ ನೆರಳಿನಂತೆ ಹಿಂಬಾಲಿಸುತ್ತಿರುವ ಹೆಲಿಕಾಫ್ಟರ್​

ಇಂತಹ ಅಮೆರಿಕ ದೇಶದ ಅಧ್ಯಕ್ಷರಾಗಿರುವ ಜೋ ಬೈಡೆನ್ ಅಂದ್ರೆ ಕೇಳ್ಬೇಕಾ. ? ದಿನನಿತ್ಯ ಹತ್ತಾರೂ ಓಡಾಟಗಳು ಅಲಿಖಿತ ನಿಯಮ ಎಂಬಂತ್ತಾಗಿದೆ. ಅಮೆರಿಕದಲ್ಲೂ ಮಾತ್ರವಲ್ಲದೇ ಅನ್ಯ ದೇಶಗಳಲ್ಲೂ ಜೊ ಬೈಡೆನ್​ ಬರ್ತಾರೆಂದ್ರೆ ಸಾಕು ಅಲ್ಲೆಲ್ಲಾ ಹೊಸ ಬಿಗಿ ಭದ್ರತೆಯ ವಾತಾವರಣ ಸೃಷ್ಟಿಯಾಗುತ್ತೆ. ಹೆಜ್ಜೆ ಹೆಜ್ಜೆಗೂ ಕಾವಲು ಪಡೆ ಇರುತ್ತೆ. ಜನರಿಗಿಂತ ಹೆಜ್ಜಾಗಿ ಕಾವಲು ಪಡೆಯು ಅತ್ಯಾಧುನಿಕ ವೆಪನ್ಸ್​​ಗಳೊಂದಿಗೆ ಜೋ ಬೈಡೆನ್​ ರಕ್ಷಣೆಗೆ ನಿಂತಿರ್ತಾರೆ.

ಅಮೆರಿಕ ಅಧ್ಯಕ್ಷ ಅಂದ್ರೆ ಕೇಳ್ಬೇಕಾ ಹೇಳಿ..? ಶತ್ರಗಳು ಕೂಡ ಮನೆಯ ಅಂಗಳದಲ್ಲಿ ಹೊಂಚು ಹಾಕಿ ಇರ್ತಾರೆ. ಶತ್ರಗಳ ರಣವ್ಯೂಹವನ್ನ ಬೇಧಿಸಿ ದಿನದ 24 ಗಂಟೆ ಕೂಡ ದೊಡ್ಡಣ್ಣನಿಗೆ ರಕ್ಷಣೆ ನೀಡಲು ಹತ್ತಾರು ಜನರಿರಬಹುದು. ಆದ್ರೆ ಆ ಹೆಲಿಕಾಫ್ಟರ್​​ಗಳು ಮಾತ್ರ ದೊಡ್ಡಣ್ಣನನ್ನ ಸದಾ ನೆರಳಿನಂತೆ ಹಿಂಬಾಲಿಸಿ ಸರ್ಪಗಾವಲು ಹಾಕಿ ರಕ್ಷಣೆ ನೀಡುತ್ತೆ.

ಆಗಸದಲ್ಲಿ ಹೆಲಿಕಾಫ್ಟರ್​​ಗಳು ಮೆರವಣಿಗೆ ಹಾಕಲು ಪ್ರಮುಖ ಕಾರಣ ಕೂಡ ಇದೆ. ಇವು ಸಾಮಾನ್ಯ ಹೆಲಿಕಾಫ್ಟರ್​ಗಳಲ್ಲ ಬದಲಾಗಿ. ವಿಶ್ವದ ದೊಡ್ಡಣ್ಣನ ಕಾವಲಿಗೆ ನಿಂತಿರುವ ಹೆಲಿಕಾಫ್ಟರ್​​ಗಳು.ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅದೆಲ್ಲಿಗೆ ಬೇಕಾದ್ರೂ ಹೋಗ್ಲಿ.. ದೊಡ್ಡಣ್ಣನಿಗೆ ಕಣ್ಗಾವಲು ಇದ್ದೆ ಇರುತ್ತೆ. ಜೋ ಬೈಡೆನ್ ಒಂದು ಕಡೆಗೆ ಹೋಗ್ತಾರೆಂದ್ರೆ ಸಾಕು, ಹತ್ತಾರು ವಾಹನಗಳು ಭೂಮಿ ಮೇಲೆ ಕೂಡ ದೊಡ್ಡಣ್ಣನಿಗೆ ಸರ್ಪಗಾವಲು ಹಾಕುತ್ತೆ. ವಿಶೇಷತೆ ಏನಂದ್ರೆ ದೊಡ್ಡಣ್ಣನಿಗೆ ಭೂಮಿ ಮೇಲೆ ಮಾತ್ರವಲ್ಲ. ಆಗಸದ ಮೇಲೂ ರಕ್ಷಣೇ ಇರುತ್ತೆ.

