ನೂರಾರು ಕೋಟಿ ಟೆಂಡರ್ ವಂಚನೆ ಪ್ರಕರಣ- ಐಷಾರಾಮಿ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಾಲೀಕ

ಬೆಂಗಳೂರು: RC ಹಾಗೂ ಇತರ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿದ್ಧಪಡಿಸುವ ಟೆಂಡರ್ ಮೂಲಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಂಚನೆಗೊಳಗಾದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ವಿವೇಕ್ ನಾಗಪಾಲ್ ಬಂಧಿತ ಆರೋಪಿ. ಈ ಹಿಂದೆ ರೋಸ್ ಮರ್ಟಾ ಟೆಕ್ನಾಲಜೀಸ್ ಹೆಸರಿನ ಕಂಪೆನಿ, DL, RC ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿದ್ಧಪಡಿಸುವ ಟೆಂಡರ್ ಪಡೆದಿತ್ತು. ಅದರ ಮೂಲಕ ವಿವಿಧ ಪ್ರಾಜೆಕ್ಟ್ ಕೊಡುವುದಾಗಿ ನಂಬಿಸಿ, ಪ್ರಮುಖ ಆರೋಪಿ ವಿವೇಕ್ ನಾಗಪಾಲ್ 2016 ರಲ್ಲಿ ಸಾಕಷ್ಟು ಹೂಡಿಕೆದಾರರಿಂದ ಕೋಟಿ-ಕೋಟಿ ಹಣ ಪಡೆದಿರುವ ಆರೋಪ ಕೇಳಿ ಬಂದಿತ್ತು. ಬಳಿಕ ಪ್ರಾಜೆಕ್ಟ್ ಕೂಡ ಕೊಟ್ಟಿಲ್ಲ, ಹಾಗೆಯೇ ಕೊಟ್ಟ ಹಣ ವಾಪಸ್ ನೀಡದೇ ಇದ್ದಾಗ ಈ ಕೇಸ್ ಪೊಲೀಸ್  ಠಾಣೆ ಮೆಟ್ಟಿಲೇರಿತ್ತು. ಬಳಿಕ ಬಹುಕೋಟಿ ವಂಚನೆ ಆರೋಪದಡಿ ಈ ಕೇಸ್, ಸಿಐಡಿಗೆ ವರ್ಗಾವಣೆಯಾಗಿತ್ತು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಚ್ಚಾ ಎಂದಿದ್ದಕ್ಕೆ ಜೋಡಿ ಕೊಲೆ – ಆರೋಪಿಗಳ ಬಂಧನ

ಇದಾದ ಬಳಿಕ ಆರೋಪಿ ವಿವೇಕ್ ನಾಗಪಾಲ್ ಪೊಲೀಸರಿಗೆ ಸಿಕ್ಕಿರಲಿಲ್ಲ. ಇದೇ ಕೇಸ್ ಕುರಿತು ವಂಚನೆಗೊಳಗಾದವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಈ ಮಧ್ಯೆ, ವಂಚನೆಗೊಳಗಾದ ಹೂಡಿಕೆದಾರರು, ನಿನ್ನೆ ಖಾಸಗಿ ಫೈವ್ ಸ್ಟಾರ್ ಹೊಟೇಲ್‍ನಲ್ಲಿ ವಿವೇಕ್ ನಾಗಪಾಲ್ ನನ್ನು ನೋಡಿದ್ದರು, ನಂತರ ಸಿಐಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ಬಳಿಕ ಸ್ಥಳೀಯ ಹೈಗ್ರೌಂಡ್ಸ್ ಪೊಲೀಸರಿಗೆ ವಂಚನೆಗೊಳಗಾದವರೇ ವಿವೇಕ್ ನಾಗಪಾಲ್ ನನ್ನು ಹಿಡಿದು ಒಪ್ಪಿಸಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು

Source: publictv.in Source link