ಜಾತಿ ಸಮೀಕ್ಷೆಯ ವಿಚಾರದ ಪ್ರಸ್ತಾಪ ಬೇಡವೇ ಬೇಡ.. ಕೈ, ಕಮಲ, ದಳ ಲಿಂಗಾಯತರ ಮೌನ!

ಜಾತಿ ಸಮೀಕ್ಷೆಯ ವಿಚಾರದ ಪ್ರಸ್ತಾಪ ಬೇಡವೇ ಬೇಡ.. ಕೈ, ಕಮಲ, ದಳ ಲಿಂಗಾಯತರ ಮೌನ!

ಕಾಂಗ್ರೆಸ್​​ನಲ್ಲಿ ಜಾತಿ ಗಣತಿ ಸಂಘರ್ಷ ತಾರಕಕ್ಕೇರಿದೆ. ಇದರ ಸಹವಾಸವೇ ಬೇಡ ಅಂತ ಲಿಂಗಾಯತ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಕೈ, ಕಮಲ, ದಳ ಸೇರಿ ಎಲ್ಲಾ ಲಿಂಗಾಯತ ನಾಯಕರೂ ಸೈಲೆಂಟ್​​​ ಆಗ್ಬಿಟ್ಟಿದ್ದಾರೆ.

ಕಾಂಗ್ರೆಸ್​​​​ನಲ್ಲಿ ಜಾತಿ ಗಣತಿ ಸಂಘರ್ಷ ಮುಗಿಲು ಮುಟ್ಟಿದೆ. ಆದ್ರೆ ಕೈ ಸೇರಿದಂತೆ ಕಮಲ, ದಳದ ಲಿಂಗಾಯತ ನಾಯಕರು ಮಾತ್ರ ದಿಢೀರ್ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಲಿಂಗಾಯತ ನಾಯಕರು, ಜಾತಿ ಸಮೀಕ್ಷೆ ಬಹಿರಂಗ ವಿಚಾರ ಬೇಡವೇ ಬೇಡ ಎಂದ ಅಂತರ ಕಾಯ್ದುಕೊಂಡಿದ್ದಾರೆ.

ಜಾತಿಗಣತಿ ಅನುಷ್ಠಾನ ಬಗ್ಗೆ ಕಾಂಗ್ರೆಸ್​​ ಸೀನೆದ್ರೆ, ಉಳಿದೆರಡು ಪಕ್ಷಗಳಲ್ಲೂ ಶೀತ ಆವರಿಸಿದೆ. ಈ ಗಣತಿ ಕೇವಲ ಕೈಯನ್ನಷ್ಟೇ ಸುಡ್ತಿಲ್ಲ. ಅದರ ವ್ಯಾಪ್ತಿ ಉಳಿದೆರಡೂ ಪಕ್ಷಗಳಿಗೂ ಮತ್ತಷ್ಟೂ ಮೊಗದಷ್ಟೂ ಹಿರಿದಾಗುತ್ತಾ ಸಾಗ್ತಿದೆ. ಲಿಂಗಾಯತ ನಾಯಕರು ಈ ವಿಚಾರದಲ್ಲಿ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.

ಜಾತಿ ಗಣತಿ ವಿಚಾರದಿಂದ ಲಿಂಗಾಯತ ನಾಯಕರು ದೂರ
ಜಾತಿಗಣತಿ ಸಿದ್ದರಾಮಯ್ಯ ಸೃಷ್ಟಿಸಿದ ಸಾಮಾಜಿಕ ಕ್ರಾಂತಿ. ಈ ಕ್ರಾಂತಿ ಉಳಿದ ಮೇಲ್ಜಾತಿಗಳ ಸಿಟ್ಟು ಆಕ್ರೋಶಗಳಿಗೆ ತುತ್ತಾಗಿದೆ. ಸಿದ್ದರಾಮಯ್ಯ ಸುತ್ತವೇ ಸುತ್ತುತ್ತಿದ್ದ ಕಾಂಗ್ರೆಸ್​​​ನ ಹಲವು ಲಿಂಗಾಯತ ನಾಯಕರು ಈ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಕಾಂಗ್ರೆಸ್​​​ನ ಕಥೆಯಾದ್ರೆ ಬಿಜೆಪಿ ಹಾಗೂ ಜೆಡಿಎಸ್​​​​ ಇದರ ಸಹವಾಸವೇ ಬೇಡ ಅನ್ನೋ ನಿಲುವಿಗೆ ಬಂದಿದೆ.