ಬೈಡೆನ್ ವಿದೇಶಿ ಪ್ರಯಾಣದ ವೇಳೆಯು ಹೆಲಿಕಾಫ್ಟರ್ ರಕ್ಷಣೆ

ಅಮೆರಿಕದಲ್ಲಿ ಮಾತ್ರವಲ್ಲ, ಜೋ ಬೈಡೆನ್ ವಿದೇಶಕ್ಕೆ ಪ್ರಯಾಣಿಸುವಾಗ ಹೆಲಿಕಾಪ್ಟರ್‌ಗಳು ಬೈಡೆನ್​ ಭದ್ರತೆಯ ಒಂದು ಭಾಗವಾಗಿ ಹೋಗಿದೆ. ಇದಕ್ಕೆ ಜೂನ್ 2021 ಇಂಗ್ಲೆಂಡ್​​ಗೆ ಭೇಟಿ ವೇಳೆ ಆಗಸದಲ್ಲಿ ಬಂದು ಹೆಲಿಕಾಫ್ಟರ್​ಗಳು ರಕ್ಷಣೆ ನೀಡಿದ್ದೆ ಸಾಕ್ಷಿ. ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬೋಯಿಂಗ್ C-17 ಗ್ಲೋಬ್ ಮಾಸ್ಟರ್ಸ್, ಯುನೈಟೆಡ್ ಸ್ಟೇಟ್ಸ್ ಮೆರೈನ್ ಕಾರ್ಪ್ಸ್ ಸಿಕೋರ್ಸ್ಕಿ VH-3D ಸೀಕಿಂಗ್ಸ್ ಇದೇ ಹೆಲಿಕಾಫ್ಟರ್​ಗಳು ದೊಡ್ಡಣ್ಣನ ರಕ್ಷಣೆಗೆ ನಿಂತಿರೋದು.

ಎರಡು ರಾಯಲ್ ಏರ್ ಫೋರ್ಸ್, ಎರಡು ರಾಷ್ಟ್ರೀಯ ಪೊಲೀಸ್ ಏರ್ ಸೇವೆ Eurocopter EC145, 658 ಸ್ಕ್ವಾಡ್ರನ್ ಆರ್ಮಿ ಏರ್ ಕಾರ್ಪ್ಸ್ ಯುರೋಕಾಪ್ಟರ್ AS365 ಡೌಫಿನ್ 2 ಮತ್ತು USAF ಬೋಯಿಂಗ್ 747 , ಸೇರಿದಂತೆ ಕೆಲ ವಿಮಾನಗಳು ವಿಶ್ವದ ದೊಡ್ಡಣ್ಣನ್ನ ಶತ್ರುಗಳ ವಿರುದ್ಧ ಆಗಸದಲ್ಲೂ ರಕ್ಷಣೆ ನೀಡುತ್ತೆ. ಫೋರ್ಡ್ F550, ಫೋರ್ಡ್ F350, ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವೀಸ್ ಮತ್ತು ವೈಟ್ ಹೌಸ್ ಕಮ್ಯುನಿಕೇಷನ್ಸ್ ಏಜೆನ್ಸಿ ಯ ಚೆವ್ರೊಲೆಟ್ ಎಕ್ಸ್‌ಪ್ರೆಸ್ ಟ್ರಕ್ ಕೂಡ ಸದಾ ಅಮೆರಿಕ ಅಧ್ಯಕ್ಷರ ಬೆನ್ನಿಗೆ ನಿಂತ್ತಿರುತ್ತೆ.

