ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಎಲ್ಲಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ.

4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಬಳಿಕ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಜಾರ್ಖಂಡ್ ತಂಡದ ಯಶಸ್ಸು- ಬಿಸಿಸಿಐ ಪ್ಲ್ಯಾನ್ ಧೋನಿ ಟೀಂ ಇಂಡಿಯಾ ಮೆಂಟರ್

ನಿನ್ನೆ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಭಾರತದ ಅಭ್ಯಾಸವನ್ನು ಮೊಟಕುಗೊಳಿಸಲಾಗಿತ್ತು. ಹಾಗಾಗಿ ಇಂದಿನ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಂಕ ಆವರಿಸಿತ್ತು. ಆದರೆ ಆ ಬಳಿಕ ನಡೆದ ಕೊರೊನಾ ಟೆಸ್ಟ್ ನಲ್ಲಿ ಎಲ್ಲಾ ಆಟಗಾರರ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

blank

ಓವೆಲ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಇದೀಗ ಐದನೇ ಹಾಗೂ ಅಂತಿಮ ಪಂದ್ಯಕ್ಕೆ ತಂಡ ಸಿದ್ಧಗೊಂಡಿದ್ದು, ಪಂದ್ಯದಲ್ಲಿ ಗೆಲುವಿನ ಮೂಲಕ ಸರಣಿ ಗೆಲ್ಲುವ ತವಕದಲ್ಲಿದೆ. ಅತ್ತ ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದೆ.

Source: publictv.in Source link