ಐತಿಹಾಸಿಕ ದಾಖಲೆ ಬರೆಯುವ ಹೊಸ್ತಿಲಲ್ಲಿರುವ ಭಾರತಕ್ಕೆ ಆಘಾತ.. ಕೊಹ್ಲಿ ತಂಡಕ್ಕೆ ಕಾಡ್ತಿದೆ ಇಂಜುರಿ ಸಮಸ್ಯೆ

ಐತಿಹಾಸಿಕ ದಾಖಲೆ ಬರೆಯುವ ಹೊಸ್ತಿಲಲ್ಲಿರುವ ಭಾರತಕ್ಕೆ ಆಘಾತ.. ಕೊಹ್ಲಿ ತಂಡಕ್ಕೆ ಕಾಡ್ತಿದೆ ಇಂಜುರಿ ಸಮಸ್ಯೆ

ಮ್ಯಾಂಚೆಸ್ಟರ್​​​​ನ ಓಲ್ಡ್​ ಟ್ರಾಫರ್ಡ್​​​​ನಲ್ಲಿ ಇಂದಿನಿಂದ ಇಂಡೋ – ಇಂಗ್ಲೆಂಡ್​ ನಡುವಿನ ಐದನೇ ಟೆಸ್ಟ್​​ ಆರಂಭವಾಗಲಿದೆ. ಈ ಪಂದ್ಯ ಗೆದ್ದು ಸರಣಿ ಜಯಿಸಿ ಐತಿಹಾಸಿಕ ದಾಖಲೆ ಬರೆಯೋದಕ್ಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಅನುಭವಿ ವೇಗಿ ಮೊಹಮದ್​ ಶಮಿ ಫಿಟ್​ ಆಗಿದ್ದಾರೆ ಕೊಹ್ಲಿ ಪಡೆಯ ಶಕ್ತಿಯನ್ನ ಬೂಸ್ಟ್​ ಅಪ್​ ಮಾಡಿದೆ. ಗಾಯದ ಸಮಸ್ಯೆಯಿಂದ ನಾಲ್ಕನೇ ಟೆಸ್ಟ್​ನಿಂದ ಹೊರಬಿದ್ದಿದ್ದ ಫುಲ್​ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಿದ್ದಾರೆ. ಆದ್ರೆ, ಇನ್​ ಫಾರ್ಮ್​ ಬ್ಯಾಟ್ಸ್​ಮನ್​ಗಳು ಅನ್​ಫಿಟ್​​ ಆಗಿರೋದು ಕೊಹ್ಲಿ ಪಡೆಗೆ ಹಿನ್ನಡೆಯಾಗಿದೆ.

ರೋಹಿತ್​ – ಪೂಜಾರ ಅನ್​ಫಿಟ್​​, ಕಣಕ್ಕಿಳಿಯೋದು ಅನುಮಾನ.?
ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್‌ ಶರ್ಮ ಮತ್ತು ಚೇತೇಶ್ವರ ಪೂಜಾರ ಕ್ರಮವಾಗಿ ಮಂಡಿ ಹಾಗೂ ಪಾದದ ನೋವಿಗೆ ಸಿಲುಕಿದ್ದಾರೆ. ವೈದ್ಯಕೀಯ ತಂಡ ಇವರ ಮೇಲೆ ತೀವ್ರ ನಿಗಾ ಇರಿಸಿದೆ. ನಾಲ್ಕನೇ ಟೆಸ್ಟ್​​ನ 2ನೇ ಇನ್ನಿಂಗ್ಸ್​​​ನಲ್ಲಿ ಮ್ಯಾಚ್​ ಟರ್ನಿಂಗ್​ ಇನ್ನಿಂಗ್ಸ್​ ಕಟ್ಟಿದ ಈ ಇಬ್ಬರು ಇಂಜುರಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ ಅನ್ನೋದು ತಂಡದ ಮೂಲದ ಸುದ್ದಿಯಾಗಿದೆ.

ಒಂದು ವೇಳೆ ರೋಹಿತ್‌ ಫಿಟ್‌ ಆಗದೇ ಹೋದರೆ ಮಾಯಾಂಕ್‌ ಅಥವಾ ಪೃಥ್ವಿ ಶಾ ಗೆ ಮ್ಯಾನೇಜ್​ಮೆಂಟ್​ ಮಣೆ ಹಾಕೋ ಲೆಕ್ಕಾಚಾರದಲ್ಲಿದೆ. ಇನ್ನು ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ ಅಲಭ್ಯರಾದ್ರೆ, ವಿಹಾರಿ ಅಥವಾ ಸೂರ್ಯಕುಮಾರ್‌ಗೆ ಸ್ಥಾನ ಲೆಕ್ಕಾಚಾರವೂ ನಡೆದಿದೆ.

ಫಾಸ್ಟ್​ ಟ್ರ್ಯಾಕ್​​ನಲ್ಲಿ ಫಿಟ್​ ಆದ ಶಮಿಗೆ ಸಿಗುತ್ತಾ ಸ್ಥಾನ.?
ಗಾಯಾಳಾಗಿ ಓವೆಲ್ ​​​ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ವೇಗಿ ಮೊಹಮ್ಮದ್‌ ಶಮಿ, ಈಗ ಫಿಟ್​ ಆಗಿದ್ದು, ಅಂತಿಮ ಟೆಸ್ಟ್‌ನಲ್ಲಿ ಆಡುವ ಬಳಗಕ್ಕೆ ಮರಳುವುದು ಬಹುತೇಕ ಖಚಿತ ಎನ್ನಲಾಗಿದೆ. ಅನಿವಾರ್ಯದ ಪಂದ್ಯದಲ್ಲಿ ಅನುಭವಿ ವೇಗಿಗೆ ಮಣೆ ಹಾಕೋದು ಮ್ಯಾನೇಜ್​ಮೆಂಟ್ ಪ್ಲಾನ್​ ಆಗಿದೆ. ಇದರ ಜೊತೆಗೆ ಸತತ ನಾಲ್ಕು ಟೆಸ್ಟ್‌ ಆಡಿರುವ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಮುಂಬರುವ ಐಪಿಎಲ್, ಟಿ20 ವಿಶ್ವಕಪ್‌ ಟೂರ್ನಿ ದೃಷ್ಟಿಯಿಂದ ಬೂಮ್ರಾ ಮೇಲಿನ ಹೊರೆ ಇಳಿಸಲು ಮ್ಯಾನೇಜ್​ಮೆಂಟ್​ ಮುಂದಾಗಿದೆ.

Source: newsfirstlive.com Source link