ಜೋ ಬೈಡೆನ್ ಕಾವಲಿಗೆ ಈ ನಿಂತಿರುವ ಈ ಹೆಲಿಕಾಫ್ಟರ್​​ಗಳು ಸದಾ ಶತ್ರುವಿನ ಚಲನ ವಲನದ ಬಗ್ಗೆ ನಿಗಾ ಇಟ್ಟಿರುತ್ತೆ.. ಜೋ ಬೈಡೆನ್​ ರಸ್ತೆಯಲ್ಲಿ ಸಂಚರಿಸುವ ವೇಳೆ ಯಾರಾದ್ರೂ ಹೊಂಚು ಹಾಕಿ ಸಂಚು ಹಾಕಿದ್ದಾರೆ ಅನ್ನೋದರ ಮಾಹಿತಿ ಕಲೆ ಹಾಕುತ್ತೆ. ಅಲ್ಲದೇ ಆಗಸದಲ್ಲೂ ಶತ್ರು ವಿಮಾನದ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನ ಇದು ಹೊಂದಿದೆ. ಅಲ್ಲದೆ ಜೋ ಬೈಡೆನ್​ ಸುತ್ತಲೂ ನೆರಳಿನಂತೆ ಪ್ರದಕ್ಷಿಣೆ ಹಾಕುವ ಈ ಹೆಲಿಕಾಫ್ಟರ್​ಗಳು ಅದಾಗ್ಲೆ ಭದ್ರತಾ ಸಿಬ್ಬಂದಿಯ ಜೊತೆಗೂ ನಿರಂತರ ಸಂಪರ್ಕ ಹೊಂದಿರ್ತಾರೆ.

ಯಾವುದೇ ಅಪಾಯದ ಮುನ್ಸೂಚನೆ ಸಿಕ್ಕಿದ್ರೆ ಕೂಡಲೇ ಇತರೆ ಭದ್ರತಾ ಸಿಬ್ಬಂದಿಗಳಿಗೂ ಮಾಹಿತಿ ನೀಡ್ತಾರೆ. ಹೀಗೆ ದೇಶ ವಿದೇಶಗಳಲ್ಲೂ ಅಮೆರಿಕ ಅಧ್ಯಕ್ಷರ ಕಾವಲಿಗೆ ನಿಂತಿರುವ ಈ ಯುದ್ಧ ವಿಮಾನಗಳು ಇದೀಗ ಸುದ್ದಿಯಲ್ಲಿದೆ. ಹೀಗೆ ವರ್ಷದ 365 ದಿನಗಳು ಕೂಡ ಅಮೆರಿಕ ಅಧ್ಯಕ್ಷರ ರಕ್ಷಣೆಗೆ ನಿಂತಿರುವ ಈ ಹೆಲಿಕಾಫ್ಟರ್​ಗಳು ಸದ್ದಿಲ್ಲದೆ ದೊಡ್ಡಣನ ಕಾವಲಿಗೆ ನಿಲ್ಲುವ ಮೂಲಕ ತನ್ನದೇ ಶೈಲಿಯಲ್ಲಿ ರಕ್ಷಣೇ ನೀಡುತ್ತಿದ್ದು,ಇವು ಜೋ ಬೈಡೆನ್​ ಗೆ ಮತ್ತಷ್ಟು ಧೈರ್ಯ, ಸ್ಥೈರ್ಯ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ..
ಅಮೆರಿಕ ಅಧ್ಯಕ್ಷರಿಗೆ ಆಗಸದಲ್ಲೂ ರಕ್ಷಣೆ ನೀಡುವ ಮೂಲಕ ಇದೀಗ ಈ ಹೆಲಿಕಾಫ್ಟರ್​ಗಳು ಎಲ್ಲೆಡೆ ಸುದ್ದಿಯಾಗಿದೆ. ಅಲ್ಲದೇ ಭೂಮಿಯ ಮೇಲೆ ಮಾತ್ರವಲ್ಲದೇ ಆಕಾಶದಲ್ಲೂ ರಕ್ಷಣೇ ಹೊಂದುವ ಮೂಲಕ ಬೈಡೆನ್ ಹೊಸ ಛಾಪು ಮೂಡಿಸಿರುವುದಂತು ಸುಳ್ಳಲ್ಲ.

Source: newsfirstlive.com Source link