ಜಾತಿ ಗಣತಿ ವಿಚಾರದಲ್ಲಿ ಲಿಂಗಾಯತ ನಾಯಕರು ಮಹಾ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಜಾತಿ ಗಣತಿ ವರದಿಯಿಂದ ಲಿಂಗಾಯತ ನಾಯಕರು ದೂರ ಉಳಿದುಬಿಟ್ಟಿದ್ದಾರೆ. ಕೈ, ಕಮಲ, ದಳ ಸೇರಿ ಎಲ್ಲಾ ಲಿಂಗಾಯತ ನಾಯಕರೂ ಸೈಲೆಂಟ್​​​ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಲಿಂಗಾಯತ ನಾಯಕರು, ಜಾತಿ ಸಮೀಕ್ಷೆ ಬಹಿರಂಗ ವಿಚಾರ ಬೇಡವೇ ಬೇಡ ಅಂತ ಅಂತರ ಕಾಯ್ದುಕೊಂಡಿದ್ದಾರೆ.

ಅಷ್ಟಕ್ಕೂ ಜಾತಿ ಗಣತಿ ವಿಚಾರದಿಂದ ಲಿಂಗಾಯತ ನಾಯಕರು ದೂರ ಸರಿಯುತ್ತಿರೋದ್ಯಾಕೆ? ಲಿಂಗಾಯತ ನಾಯಕರ ದಿಢೀರ್​​​​ ಮೌನಕ್ಕೆ ಕಾರಣಗಳೇನು? ವಿವಾದದಲ್ಲಿ ಸಿಲುಕೋದು ಬೇಡ ಎಂಬ ನಿರ್ಧಾರಕ್ಕೆ ಬಂದ್ರಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

ಲಿಂಗಾಯತ ನಾಯಕರ ಒಳ ಸಂಕಟ..!

ಈಗಾಗಲೇ ಲಿಂಗಾಯತ ಸಮುದಾಯದಲ್ಲಿ ಹಲವು ಗೊಂದಲಗಳಿವೆ. ಪಂಚಮಸಾಲಿ ಮೀಸಲಾತಿ ಹೋರಾಟ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪಂಚಮಸಾಲಿ ಪ್ರತ್ಯೇಕ ಪೀಠ ಸ್ಥಾಪನೆ ಬಗ್ಗೆಯೂ ಚರ್ಚೆಯಾಗ್ತಿದೆ. ಇದರ ನಡುವೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್​​​​ಗೆ ಸಾಕಷ್ಟು ಪೆಟ್ಟು ಬಿದ್ದಿದೆ ಮತ್ತು ಬೀಳುತ್ತೆ ಕೂಡ. ಹೀಗಾಗಿ ಸಮೀಕ್ಷೆಯಿಂದ ಆಗಬಹುದಾದ ಅನಾಹುತಗಳಿಗೆ ಹೊಣೆ ಯಾರು ಅನ್ನೋ ಪ್ರಶ್ನೆ ಎದ್ದಿದ್ದು, ಭವಿಷ್ಯದಲ್ಲಿ ರಾಜಕೀಯವಾಗಿ ಹಿನ್ನಡೆ ಅನುಭವಿಸುವ ಆತಂಕ ಲಿಂಗಾಯತ ನಾಯಕರನ್ನು ಕಾಡ್ತಿದೆ.

ಒಟ್ಟಾರೆ ಈ ಲಡಾಯಿ ಧರ್ಮ ಸೂಕ್ಷ್ಮವಾಗಿದ್ದು, ಲಿಂಗಾಯತ ನಾಯಕರು ಎಚ್ಚರಿಕೆಯ ಹೆಜ್ಜೆ ಇಡ್ತಿದ್ದಾರೆ. ಭವಿಷ್ಯದಲ್ಲಿನ ಪರಿಣಾಮ ಬಗ್ಗೆ ಪೂರ್ವಾಲೋಚನೆ ಮಾಡಿ, ವರದಿ ಬಹಿರಂಗಕ್ಕೆ ಆಗ್ರಹಿಸಿದ್ರೆ ರಾಜಕೀಯ ಪೆಟ್ಟು ಬೀಳುತ್ತೆ ಅನ್ನೋ ಆತಂಕದಲ್ಲಿದ್ದಂತೆ ಕಾಣಿಸ್ತಿದೆ.

ವಿಶೇಷ ವರದಿ: ಶಿವಪ್ರಸಾದ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​

Source: newsfirstlive.com Source link